ಕನ್ನಡಪ್ರಭ ವಾರ್ತೆ ಮಡಿಕೇರಿ
ಮನೆಯಿಂದಲೆ ಮತದಾನ (ಹೋಮ್ ವೋಟಿಂಗ್) ಕಾರ್ಯಕ್ಕೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ವರ್, ಬಿಎಲ್‌ಓ, ವಿಡಿಯೋ ಗ್ರಾಫರ್ ಹಾಗೂ ಸೆಕ್ಟರ್ ಅಧಿಕಾರಿಗಳನ್ನೊಳಗೊಂಡ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 22 ಮಾರ್ಗಗಳಲ್ಲಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 21 ಮಾರ್ಗಗಳಲ್ಲಿ ಏ. 15, ಏ.16 ಮತ್ತು ಏ.17 ರಂದು ಮನೆ ಮನೆಗೆ ತೆರಳಿ ಗೈರು ಹಾಜರಿ ಮತದಾರರಿಂದ ಮತದಾನ ಮಾಡಿಸುವ ಕರ್ತವ್ಯ ನಿರ್ವಹಿಸುತ್ತಿವೆ.
ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಗುರುತಿಸಲಾದ 5689 ಹಿರಿಯ ನಾಗರಿಕರ (ಎವಿಎಸ್‌ಸಿ) ಪೈಕಿ 1474 ಮಂದಿ 12ಡಿ ನಮೂನೆಯಲ್ಲಿ ಮನೆ ಮತದಾನ (ಹೋಮ್ ವೋಟಿಂಗ್) ಗೆ ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ 601 ಮತ ಚಲಾವಣೆ ಆಗಿದ್ದು, ಶೇ.40.77 ರಷ್ಟು ಮತದಾನವಾಗಿರುತ್ತದೆ.ವಿಕಲಚೇತನ(ಎವಿಪಿಡಿ) ಮತದಾರರ ಪೈಕಿ ಗುರುತಿಸಲಾದ 4383 ಮತದಾರರಲ್ಲಿ 643 ಮಂದಿ 12ಡಿ ನಮೂನೆಯಲ್ಲಿ ಹೋಂ ವೋಟಿಂಗ್‌ಗೆ ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ 264 ಮತ ಚಲಾವಣೆ ಆಗಿದ್ದು, ಶೇ. 41.06 ರಷ್ಟು ಮತದಾನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.