- ರಿಲ್ಯಾಕ್ಸ್ ಜೊತೆಗೆ ಗೆಲುವಿನ ಬಗ್ಗೆ ಲೆಕ್ಕಾಚಾರದಲ್ಲಿ ಮುಳುಗಿದ ಅಭ್ಯರ್ಥಿಗಳು । ಪತ್ರಿಕೆಗಳ ಮೇಲೆ ಕಣ್ಣಾಡಿಸಿ ಚರ್ಚೆ
ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭೆ ಕ್ಷೇತ್ರದ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಬಿಡುವಿಲ್ಲದೇ ಅವಿರತ ಪ್ರಚಾರ, ಸುತ್ತಾಟದಲ್ಲಿ ಕಳೆದಿದ್ದವರು ಬುಧವಾರ ಒಂದಿಷ್ಟು ನಿರಮ್ಮಳರಾಗಿದ್ದರು.ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಪತ್ನಿ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬೆಳಗ್ಗೆ ಕಾಲೇಜು ಕ್ಯಾಂಪಸ್‌ನಲ್ಲಿ ವಾಕ್ ಮುಗಿಸಿಕೊಂಡು, ನಂತರ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಅಲ್ಲದೇ, ಬೆಳಂಬೆಳಗ್ಗೆಯೇ ಯಾವ್ಯಾವ ವಿಧಾನಸಭಾ ಕ್ಷೇತ್ರ, ನಗರ, ಪಟ್ಟಣ, ಗ್ರಾಮಗಳಲ್ಲಿ ಮತದಾರರ ಪ್ರತಿಕ್ರಿಯೆ ಮತದಾನದ ನಂತರ ಹೇಗಿದೆ, ವಾತಾವರಣ ಹೇಗಿದೆಯೆಂಬ ಬಗ್ಗೆ ವಿಚಾರಿಸಿದರು.
ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ:
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರಂತೂ ದಾವಣಗೆರೆಯಲ್ಲಿ ಈ ಸಲ ಗೆದ್ದೇ ಗೆಲ್ಲುತ್ತೇವೆಂಬ ದೃಢ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಶಾಸಕ ಶಾಮನೂರು ಶಿವಶಂಕರಪ್ಪ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ರು.ಗೆ ನೂರು ರು. ಕೊಡುತ್ತೇನೆ. ಯಾರಿದ್ದೀರಿ? ದಾವಣಗೆರೆಯಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾಖಲೆ ಮತಗಳ ಅಂತರದಲ್ಲಿ ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆ, ಜನಪರ ಕಾರ್ಯ ಕೈ ಹಿಡಿದು ಗೆಲ್ಲಿಸುತ್ತೇವೆ. ಇಲ್ಲಿ ವಾಜಪೇಯಿ, ಮೋದಿ ಅಲೆ ಇಲ್ಲ. ಇರೋದು ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆ ಅಲೆ ಮಾತ್ರ ಎಂದಿದ್ದಾರೆ.
ಇನ್ನು ಕಾಂಗ್ರೆಸ್-ಬಿಜೆಪಿ ಪಾಲಿಗೆ ಬಿಸಿತುಪ್ಪವೇ ಆಗಿದ್ದ, ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಜಿ.ಬಿ.ವಿನಯಕುಮಾರ ಸಹ ಚುನಾವಣೆಯಿಂದ ಬಿಡುವು ಸಿಕ್ಕಿತೆಂದು ಮೈಮರೆಯದೇ, ಎಂದಿನಂತೆ ತಮ್ಮ ದೈನಂದಿನ ಕಾರ್ಯದಲ್ಲಿ ಮಗ್ನರಾಗಿದ್ದರು. ಎಸ್.ಎಸ್. ಬಡಾವಣೆಯ ತಮ್ಮ ನಿವಾಸದಲ್ಲಿ ಬೆಂಬಲಿಗರು, ಹಿತೈಷಿಗಳ ಸಭೆ ನಡೆಸಿದರು. ಚುನಾವಣೆಯಲ್ಲಿ ಏನೆಲ್ಲಾ ಆಯಿತೆಂಬ ಬಗ್ಗೆ ಸಮಾಲೋಚನೆ ನಡೆಸಿದರು. ಕಳೆದೊಂದು ತಿಂಗಳಿನಿಂದ ಮತದಾರರು ಒಂದೊಳ್ಳೆಯ ಫಲಿತಾಂಶದ ಭರವಸೆ ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.
ಮಾಯಕೊಂಡ ಶಾಸಕರೂ ಬ್ಯುಸಿ:
ದಿನವಿಡೀ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು, ಕಾಂಗ್ರೆಸ್ಸಿನ ಮಿತ್ರಪಕ್ಷ, ಬೆಂಬಲ ಘೋಷಿಸಿದ್ದ ಸಂಘಟನೆಗಳು ಚುನಾವಣೆ ಗೆಲುವಿನ ಬಗ್ಗೆ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದವು.
-8ಕೆಡಿವಿಜಿ7, 8: ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕನ್ನಡಪ್ರಭದಲ್ಲಿ ರಾಜಕೀಯ ಸುದ್ದಿಗಳ ಮೇಲೆ ಕಣ್ಣಾಡಿಸುತ್ತಿರುವುದು. ಸಂಸದ ಜಿ.ಎಂ. ಸಿದ್ದೇಶ್ವರ ಸಹ ಪಕ್ಷದ ಮುಖಂಡರೊಂದಿಗೆ ಚುನಾವಣೆ ಬಗ್ಗೆ ಚರ್ಚಿಸುತ್ತಾ ಪತ್ರಿಕೆ ಓದುತ್ತಿರುವುದು.
- - --8ಕೆಡಿವಿಜಿ9, 10:
ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ವಿವಿಧ ಕ್ಷೇತ್ರದ ಮುಖಂಡರಿಂದ ಚುನಾವಣೆ ಬಗ್ಗೆ ಮಾಹಿತಿ ಪಡೆಯುತ್ತಿರುವುದು.- - -
-8ಕೆಡಿವಿಜಿ11, 12:ದಾವಣಗೆರೆಯ ಎಸ್ಸೆಸ್ ಲೇಔಟ್ ನ ತಮ್ಮ ನಿವಾಸದಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ತಮ್ಮ ಬೆಂಬಲಿಗರು, ಸಂಘ ಸಂಸ್ಥೆಯವರ ಜೊತೆಗೆ ಚರ್ಚಿಸುತ್ತಿರುವುದು.