ಮಂಡ್ಯ ಮಂಜುನಾಥ
ಕಳೆದ ಆರು ವರ್ಷಗಳಿಂದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗೆ ಹಿಡಿದಿದ್ದ ಗ್ರಹಣ ಈಗ ಬಿಟ್ಟಿದೆ. ರಾಜ್ಯ ಸರ್ಕಾರ ಮೀಸಲಾತಿ ಅಧಿಸೂಚನೆ ಪ್ರಕಟಗೊಳಿಸಿದ ಬೆನ್ನಲ್ಲೇ ಜಿಲ್ಲಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಚುನಾವಣಾ ಆಕಾಂಕ್ಷಿಗಳು ಮೈ ಕೊಡವಿಕೊಂಡು ಚುನಾವಣೆಗೆ ಸ್ಪರ್ಧಿಸುವುದಕ್ಕೆ ರೆಡಿಯಾಗುತ್ತಿದ್ದಾರೆ.
ಚುನಾವಣೆ ನಡೆಸುವುದಾಗಿ ಹೇಳುತ್ತಲೇ ಬಂದಿದ್ದ ರಾಜ್ಯ ಸರ್ಕಾರಗಳು ಮೀಸಲಾತಿಯನ್ನು ನಿಗದಿಪಡಿಸಲಾಗದೆ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದ್ದವು. ಇದರಿಂದ ಆಕಾಂಕ್ಷಿಗಳು ಪದೇ ಪದೇ ನಿರಾಸೆಗೆ ಒಳಗಾಗುತ್ತಲೇ ಇದ್ದರು. ಇದೀಗ ಮೀಸಲಾತಿ ಪಟ್ಟಿಯನ್ನು ಬಿಡುಗಡೆಗೊಳಿಸುವ ಮೂಲಕ ಚುನಾವಣೆ ನಡೆಸುವುದಕ್ಕೆ ಸಿದ್ಧ ಎಂಬ ಸಂದೇಶವನ್ನು ಸರ್ಕಾರ ರವಾನಿಸಿದೆ.ಮೀಸಲಾತಿ ಪಟ್ಟಿ ನಿರೀಕ್ಷೆಯಂತೆಯೇ ನಿಗದಿಯಾಗಿದೆಯೇ, ಬದಲಾವಣೆಯಾಗಿದೆಯೇ, ಒಮ್ಮೆ ಬದಲಾವಣೆಯಾಗಿದ್ದರೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು, ಯಾರನ್ನು ಕಣಕ್ಕಿಳಿಸಬಹುದು, ಎಲ್ಲೆಲ್ಲಿ ಮತ ಬ್ಯಾಂಕ್ ಗಟ್ಟಿಯಾಗಿದೆ, ಎಲ್ಲೆಲ್ಲಿ ಕಡಿಮೆ ಇದೆ, ಅದನ್ನು ಸರಿದೂಗಿಸುವ ಬಗೆ ಹೇಗೆ ಎಂಬೆಲ್ಲಾ ಆಲೋಚನೆಗಳೊಂದಿಗೆ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗಳು ನಡೆಯಲಾರಂಭಿಸಿವೆ.
ರಾಜಕೀಯ ಪಕ್ಷದ ಗುರುತಿನೊಂದಿಗೆ ಪಂಚಾಯ್ತಿ ಚುನಾವಣೆಗಳು ನಡೆಯದಿದ್ದರೂ ಹಲವಾರು ಆಕಾಂಕ್ಷಿಗಳು ರಾಜಕೀಯ ನಾಯಕರ ಬೆನ್ನೇರಿ ತಮ್ಮನ್ನು ಬೆಂಬಲಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನೂ ಕೆಲವರು ವೈಯಕ್ತಿಕ ವರ್ಚಸ್ಸಿನ ಮೇಲೆ ಕಣಕ್ಕಿಳಿಯುತ್ತಿದ್ದರೆ, ಮೀಸಲಾತಿ ಬದಲಾವಣೆಯಾಗಿರುವ ಕಡೆ ಪ್ರಬಲರು ಮೀಸಲು ನಿಗದಿಯಾಗಿರುವ ಸಮುದಾಯದವರನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದ್ದಾರೆ.
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವ ಅಧಿಕಾರ ಈ ಹಿಂದೆ ರಾಜ್ಯ ಚುನಾವಣಾ ಆಯೋಗಕ್ಕೆ ಇತ್ತು. ಆಯೋಗವೇ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸುವ ಅಧಿಕಾರ ಹೊಂದಿತ್ತು. ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್‌ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೀಡಿತ್ತು.
ಹಾಲಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆಯನ್ನು ೪೦ಕ್ಕೆ ಇಳಿಸಲಾಗಿದೆ. ಈ ಹಿಂದೆ ಕ್ಷೇತ್ರಗಳ ಸಂಖ್ಯೆ ೪೧ ಇತ್ತು. ಅದರಲ್ಲಿ ಒಂದು ಕ್ಷೇತ್ರವನ್ನು ಕಡಿತಗೊಳಿಸಲಾಗಿದೆ. ತಾಲೂಕು ಪಂಚಾಯ್ತಿಯಲ್ಲಿ ೨೦ ಕ್ಷೇತ್ರಗಳನ್ನು ಕಡಿತಗೊಳಿಸಿ ೧೫೫ ರಿಂದ ೧೩೫ಕ್ಕೆ ಇಳಿಸಿದೆ. ಮಂಡ್ಯ ತಾಲೂಕಿನಲ್ಲಿ ೨೮ ಕ್ಷೇತ್ರಗಳಿಂದ ೨೪ಕ್ಕೆ ಇಳಿಸಲಾಗಿದೆ. ಅದರಂತೆ ಮದ್ದೂರಿನಲ್ಲಿ ೨೭ ರಿಂದ ೨೧ಕ್ಕೆ, ಮಳವಳ್ಳಿಯಲ್ಲಿ ೨೫ ರಿಂದ ೨೧ಕ್ಕೆ, ಕೆ.ಆರ್.ಪೇಟೆಯಲ್ಲಿ ೨೪ ರಿಂದ ೨೦ಕ್ಕೆ ಹಾಗೂ ನಾಗಮಂಗಲ ತಾಲೂಕಿನಲ್ಲಿ ೧೮ ರಿಂದ ೧೬ಕ್ಕೆ ಇಳಿಸಲಾಗಿದೆ. ಆದರೆ, ಪಾಂಡವಪುರದಲ್ಲಿದ್ದ ೧೭ ಮತ್ತು ಶ್ರೀರಂಗಪಟ್ಟಣದಲ್ಲಿದ್ದ ೧೬ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ,ಐದು ವರ್ಷ ೬ ಆಡಳಿತಾಧಿಕಾರಿಗಳ ದರ್ಬಾರ್
ಜಿಪಂ ಕ್ಷೇತ್ರ ಮೀಸಲಾತಿ ಆಕ್ಷೇಪಣೆ ಸಲ್ಲಿಸಲು ಅ.19 ಕೊನೆ ದಿನ
ಮಂಡ್ಯ ಜಿಲ್ಲಾ ಪಂಚಾಯ್ತಿ ಮೀಸಲು ಪಟ್ಟಿ ವಿವರ
ಬಸರಾಳು - ಹಿಂದುಳಿದ ವರ್ಗ ಅ,ಚಂದಗಾಲು- ಸಾಮಾನ್ಯ
ಬೇಬಿ - ಸಾಮಾನ್ಯ (ಮಹಿಳೆ)ಹಲ್ಲೇಗೆರೆ - ಸಾಮಾನ್ಯಬೇವುಕಲ್ಲು - ಸಾಮಾನ್ಯಶಿವಳ್ಳಿ - ಹಿಂದುಳಿದ ವರ್ಗ ಅ (ಮಹಿಳೆ)
ದುದ್ದ - ಹಿಂದುಳಿದ ವರ್ಗ ಅ (ಮಹಿಳೆ)ಕೆರಗೋಡು - ಅನುಸೂಚಿತ ಪಂಗಡಆಲಕೆರೆ - ಅನುಸೂಚಿತ ಜಾತಿಕೀಲಾರ - ಹಿಂದುಳಿದ ವರ್ಗ ಅ
ಮಂಡ್ಯ ಗ್ರಾಮಾಂತರ - ಸಾಮಾನ್ಯಸಾತನೂರು - ಸಾಮಾನ್ಯಬೂದನೂರು - ಸಾಮಾನ್ಯ (ಮಹಿಳೆ)ಹನಕೆರೆ - ಸಾಮಾನ್ಯ
ಬಿ.ಹೊಸೂರು - ಹಿಂದುಳಿದ ವರ್ಗ ಅಚಂದಗಾಲು (ದು) - ಹಿಂದುಳಿದ ವರ್ಗ ಅ (ಮಹಿಳೆ)ಹೊಳಲು - ಸಾಮಾನ್ಯ (ಮಹಿಳೆ)ತೂಬಿನಕೆರೆ - ಸಾಮಾನ್ಯ (ಮಹಿಳೆ)
ಇಂಡುವಾಳು - ಸಾಮಾನ್ಯ (ಮಹಿಳೆ)ಕೊತ್ತತ್ತಿ - ಹಿಂದುಳಿದ ವರ್ಗ ಬ (ಮಹಿಳೆ)ಸಂತೆಕಸಲಗೆರೆ - ಸಾಮಾನ್ಯಬೇಲೂರು - ಅನುಸೂಚಿತ ಜಾತಿ (ಮಹಿಳೆ)
ತಗ್ಗಹಳ್ಳಿ - ಹಿಂದುಳಿದ ವರ್ಗ ಅಮಂಗಲ - ಅನುಸೂಚಿತ ಜಾತಿ (ಮಹಿಳೆ)ಮಳವಳ್ಳಿ ತಾಲೂಕು ಪಂಚಾಯ್ತಿ
ಚಿಕ್ಕಮುಲಗೂಡು - ಹಿಂದುಳಿದ ವರ್ಗ ಅಕಿರುಗಾವಲು - ಸಾಮಾನ್ಯ (ಮಹಿಳೆ)ಕಲ್ಕುಣಿ - ಸಾಮಾನ್ಯನೆಲಮಾಕನಹಳ್ಳಿ - ಸಾಮಾನ್ಯ (ಮಹಿಳೆ)
ತಳಗವಾದಿ - ಹಿಂದುಳಿದ ವರ್ಗ ಅ (ಮಹಿಳೆ)ಹಿಟ್ಟನಹಳ್ಳಿ - ಸಾಮಾನ್ಯ (ಮಹಿಳೆ)ಅಗಸನಪುರ - ಅನುಸೂಚಿತ ಜಾತಿನಿಡಘಟ್ಟ - ಸಾಮಾನ್ಯ
ಚೊಟ್ಟನಹಳ್ಳಿ - ಸಾಮಾನ್ಯಕುಂದೂರು - ಸಾಮಾನ್ಯಸುಜ್ಜಲೂರು - ಅನುಸೂಚಿತ ಜಾತಿರಾಗಿಬೊಮ್ಮನಹಳ್ಳಿ - ಸಾಮಾನ್ಯ
ತೊರೆಕಾಡನಹಳ್ಳಿ - ಸಾಮಾನ್ಯಡಿ.ಹಲಸಹಳ್ಳಿ - ಹಿಂದುಳಿದ ವರ್ಗ ಬ (ಮಹಿಳೆ)ಹುಸ್ಕೂರು - ಹಿಂದುಳಿದ ವರ್ಗ ಅ (ಮಹಿಳೆ)ದಳವಾಯಿಕೋಡಿಹಳ್ಳಿ - ಸಾಮಾನ್ಯ (ಮಹಿಳೆ)
ಬ್ಯಾಡರಹಳ್ಳಿ - ಅನುಸೂಚಿತ ಪಂಗಡ (ಮಹಿಳೆ)ಹಲಗೂರು - ಸಾಮಾನ್ಯ (ಮಹಿಳೆ)ಬೆಳಕವಾಡಿ - ಹಿಂದುಳಿದ ವರ್ಗ ಅಬೊಪ್ಪೇಗೌಡನಪುರ - ಅನುಸೂಚಿತ ಜಾತಿ (ಮಹಿಳೆ)
ಪೂರಿಗಾಲಿ - ಅನುಸೂಚಿತ ಜಾತಿ (ಮಹಿಳೆ)ಪಾಂಡವಪುರ ತಾಲೂಕು ಪಂಚಾಯ್ತಿಮೇಲುಕೋಟೆ - ಸಾಮಾನ್ಯ (ಮಹಿಳೆ)ಜಕ್ಕನಹಳ್ಳಿ - ಹಿಂದುಳಿದ ವರ್ಗ ಅ (ಮಹಿಳೆ)
ಮಾಣಿಕ್ಯನಹಳ್ಳಿ - ಸಾಮಾನ್ಯನಾರಾಯಣಪುರ - ಸಾಮಾನ್ಯ (ಮಹಿಳೆ)ಲಕ್ಷ್ಮೀಸಾಗರ - ಹಿಂದುಳಿದ ವರ್ಗ ಅಹಿರೇಮರಳಿ - ಹಿಂದುಳಿದ ವರ್ಗ ಅ
ಚಿನಕುರಳಿ - ಹಿಂದುಳಿದ ವರ್ಗ ಬ (ಮಹಿಳೆ)ಗುಮ್ಮನಹಳ್ಳಿ - ಅನುಸೂಚಿತ ಜಾತಿ (ಮಹಿಳೆ)ಬನ್ನಂಗಾಡಿ - ಹಿಂದುಳಿದ ವರ್ಗ ಅ (ಮಹಿಳೆ)ಕಟ್ಟೇರಿ - ಅನುಸೂಚಿತ ಜಾತಿ
ಅರಳಕುಪ್ಪೆ - ಸಾಮಾನ್ಯ (ಮಹಿಳೆ)ಕ್ಯಾತನಹಳ್ಳಿ - ಅನುಸೂಚಿತ ಪಂಗಡ (ಮಹಿಳೆ)ಕುರುಬರ ಬೆಟ್ಟಹಳ್ಳಿ - ಸಾಮಾನ್ಯಕೆನ್ನಾಳು - ಸಾಮಾನ್ಯ
ಚಿಕ್ಕಾಡೆ - ಸಾಮಾನ್ಯ (ಮಹಿಳೆ)ದೊಡ್ಡ ಬ್ಯಾಡರಹಳ್ಳಿ - ಸಾಮಾನ್ಯಸುಂಕಾತೊಣ್ಣೂರು - ಸಾಮಾನ್ಯ
ಶ್ರೀರಂಗಪಟ್ಟಣ ತಾಲೂಕು ಪಂಚಾಯ್ತಿನೆಲಮನೆ - ಸಾಮಾನ್ಯ (ಮಹಿಳೆ)ಕೆ.ಶೆಟ್ಟಹಳ್ಳಿ - ಸಾಮಾನ್ಯ
ಟಿ.ಎಂ.ಹೊಸೂರು - ಅನುಸೂಚಿತ ಜಾತಿಮುಂಡಗದೊರೆ - ಅನುಸೂಚಿತ ಜಾತಿ (ಮಹಿಳೆ)ಕೊಡಿಯಾಲ - ಹಿಂದುಳಿದ ಅ ವರ್ಗ (ಮಹಿಳೆ)ತಡಗವಾಡಿ - ಸಾಮಾನ್ಯ (ಮಹಿಳೆ)
ಅರಕೆರೆ - ಹಿಂದುಳಿದ ಅ ವರ್ಗಗಾಮನಹಳ್ಳಿ - ಸಾಮಾನ್ಯಕಿರಂಗೂರು - ಹಿಂದುಳಿದ ಅ ವರ್ಗ (ಮಹಿಳೆ)ಮಹದೇವಪುರ - ಸಾಮಾನ್ಯ
ನಗುವನಹಳ್ಳಿ - ಸಾಮಾನ್ಯಚಿಕ್ಕಅಂಕನಹಳ್ಳಿ - ಅನುಸೂಚಿತ ಜಾತಿ (ಮಹಿಳೆ)ಪಾಲಹಳ್ಳಿ - ಹಿಂದುಳಿದ ಬ ವರ್ಗಬೆಳಗೊಳ - ಸಾಮಾನ್ಯ
ಹುಲಿಕೆರೆ - ಸಾಮಾನ್ಯ (ಮಹಿಳೆ)ಕೃಷ್ಣರಾಜಸಾಗರ - ಅನುಸೂಚಿತ ಪಂಗಡ (ಮಹಿಳೆ)ಮದ್ದೂರು ತಾಲೂಕು ಪಂಚಾಯ್ತಿ
ಕೌಡ್ಲೆ - ಅನುಸೂಚಿತ ಪಂಗಡ (ಮಹಿಳೆ)ಆಬಲವಾಡಿ - ಸಾಮಾನ್ಯ (ಮಹಿಳೆ)ಕೊಪ್ಪ - ಹಿಂದುಳಿದ ವರ್ಗ ಅ (ಮಹಿಳೆ)ಹೂತಗೆರೆ - ಸಾಮಾನ್ಯ (ಮಹಿಳೆ)
ಕೆಸ್ತೂರು - ಹಿಂದುಳಿದ ಬ ವರ್ಗಕದಲೂರು - ಅನುಸೂಚಿತ ಜಾತಿ (ಮಹಿಳೆ)ಮರಳಿಗ - ಸಾಮಾನ್ಯ (ಮಹಿಳೆ)ಬೆಸಗರಹಳ್ಳಿ - ಹಿಂದುಳಿದ ಅ ವರ್ಗ
ವಳಗೆರೆಹಳ್ಳಿ - ಸಾಮಾನ್ಯ (ಮಹಿಳೆ)ನಿಡಘಟ್ಟ - ಅನುಸೂಚಿತ ಜಾತಿ (ಮಹಿಳೆ)ಕೆ.ಹೊನ್ನಲಗೆರೆ - ಸಾಮಾನ್ಯಕೂಳಗೆರೆ - ಸಾಮಾನ್ಯ (ಮಹಿಳೆ)
ಕುದರಗುಂಡಿ - ಸಾಮಾನ್ಯಚಿಕ್ಕರಸಿನಕೆರೆ - ಹಿಂದುಳಿದ ಅ ವರ್ಗದೊಡ್ಡರಸಿನಕೆರೆ - ಸಾಮಾನ್ಯಕರಡಕೆರೆ - ಸಾಮಾನ್ಯ
ಕೆ.ಶೆಟ್ಟಹಳ್ಳಿ - ಸಾಮಾನ್ಯಕಾಡುಕೊತ್ತನಹಳ್ಳಿ - ಅನುಸೂಚಿತ ಜಾತಿಭಾರತೀನಗರ - ಸಾಮಾನ್ಯಅಣ್ಣೂರು - ಹಿಂದುಳಿದ ಅ ವರ್ಗ (ಮಹಿಳೆ)
ತೊರೆಬೊಮ್ಮನಹಳ್ಳಿ - ಹಿಂದುಳಿದ ಅ ವರ್ಗ (ಮಹಿಳೆ)ನಾಗಮಂಗಲ ತಾಲೂಕು ಪಂಚಾಯ್ತಿ
ಚುಂಚನಹಳ್ಳಿ - ಹಿಂದುಳಿದ ಅ ವರ್ಗಹೊನ್ನೇನಹಳ್ಳಿ - ಸಾಮಾನ್ಯಯಲಾದಹಳ್ಳಿ - ಅನುಸೂಚಿತ ಜಾತಿ (ಮಹಿಳೆ)ಕೆಲಗೆರೆ - ಹಿಂದುಳಿದ ಬ ವರ್ಗ (ಮಹಿಳೆ)
ಕದಬಹಳ್ಳಿ - ಸಾಮಾನ್ಯಗೊಂಡೇನಹಳ್ಳಿ - ಸಾಮಾನ್ಯ (ಮಹಿಳೆ)ಬಿಂಡಿಗನವಿಲೆ - ಹಿಂದುಳಿದ ಅ ವರ್ಗ (ಮಹಿಳೆ)ಪಿ.ನೇರಳೆಕೆರೆ - ಹಿಂದುಳಿದ ಅ ವರ್ಗ (ಮಹಿಳೆ)
ದೇವಲಾಪುರ - ಸಾಮಾನ್ಯತುಪ್ಪದ ಮಡು - ಅನುಸೂಚಿತ ಪಂಗಡ (ಮಹಿಳೆ)ಹರದನಹಳ್ಳಿ - ಹಿಂದುಳಿದ ಅ ವರ್ಗಕರಡಹಳ್ಳಿ - ಸಾಮಾನ್ಯ
ಬೋಗಾದಿ - ಸಾಮಾನ್ಯ (ಮಹಿಳೆ)ಕಾಂತಾಪುರ - ಅನುಸೂಚಿತ ಜಾತಿಬ್ರಹ್ಮದೇವರಹಳ್ಳಿ - ಸಾಮಾನ್ಯಚೀಣ್ಯ - ಸಾಮಾನ್ಯ (ಮಹಿಳೆ)ಕೆ.ಆರ್.ಪೇಟೆ ತಾಲೂಕು ಪಂಚಾಯ್ತಿ
ಆನೆಗೊಳ - ಹಿಂದುಳಿದ ಅ ವರ್ಗ (ಮಹಿಳೆ)ಕಿಕ್ಕೇರಿ - ಹಿಂದುಳಿದ ಅ ವರ್ಗ (ಮಹಿಳೆ)ಚೌಡೇನಹಳ್ಳಿ - ಹಿಂದುಳಿದ ಬ ವರ್ಗಐಕನಹಳ್ಳಿ - ಹಿಂದುಳಿದ ಅ ವರ್ಗ
ಸಂತೇಬಾಚಹಳ್ಳಿ - ಸಾಮಾನ್ಯ (ಮಹಿಳೆ)ಸಾರಂಗಿ - ಸಾಮಾನ್ಯ (ಮಹಿಳೆ)ಅಗ್ರಹಾರಬಾಚಹಳ್ಳಿ - ಸಾಮಾನ್ಯಹಿರಿಕಳಲೆ - ಸಾಮಾನ್ಯ
ಬಂಡಿಹೊಳೆ - ಅನುಸೂಚಿತ ಜಾತಿಹರಿಹರಪುರ - ಸಾಮಾನ್ಯಮಂದಗೆರೆ - ಸಾಮಾನ್ಯಬೀರುವಳ್ಳಿ - ಹಿಂದುಳಿದ ಅ ವರ್ಗ
ಅಕ್ಕಿಹೆಬ್ಬಾಳು - ಅನುಸೂಚಿತ ಪಂಗಡ (ಮಹಿಳೆ)ಸೋಮನಹಳ್ಳಿ - ಸಾಮಾನ್ಯಸಿಂಧಘಟ್ಟ - ಸಾಮಾನ್ಯಶೀಳನೆರೆ - ಹಿಂದುಳಿದ ಅ ವರ್ಗ (ಮಹಿಳೆ)
ತೆಂಡೇಕೆರೆ - ಅನುಸೂಚಿತ ಜಾತಿ (ಮಹಿಳೆ)ಬೂಕನಕೆರೆ - ಸಾಮಾನ್ಯ (ಮಹಿಳೆ)ವಿಠಲಾಪುರ - ಅನುಸೂಚಿತ ಜಾತಿ (ಮಹಿಳೆ)ಗಂಜೀಗೆರೆ - ಸಾಮಾನ್ಯ ಮಹಿಳೆ)