ಕಲಾತ್ಮಕ ಸಿನಿಮಾಗಳ ವೀಕ್ಷಣೆ ಶೈಕ್ಷಣಿಕ ಆರೋಗ್ಯಕ್ಕೆ ಉತ್ತಮ

KannadaprabhaNewsNetwork | Published : Mar 26, 2025 1:39 AM

ಸಾರಾಂಶ

ಶಿವಮೊಗ್ಗ: ಉತ್ತಮ ಸಂದೇಶ ನೀಡುವ, ಲಿಂಗತಾರತಮ್ಯ ಕುರಿತ ಸಾಮಾಜಿಕ ಕಥನಗಳ ಮೌಲ್ಯಧಾರಿತ ಸಿನಿಮಾಗಳ ವೀಕ್ಷಣೆಯಿಂದ ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್ ಹೇಳಿದರು.

ಶಿವಮೊಗ್ಗ: ಉತ್ತಮ ಸಂದೇಶ ನೀಡುವ, ಲಿಂಗತಾರತಮ್ಯ ಕುರಿತ ಸಾಮಾಜಿಕ ಕಥನಗಳ ಮೌಲ್ಯಧಾರಿತ ಸಿನಿಮಾಗಳ ವೀಕ್ಷಣೆಯಿಂದ ಶೈಕ್ಷಣಿಕ ಬೆಳವಣಿಗೆಗೆ ಉತ್ತಮ ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್ ಹೇಳಿದರು.ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ವಿಭಾಗ, ಸಹ್ಯಾದ್ರಿ ಕಲಾ ತಂಡ, ಶಿವಮೊಗ್ಗ ಸಿನಿಮಾಸ್ ಅಡ್ಡ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ಸಿನಿಮಾ ರಸಗ್ರಹಣ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಕಲಿಕೆಯ ಶೈಕ್ಷಣಿಕ ಹಂತದಲ್ಲಿ ಕಲಾತ್ಮಕ ಸಿನಿಮಾಗಳನ್ನು ನೋಡುವುದರಿಂದ ಉತ್ತಮ ಅಲೋಚನೆ ಮಾಡುವ ಮೂಲಕ ವಿಕಾರಗಳನ್ನು ಮೀರಿ ನಮ್ಮ ಸಮಾಜಕ್ಕೆ ಉತ್ತಮ ಕೊಡುಗೆಯಾಗುತ್ತಾರೆ. ತಮ್ಮಲ್ಲಿನ ವಿಕಾರಗಳನ್ನು ಮೀರಿ ಸಮಾಜಕ್ಕೆ ಮೌಲ್ಯವಂತರಾಗಬಹುದು ಎಂದರು.ಹಿರಿಯ ಪತ್ರಕರ್ತ ವೈದ್ಯನಾಥ್ ಮಾತಾನಾಡಿ, ಸಿನಿಮಾವನ್ನು ಕೇವಲ ನೋಡುವುದಲ್ಲ. ಸಿನಿಮಾವನ್ನು ನೋಡಬಾರದು ಸಿನಿಮಾವನ್ನು ಓದಬೇಕು. ಶೈಕ್ಷಣಿಕ ಶಿಸ್ತಿನಿಂದ ಕತೆ, ಕವನ , ಕಾದಂಬರಿಗಳನ್ನು ಓದುವಂತೆ ಸಿನಿಮಾವನ್ನು ಓದಬೇಕು. ರಸಗ್ರಹಣ ಎನ್ನುವುದು ನೋಡಿದ ಸಿನಿಮಾ ಏಕೆ ಇಷ್ಟವಾಯಿತು, ಆಗಲಿಲ್ಲ ಎಂಬ ಚರ್ಚೆ ಮಾಡುವುದು ಆಗಿದೆ. ಭಾವನಾತ್ಮಕ ಬದುಕಿನ ನೋವು, ತಲ್ಲಣಗಳನ್ನು ಸಿನಿಮಾ ನೋಡಿದಾಗ ಲೋಕ ಅರಿವಾಗುತ್ತದೆ ಎಂದರು.ಕನ್ನಡದಲ್ಲಿ ನಾನೂರು ಸಿನಿಮಾ ಸೆನ್ಸಾರ್ ಆಗಿದೆ. ಸದ್ಯ 120 ಸಿನಿಮಾ ಬಿಡುಗಡೆಯಾಗಿವೆ. ಅದರಲ್ಲಿ ಗೆಲ್ಲುವುದು ಹಣ ಗಳಿಸುವುದು ಒಂದೊ ಎರಡೊ ಸಿನಿಮಾಗಳು ಮಾತ್ರ. ಬದುಕಿನ ಸಂಕಷ್ಟವನ್ನು ಗ್ರಹಿಸುವ ಇಂತಹ ಸಿನಿಮಾಗಳು ನಮ್ಮನ್ನು ರೂಪಿಸುತ್ತವೆ ಎಂದು ಹೇಳಿದರು. ಡಾ.ಪ್ರಕಾಶ್ ಮರ್ಗನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದಲ್ಲಿ ಚಿಲ್ಡ್ರ ನ್ಸ್ ಆಫ್ ಹೆವೆನ್, ಬೇರು, ಟೀ ಸ್ಪೂನ್, ಲವ್ ಫೀಲ್ಡ್, 23//1 ಪುಷ್ಕರಂ, ದೂರದರ್ಶನ, ಯುವ ಶೃಂಗಾರಕಾವ್ಯ ಸಿನಿಮಾ ಮತ್ತು ಕಿರುಚಿತ್ರ, ಇರಾನಿ, ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಯ ಹಲವು ಸಿನಿಮಾಗಳನ್ನು ತೋರಿಸಲಾಯಿತು.

ಅಮರ ಪ್ರೇಮಿ ಅರುಣ್ ಚಿತ್ರದ ನಾಯಕ ನಟ ಹರಿಶರ್ವಾ ಭಾಗವಸಿದ್ದರು. ಎಚ್.ಮೋನಿಕಾ ಕಿಶೋರ್ ಕುಮಾರ್ ಆರು ಕಿರು ಸಂಸ್ಥೆ, ಭದ್ರಾವತಿ, ರಘು ಗುಂಡ್ಲು, ಮುರುಳಿ ಕುಟ್ಟಿ ಸಿನಿಮಾಸ್ ಶಿವಮೊಗ್ಗ, ವಿದ್ಯಾರ್ಥಿ ಕ್ಷೇಮಾಧಿಕಾರಿ ಶಿವಮೂರ್ತಿ.ಎ ಉಪಸ್ಥಿತರಿದ್ದರು.

ಶಿಬಿರದ ಸಂಚಾಲಕ ಡಾ.ಲವ ಜಿ.ಆರ್ ಪ್ರಾಸ್ತವಿಕವಾಗಿ ಮಾತನಾಡಿದರು.

Share this article