ಅಂತರ್ಜಲ ಅಭಿವೃದ್ಧಿ, ನಿರ್ವಹಣೆ ಅಭ್ಯಾಸಗಳ ತೃತೀಯ ಸ್ತರದ ತರಬೇತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಜಲಶಕ್ತಿ ಮಂತ್ರಾಲಯ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಮಂತ್ರಾಲಯ, ಕೇಂದ್ರೀಯ ಅಂತರ್ಜಲ ಮಂಡಳಿ ವತಿಯಿಂದ ಆಯೋಜಿಸಿದ್ದ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಅಭ್ಯಾಸಗಳ ಕುರಿತ ತೃತೀಯ ಸ್ತರದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೇವಲ ೨.೭ ರಷ್ಟು ಮಾತ್ರ ಕುಡಿಯುವ ನೀರು ಇದ್ದು, ಅಂತರ್ಜಲ ಮಟ್ಟವು ಸಹ ಕುಸಿತ ಕಾಣುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಯುದ್ಧಗಳು ಸಂಭವಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.ನಗರಸಭೆ, ಪುರಸಭೆಗಳಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಅರಿವು ಅಗತ್ಯವಾಗಿರುವುದರಿಂದ ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಡೆದುಕೊಂಡು, ನೀರನ್ನು ಮಿತವಾಗಿ ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಜನರ ಅರಿವು ಮೂಡಿಸಿ, ನೀರನ್ನು ಉಳಿಸಲು ಪಣ ತೊಡಿ ಎಂದು ಸಲಹೆ ನೀಡಿದರು.
ನೀರಿನ ಅಭಾವದಿಂದ ಕಾಡಿನಲ್ಲೂ ಸಹ ನೀರಿಲ್ಲದೇ ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಆರ್. ಧನಲಕ್ಷ್ಮೀ, ಸಿಜಿಡಬ್ಲ್ಯುಬಿನ ವಿಜ್ಞಾನಿಗಳಾದ ಕ್ಯಾರೋಲಿನ್ ಲೂಯಿಸ್, ಯೋಗೇಶ್, ಶ್ವೇತಾ, ನಿವೃತ್ತ ಹಿರಿಯ ವಿಜ್ಞಾನಿ ಸೂರ್ಯನಾರಾಯಣ, ರವಿಕುಮಾರ್ ಇದ್ದರು.
ಸಿಜಿಡಬ್ಲ್ಯೂಬಿ ಹಿರಿಯ ವಿಜ್ಞಾನಿ ಎಚ್.ಪಿ. ಜಯಪ್ರಕಾಶ್ ಮಾತನಾಡಿ, ನಿರಂತರವಾಗಿ ಅಂತರ್ಜಲವನ್ನು ತೆಗೆಯುತ್ತಿರುವುದರಿಂದ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಅಂತರ್ಜಲದ ಮಹತ್ವವನ್ನು ತಿಳಿಸಬೇಕಾಗಿದೆ. ವರ್ಷದಲ್ಲಿ ೩ ರಿಂದ ೪ ತಿಂಗಳು ಬರುವ ಮಳೆಯನ್ನು ವರ್ಷಪೂರ್ತಿ ಬಳಕೆ ಮಾಡಬೇಕಾಗಿರುವುದರಿಂದ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಅಭ್ಯಾಸಗಳ ಕುರಿತ ತೃತೀಯ ಸ್ತರದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಉದ್ಘಾಟಿಸಿದರು.