ವಿಜಯಪುರ: ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮನೆಯಲ್ಲಿಯೇ ವಿಂಗಡಿಸಿ ಸಿಬ್ಬಂದಿಗೆ ನೀಡಿ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಆರೋಗ್ಯ ನಿರೀಕ್ಷಕಿ ಲಾವಣ್ಯ ಮನವಿ ಮಾಡಿದರು
ವಿಜಯಪುರ: ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮನೆಯಲ್ಲಿಯೇ ವಿಂಗಡಿಸಿ ಸಿಬ್ಬಂದಿಗೆ ನೀಡಿ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಆರೋಗ್ಯ ನಿರೀಕ್ಷಕಿ ಲಾವಣ್ಯ ಮನವಿ ಮಾಡಿದರು.
ಪಟ್ಟಣದಲ್ಲಿ ಪುರಸಭಾ ಸಿಬ್ಬಂದಿ ಸ್ವಚ್ಛ ಭಾರತ್, ಸ್ವಚ್ಛ ವಿಜಯಪುರ ಅಭಿಯಾನದಡಿ ಪಟ್ಣಣ ನಾಗರಿಕರಿಗೆ ಜಾಗೃತಿ ಮೂಡಿಸಿ ಮಾತನಾಡಿ, ಹಸಿರು ಡಬ್ಬದಲ್ಲಿ ಹಾಕುವ ಹಸಿ ಕಸವನ್ನು ಮನೆಯ ಹಿತ್ತಲಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ, ನೀಲಿ ಡಬ್ಬದಲ್ಲಿ ಹಾಕುವ ಒಣ ಕಸ ನೀಲಿ ಡಬ್ಬದಲ್ಲಿ ಹಾಕಿ ವಾಹನಕ್ಕೆ ನೀಡಿ, ಸ್ಯಾನಿಟರಿ ತ್ಯಾಜ್ಯ ಕೆಂಪು ಡಬ್ಬ, ಸರ್ಜಿಕಲ್ ಸಿರಿಂಜ್, ಡೈಪರ್, ಸ್ಯಾನಿಟರಿ ಪ್ಯಾಡ್ ಗಳನ್ನು ಹಾಕಿ, ಇ-ತ್ಯಾಜ್ಯ ಕಪ್ಪು ಡಬ್ಬ, ಹಳೆಯ ಕಂಪ್ಯೂಟರ್ ಬಿಡಿ ಭಾಗಗಳು, ಎಲೆಕ್ಟ್ರಾನಿಕ್ಸ್, ಹಳೆ ಮೊಬೈಲ್ ಸಿಮ್‌ಗಳನ್ನು ಇದರಲ್ಲಿ ಹಾಕಬೇಕು. ಪ್ರತಿ ಮನೆಯಲ್ಲೂ ಮೂಲ ತ್ಯಾಜ್ಯ ವಿಂಗಡಣೆ ಕಡ್ಡಾಯ ಮಾಡಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಜಯಪುರ ಪುರಸಭೆಯ ಆರೋಗ್ಯ ಶಾಖೆ ಬಳಿ ಇ-ತ್ಯಾಜ್ಯ ಸಂಗ್ರಹಣಾ ಕೇಂದ್ರ ಸ್ಥಾಪಿಸಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಇ-ತ್ಯಾಜ್ಯವನ್ನು ಸದರಿ ಕೇಂದ್ರದಲ್ಲಿ ನೀಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು ಅಪರಾಧ. ಮೊದಲ ಅಪರಾಧ ೫೦, ಪುನರಾವರ್ತನೆ ೧೦೦, ಬೃಹತ್ ತ್ಯಾಜ್ಯ ಉತ್ಪಾದಕರು ಘನ ತ್ಯಾಜ್ಯದ ವಿಂಗಡಣೆ ಮಾಡಲು ವಿಫಲರಾದರೆ ೨೦೦ ರಿಂದ ೩೦೦ ರು. ಕಸದ ಬುಟ್ಟಿ, ತೊಟ್ಟಿ ಇಲ್ಲದ ಅಂಗಡಿ, ವ್ಯಾಪಾರಿಗಳಿಗೆ ೨೫ ರಿಂದ ೫೦ ರು. ದಂಡ ಕಟ್ಟಡ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿದರೆ ೫೦೦, ರಿಂದ ೧೦೦೦, ಕೊಠಡಿ, ಕಳಪೆ ಅಥವಾ ಇತರೆ ಘನ ತ್ಯಾಜ್ಯ ವಸ್ತುಗಳ ಅನಿಯಮಿತ ಶೇಖರಣೆ ೫೦, ರಿಂದ ೧೦೦ ರು. ಮಾಂಸ, ಕೋಳಿ ಮತ್ತು ಕಸಾಯಿ ಖಾನೆ ತ್ಯಾಜ್ಯವನ್ನು ನಿಗದಿತ ಮಾರುಕಟ್ಟೆಯಲ್ಲಿ ವಿಂಗಡಿಸದೆ ಸಾರ್ವಜನಿಕ ಸ್ಥಳದಲ್ಲಿ ಸುರಿದರೆ ೫೦ ರಿಂದ ೧೦೦ ರು. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳ ಸಮುದಾಯ ಸಂಘಟಕರಾದ ಸಹನ, ಶೈಲಾ.ಸಿ, ಸರಸ್ವತಿ, ಶೃತಿ, ಕವಿತಾ, ವೆಂಕಟಲಕ್ಷ್ಮಮ್ಮ ಮುಂತಾದವರು ಹಾಜರಿದ್ದರು.
(ಫೋಟೊ ಕ್ಯಾಪ್ಷನ್)
ವಿಜಯಪುರ ಪಟ್ಟಣದಲ್ಲಿ ಹಸಿಕಸ ಮತ್ತು ಒಣಕಸ ವಿಂಗಡಣೆಯ ಕುರಿತು, ಪುರಸಭೆಯ ಆರೋಗ್ಯ ನಿರೀಕ್ಷಕಿ ಲಾವಣ್ಯ ಹಾಗು ಪುರಸಭೆ ಸಿಬ್ಬಂದಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.