ಹುಬ್ಬಳ್ಳಿ:
ಈ ವೇಳೆ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಶೋಕ ಬಾರಕಿ ಮಾತನಾಡಿ, ಈ ಕಾರ್ಖಾನೆಯಲ್ಲಿ 350ಕ್ಕೂ ಅಧಿಕ ಕಾರ್ಮಿಕರು, 170 ಕಾಯಂ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಗುಜರಾತ್ ಮೂಲದ ಮಾಲೀಕರು ಈ ಕಂಪನಿ ಖರೀದಿಸಿದ್ದಾರೆ. ಅಲ್ಲಿಂದ ಈ ವರೆಗೆ ಕಂಪನಿಯ ಸ್ಥಳೀಯ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಜ. 13ರಂದು 41 ಕಾರ್ಮಿಕರನ್ನು ಗುಜರಾತ್ ರಾಜ್ಯದಲ್ಲಿ ತಮ್ಮ ಯಾವುದೇ ನೋಂದಣಿ ಇರದ ಸಂಸ್ಥೆಗೆ ದಿಢೀರ್ ವರ್ಗಾವಣೆ ಮಾಡಿ ಆದೇಶ ಪತ್ರ ಕೊಟ್ಟಿದ್ದಾರೆ. ಜತೆಗೆ ಕಾರ್ಮಿಕರ ಮುಖಂಡರನ್ನು ಒಳಗೊಂಡು 12 ಕಾರ್ಮಿಕರ ಅಮಾನತು ಮಾಡಲಾಗಿದೆ. ಜ. 24ರಿಂದ 41 ಜನ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಕೆಲಸ ನಿರಾಕರಿಸಿ ಫೆ. 8ರಿಂದ 9 ತಿಂಗಳ ವೇತನ ತಡೆಹಿಡಿಯಲಾಗಿದೆ. ಇದರಿಂದಾಗಿ ಈ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿವೆ. ಈ ಕುರಿತು ಈಗಾಗಲೇ ಉಪ ಕಾರ್ಮಿಕ ಆಯುಕ್ತರು 15 ಬಾರಿ ರಾಜಿ ಸಂಧಾನ ನಡೆಸಿದರೂ ಸಹ ಫಲಪ್ರದವಾಗಿಲ್ಲ ಎಂದು ದೂರಿದರು.ಕಾರ್ಮಿಕ ಆಯುಕ್ತರು ಅಮಾನತಾದ 41 ಕಾರ್ಮಿಕರಿಗೆ ಹುಬ್ಬಳ್ಳಿಯಲ್ಲಿ ಕೆಲಸ ನೀಡುವಂತೆ ಸೂಚಿಸಿದರೂ ಆಡಳಿತ ವರ್ಗ ಸ್ಪಂದಿಸಿಲ್ಲ. ಜತೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ, ಉಪಕಾರ್ಮಿಕ ಆಯುಕ್ತರು ಜೂ. 19ರಂದು 41 ಜನರ ವರ್ಗಾವಣೆ ಕಾನೂನು ಬಾಹಿರವಾಗಿದ್ದು, ಆಡಳಿತ ವರ್ಗದ ಮೇಲೆ ಕಾನೂನು ಕ್ರಮಕ್ಕೆ ಸೂಕ್ತ ಆದೇಶ ಹೊರಡಿಸಬೇಕೆಂದು ಪತ್ರ ಬರೆಯಲಾಗಿದ್ದರೂ ಸಹ ಮಾಲಿಕರು ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ಯೂನಿಯನ್ ಉಪಾಧ್ಯಕ್ಷ ವಿನೋದಕುಮಾರ ವೀರಾಪುರ, ದ್ಯಾಮಣ್ಣ ಸವಣೂರ, ಖಜಾಂಚಿ ವಾಸುದೇವ ಕುಂಟೆ, ಸಹ ಕಾರ್ಯದರ್ಶಿ ಕೆ.ಆರ್. ಜೂಜಾರ್, ಎ.ಎಂ. ಗದಗ ಸೇರಿದಂತೆ ನೂರಾರು ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಮುಷ್ಕರಕ್ಕೆ ಜೆಸಿಟಿಯು ಬೆಂಬಲ: