ದಾಬಸ್‍ಪೇಟೆ: ಸ್ಥಳೀಯ ಕುಲುವನಹಳ್ಳಿ ಗ್ರಾಪಂ ವತಿಯಿಂದ, ಸ್ವಚ್ಛ ಸಂಕೀರ್ಣವನ್ನು ವ್ಯವಸ್ಥಿತವಾಗಿ ನಿರ್ಮಿಸಿ, ಘಟಕದ ಸುತ್ತಲೂ ಗಿಡ-ಮರಗಳನ್ನು ನೆಟ್ಟು ಉದ್ಯಾನವನದಂತೆ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಬೆಂಗ್ರಾ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಪ್ರಶಂಸಿಸಿದರು.

ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ದೊಡ್ಡೇರಿ ಕಾಲೋನಿ ಬಳಿ ಕುಲುವನಹಳ್ಳಿ ಗ್ರಾಪಂ ವತಿಯಿಂದ ನಿರ್ಮಿಸಿರುವ ಸುಸಜ್ಜಿತ ಕಸ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣವನ್ನು ವೀಕ್ಷಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲೂ ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ಕೊಡಬೇಕು. ಪಂಚಾಯತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಈ ಘಟಕವನ್ನು ಮಾದರಿಯಾಗಿ ನಿರ್ಮಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೊಡ್ಡೇರಿ ಗ್ರಾಮದ ಕೂಸಿನ ಮನೆ, ಅಂಗನವಾಡಿ ಕೇಂದ್ರದ ಆವರಣ, ಶಾಲಾ ಪರಿಸರ, ಕಲಿಕಾ ಸನ್ನಿವೇಶವನ್ನು ವೀಕ್ಷಿಸಿದರು.
ಈ ವೇಳೆ ಕುಲುವನಹಳ್ಳಿ ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಉಪಾಧ್ಯಕ್ಷ ರಂಗನಾಥ್, ಸದಸ್ಯರು, ಪಿಡಿಒ ಮೋಹನ್ ಕುಮಾರ್, ಕಾರ್ಯದರ್ಶಿ ಧನಂಜಯ್ ಕುಮಾರ್, ಪಂಚಾಯತಿ ಸಿಬ್ಬಂದಿಗಳಾದ ಪವನ್, ರಂಗನಾಥ್, ದಿಲೀಪ್ ಇತರರಿದ್ದರು.
ಫೆÇೀಟೋ 1 :
ಕುಲುವನಹಳ್ಳಿ ಗ್ರಾಪಂ ವತಿಯಿಂದ ದೊಡ್ಡೇರಿ ಕಾಲೋನಿ ಬಳಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣವನ್ನು ಬೆಂಗ್ರಾ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ವೀಕ್ಷಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.