ಹಕ್ಕು ಚಲಾಯಿಸಿದ ವಿಶೇಷಚೇತನರು, ಮಂಗಳಮುಖಿಯರು, ಶತಾಯುಷಿಗಳು । ಪ್ರಥಮ ಬಾರಿಗೆ ಮತದಾನ ಮಾಡಿ ಸಂತಸ ಪಟ್ಟ ಯುವಕರುಕನ್ನಡಪ್ರಭ ವಾರ್ತೆ ಕುಕನೂರು
ವಿಶೇಷ ಚೇತನರು, ಹಿರಿಯ ನಾಗರಿಕರು, ಮಹಿಳೆಯರು, ಯುವ ಮತದಾರರು ಹೀಗೆ ಅನೇಕರು ತಮ್ಮ ಹಕನ್ನು ಚಲಾವಣೆ ಮಾಡಿದರು.
ಮಂಗಳಮುಖಿ ಮತದಾನ:ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮಂಗಳಮುಖಿ ಫಕೀರಪ್ಪ ಕನಕಪ್ಪ ಕದ್ರಳ್ಳಿ ಮತದಾನ ಮಾಡಿದರು. ಎಲ್ಲರಂತೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಇತರರಿಗೆ ಪ್ರೇರಣೆಯಾದರು. ಮತದಾನದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ನರೇಗಾ ಯೋಜನೆಯ ಕಾಮಗಾರಿಯಲ್ಲಿ ಪಾಲ್ಗೊಳ್ಳಲು ವಿಶೇಷ ಜಾಬ್ ಕಾರ್ಡ್ ಪಡೆದಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು, ಗಂಡು ಹೆಣ್ಣು ಭೇದವಿಲ್ಲದೇ ಎಲ್ಲರೂ ಮತದಾನ ಮಾಡಬೇಕು. ನನ್ನಂತ ಮಂಗಳಮುಖಿಯರೂ ಸಹ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮಂಗಳಮುಖಿ ಫಕೀರಪ್ಪ ಕದ್ರಳ್ಳಿ ಅನಿಸಿಕೆ ವ್ಯಕ್ತಪಡಿಸಿದರು.ಮೊದಲ ಸಲ ಮತದಾನ:
ತಾಲೂಕಿನ ಇಟಗಿ ಗ್ರಾಮದಲ್ಲಿ ಹೆತ್ತವರೊಡನೆ ಮೊದಲ ಸಲ ಮತದಾನ ಮಾಡಿ ಸಂತಸ ಹಂಚಿಕೊಂಡು, ಮತದಾನ ಒಂದು ಪವಿತ್ರ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದು ಸಾಕಾರಗೊಳಿಸುತ್ತದೆ. ಮೊದಲ ಸಲ ಮತದಾನ ಮಾಡಿರುವ ಈ ದಿನ ಎಂದಿಗೂ ಮರೆಯಲಾಗದು. ದೇಶ ಸೇವೆಗೆ ನನ್ನ ಮತದಾನ ಸಹ ಒಂದು ಶಕ್ತಿಯಾಗಲಿದೆ ಎಂಬ ಭಾವ ನನ್ನಲ್ಲಿ ಮೂಡಿದೆ ಎಂದಳು.
ಶತಾಯುಷಿ ಮತದಾನ:
ನೀಲಕಂಠಯ್ಯ ಹಿರೇಮಠ ಸಂಬಂಧಿಯೊಬ್ಬರ ಸಹಾಯದೊಂದಿಗೆ ಬಂದು ಮತ ಚಲಾಯಿಸಿದರು. ಮನೆಯಲ್ಲಿ ಮತದಾನಕ್ಕೆ ಅವಕಾಶ ಇದ್ದರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಇಳಿ ವಯಸ್ಸಿನಲ್ಲಿ ಕೂಡಾ ಬಂದು ಮತದಾನ ಮಾಡಿ ಎಲ್ಲರಿಗೂ ಆದರ್ಶರಾದರು.