ವಾಡಿ ಪುರಸಭೆ ಯೋಜನಾಧಿಕಾರಿಚಂದ್ರಕಾಂತ ಲೋಕಾಯುಕ್ತ ಬಲೆಗೆ

KannadaprabhaNewsNetwork | Published : Nov 23, 2024 12:34 AM

ಸಾರಾಂಶ

ಪಿಎಂ ಸ್ವನಿಧಿ ಯೋಜನೆಯಲ್ಲಿ ಮಂಜೂರಾದ ಹಣ ಫಲಾನುಭವಿಗಳಿಗೆ ನೀಡಲು ಲಂಚ ಕೇಳಿ, ಅದನ್ನು ಫೋನ್‌ ಪೇ ಮೂಲಕವಾಗಿ ಪಡೆಯುವಾಗ ವಾಡಿ ಪುರಸಭೆ ಯೋಜನಾಧಿಕಾರಿ ಚಂದ್ರಕಾಂತ ಪಾಟೀಲ್‌ ಲೋಕಾ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ, ಕಲಬುರಗಿ ವಾಡಿ.ಪಿಎಂ ಸ್ವನಿಧಿ ಯೋಜನೆಯಲ್ಲಿ ಮಂಜೂರಾದ ಹಣ ಫಲಾನುಭವಿಗಳಿಗೆ ನೀಡಲು ಲಂಚ ಕೇಳಿ, ಅದನ್ನು ಫೋನ್‌ ಪೇ ಮೂಲಕವಾಗಿ ಪಡೆಯುವಾಗ ವಾಡಿ ಪುರಸಭೆ ಯೋಜನಾಧಿಕಾರಿ ಚಂದ್ರಕಾಂತ ಪಾಟೀಲ್‌ ಲೋಕಾ ಬಲೆಗೆ ಬಿದ್ದಿದ್ದಾರೆ.ಈ ಕುರಿತಂತೆ ಫಲಾನುಭವಿ ಮಹ್ಮದ್‌ ರಫೀಶ್‌ ಅನೂರಿ ದೂರು ಸಲ್ಲಿಸಿದ್ದರು. ದೂರಿನಂತೆ ಲೋಕಾ ಪೊಲೀಸರು ದಾಳಿಗೆ ಮುಂದಾಗಿ ದ್ದರು. ಒಟ್ಟು 18 ಸಾವಿರ ರು. ಲಂಚದ ಹಣದಲ್ಲಿ 7, 500 ರು ಹಣ ಫೋನ್‌ ಪೇ ಹಾಕಿಸಿಕೊಂಡಾಗಲೇ ಲೊಕಾಯುಕ್ತರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.ವಾಡಿ (ಜಂ) ಪುರಸಭೆಯ ಯೋಜನಾ ಅಧಿಕಾರಿ ಚಂದ್ರಕಾಂತ ಪಾಟೀಲ್ ಪಿ.ಎಂ. ಸ್ವನಿಧಿ ಯೋಜನೆ ಅಡಿಯಲ್ಲಿ ಮಂಜೂರಾದ ಸಾಲ 10.000 ರುಪಾಯಿಗಾಗಿ ತನ್ನನ್ನೂ ಸೇರಿದಂತೆ ಒಟ್ಟು 24 ಜನರ ಹತ್ತಿರ ತಲಾ 750 ರು ನಂತೆ ಒಟ್ಟು 18,000 ರು. ಲಂಚದ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಬೇಸತ್ತು ಲೋಕಾಯುಕ್ತ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾಗಿ ಎಂದು ರಫೀಶ್ ಅನೂರಿ ದೂರಿನಲ್ಲಿ ವಿವರಿಸಿದ್ದರು.ಯೋಜನಾಧಿಕಾರಿ ಪಾಟೀಲರಿಗೆ ಎಸ್.ಎಂ.ಎಸ್ ಮೂಲಕ ನೀಡಿದ ಮೊಬೈಲ್ ನಂಬರಿಗೆ ಪಂಚರ ಸಮಕ್ಷಮ ಲಂಚದ ಹಣ 78,500 ರು. ಫೋನ್ ಪೇ ಮುಖಾಂತರ ವರ್ಗಾವಣೆ ಮಾಡಲಾಗಿತ್ತು. ಆಗಲೇ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಲೋಕಾಯುಕ್ತ ಕಲಬುರಗಿ ಎಸ್ಪಿ ಬಿ.ಕೆ.ಉಮೇಶ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಾಜಶೇಖರ್ ಹಾಗೂ ಸಿಬ್ಬಂದಿ ಶರಣು, ಪ್ರದೀಪ್. ಅನಿಲ್. ಮಂಜುನಾಥ್. ಸಿದ್ದು ಬಿರಾದಾರ್, ಹಣಮಂತ ಇವರನ್ನೊಳಗೊಂಡ ತಂಡ ಬಂಧಿಸಿ ತನಿಖೆ ಕೈಕೊಂಡಿದ್ದಾರೆ. ಬಂಧಿತ ಯೋಜನಾಧಿಕಾರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್‌ ಮೂಲಗಳು ತಿಳಿಸಿವೆ.

Share this article