ರೈಲ್ವೆ ನಿಲ್ದಾಣಗಳಲ್ಲಿ ವೇಟಿಂಗ್ ಲಾಂಜ್

KannadaprabhaNewsNetwork |  
Published : Dec 14, 2024, 12:48 AM IST
5456465 | Kannada Prabha

ಸಾರಾಂಶ

ಕುಂಭಮೇಳಕ್ಕೆ ಆಗಮಿಸುವವರ ಪೈಕಿ ಬಹುತೇಕರು ಬರುವುದು ರೈಲಿನ ಮೂಲಕವೇ. ಪ್ರಯಾಗರಾಜ್ ಜಂಕ್ಷನ್. ರಾಮಬಾಗ್, ಜೂಸಿ ಸೇರಿದಂತೆ ಪ್ರಯಾಗರಾಜ್ ನಗರ ವ್ಯಾಪ್ತಿಯಲ್ಲಿ 9 ರೈಲ್ವೆ ನಿಲ್ದಾಣಗಳಿವೆ. ಈ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 1186 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿ ನೂರಕ್ಕೂ ಹೆಚ್ಚು ಎಫ್ಆರ್ ಎಸ್ ( ಪೇಸ್ ರಿಕನ್ಯಾಜೇಶನ ಸಿಸ್ಟಂ) ಕ್ಯಾಮೆರಾಗಳಿವೆ.

ಪ್ರಯಾಗರಾಜ್:

ದೇಶದ ಬಹುದೊಡ್ಡ ಆಧ್ಯಾತ್ಮಿಕ ಹಬ್ಬವೆನಿಸಿರುವ ಪ್ರಯಾಗರಾಜದಲ್ಲಿ ನಡೆಯಲಿರುವ "ಮಹಾಕುಂಭ ಮೇಳ- 2025 " ದಲ್ಲಿ ಭಾಗವಹಿಸುವ ಭಕ್ತರಿಗೆ ರೈಲು ನಿಲ್ದಾಣದಲ್ಲಿ ವೇಟಿಂಗ್ ಲಾಂಜ್, ಭದ್ರತೆಗಾಗಿ 1160ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳು ಕಣ್ಗಾವಲು ಇರಿಸಲಾಗಿದೆ.

ಪ್ರಯಾಗರಾಜ್ ಜಂಕ್ಷನ್‌ನಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ವಿಶ್ರಾಂತಿ ತಾಣ (ವೇಟಿಂಗ್ ಲಾಂಜ್) ಮಾಡಿದೆ. ಜ. 13ರಿಂದ ಫೆ. 26ರ ವರೆಗೆ 3000 ವಿಶೇಷ ರೈಲು ಸಂಚರಿಸಲಿವೆ. ಹೀಗಾಗಿ ನಾಲ್ಕು ದಿಕ್ಕುಗಳಿಂದ ಭಕ್ತರ ಸಂಖ್ಯೆ ಆಗಮಿಸುತ್ತದೆ. ನೂಕು ನುಗ್ಗಾಟ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರತ್ಯೇಕವಾಗಿ ವಿಶ್ರಾಂತಿ ತಾಣ ಮಾಡಲಾಗಿದೆ.

ಭಕ್ತರಿಗೆ ಸಲೀಸಾಗಿ ಗೊತ್ತಾಗಲಿ ಎಂಬ ಉದ್ದೇಶದಿಂದ ನೀಲಿ, ಕೇಸರಿ ಈ ರೀತಿ ಬೇರೆ ಬೇರೆ ಬಣ್ಣ ಬಳಿಯಲಾಗಿದೆ. ಇಲ್ಲೇ ಟಿಕೆಟ್ ನೀಡುವ ವ್ಯವಸ್ಥೆ ಕೂಡಾ ಮಾಡಲಾಗಿದೆ. ಒಂದೊಂದು ವಿಶ್ರಾಂತಿ ತಾಣದಲ್ಲಿ ಏಕಕಾಲಕ್ಕೆ 5 ಸಾವಿರ ಜನ ಭಕ್ತರು ರೈಲು ಬರುವರೆಗೆ ಉಳಿದುಕೊಳ್ಳಬಹುದಾಗಿದೆ.

ಭಕ್ತರಿಗೆ ಮಾಹಿತಿ ನೀಡಲು ಆರ್‌ಪಿಎಫ್, ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಇಲಾಖೆಯ ಸರಿಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಒಂದು ವಿಶ್ರಾಂತಿ ತಾಣದಲ್ಲಿ ನಿರಂತರ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಯಾವುದೇ ಬಗೆಯ ಗೋಜು-ಗದ್ದಲ, ನೂಕು ನುಗ್ಗಾಟಕ್ಕೆ ಅವಕಾಶ ಕಲ್ಪಿಸದೇ ಭಕ್ತರು ಮಹಾಕುಂಭಕ್ಕೆ ಆಗಮಿಸಿ ಅಲ್ಲಿಂದ ತಮ್ಮ ತಮ್ಮ ಗಮ್ಯಸ್ಥಳಕ್ಕೆ ಹೋಗಲು ಉತ್ತರ ಮಧ್ಯ ರೈಲ್ವೆ ವಲಯ ವ್ಯವಸ್ಥೆ ಮಾಡಿದೆ.

1186 ಸಿಸಿ ಕ್ಯಾಮೆರಾ:

ಕುಂಭಮೇಳಕ್ಕೆ ಆಗಮಿಸುವವರ ಪೈಕಿ ಬಹುತೇಕರು ಬರುವುದು ರೈಲಿನ ಮೂಲಕವೇ. ಪ್ರಯಾಗರಾಜ್ ಜಂಕ್ಷನ್. ರಾಮಬಾಗ್, ಜೂಸಿ ಸೇರಿದಂತೆ ಪ್ರಯಾಗರಾಜ್ ನಗರ ವ್ಯಾಪ್ತಿಯಲ್ಲಿ 9 ರೈಲ್ವೆ ನಿಲ್ದಾಣಗಳಿವೆ. ಈ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 1186 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿ ನೂರಕ್ಕೂ ಹೆಚ್ಚು ಎಫ್ಆರ್ ಎಸ್ ( ಪೇಸ್ ರಿಕನ್ಯಾಜೇಶನ ಸಿಸ್ಟಂ) ಕ್ಯಾಮೆರಾಗಳಿವೆ. ಕಂಟ್ರೋಲ್ ರೂಮ್ ನಿರ್ವಹಿಸುತ್ತಿದೆ.

ಕಂಟ್ರೋಲ್ ರೂಮನಲ್ಲಿ ದಿನದ 24 ಗಂಟೆ 12ಕ್ಕೂ ಅಧಿಕ ಆರ್‌ಪಿಎಫ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅತಿ ದೊಡ್ಡ ಧಾರ್ಮಿಕ ಹಬ್ಬಕ್ಕೆ ಯಾವುದೇ ಆತಂಕವಿಲ್ಲದೇ ಬನ್ನಿ. ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಅಭಯ ಹಸ್ತ ನೀಡುತ್ತಾರೆ ಆರ್‌ಪಿಎಫ್ ಅಧಿಕಾರಿ ವರ್ಗ.

ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ನಾಲ್ಕು ಪ್ರತ್ಯೇಕ ವಿಶ್ರಾಂತಿ ತಾಣ ಮಾಡಿದೆ. ಕುಡಿಯುವ ನೀರು, ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸುರಕ್ಷತೆ ಹಾಗೂ ಭದ್ರತೆಗಾಗಿ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ಹೇಳಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ