ಡಿಸೆಂಬರ್‌ ಒಳಗೆ ರೈತರ ಎಲ್ಲಾ ತೋಟಗಳಿಗೂ ನೀರು

KannadaprabhaNewsNetwork |  
Published : Nov 17, 2026, 01:30 AM IST
ಪುಣಜೂರು ರಸ್ತೆಯಿಂದ ಶಿವಪುರ ಮುಖ್ಯ ರಸ್ತೆವರೆಗೂ ಒಂದು ಕೋಟಿ ರೂ.ವೆಚ್ಚದ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿ ಪೂಜೆ. | Kannada Prabha

ಸಾರಾಂಶ

ಪುಣಜೂರು ರಸ್ತೆಯಿಂದ ಶಿವಪುರ ಮುಖ್ಯ ರಸ್ತೆವರೆಗೂ ₹1 ಕೋಟಿ ವೆಚ್ಚದ ನೂತನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ತುಂಗಾ ನದಿಯಿಂದ ಭದ್ರಾ ಪ್ರಾಜೆಕ್ಟ್‌ಗೆ ನೀರು ಲಿಫ್ಟ್ ಮಾಡಿ ಡಿಸೆಂಬರ್‌ ತಿಂಗಳ ಒಳಗೆ ರೈತರ ಎಲ್ಲಾ ತೋಟಗಳಿಗೂ ನೀರು ಹರಿಸುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.ಪುಣಜೂರು ಗ್ರಾಮದಲ್ಲಿ ಪುಣಜೂರು ರಸ್ತೆಯಿಂದ ಶಿವಪುರ ಮುಖ್ಯ ರಸ್ತೆವರೆಗೂ (ಹೊಳಲ್ಕೆರೆ ರೈಲ್ವೆ ಸ್ಟೇಷನ್‍ನಿಂದ ಪುಣಜೂರು ಕೂಡುವ ರಸ್ತೆ) ₹1 ಕೋಟಿ ವೆಚ್ಚದ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತದಲ್ಲಿದೆ ಎನ್ನುವುದು ಮುಖ್ಯವಲ್ಲ. ಹಣ ತರುವ ಯೋಗ್ಯತೆಯಿದೆ. ಇನ್ನೂ ಒಂದುವರೆ ವರ್ಷಗಳ ಕಾಲ ಪ್ರತಿನಿತ್ಯವು ಒಂದೊಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತೇನೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ₹367 ಕೋಟಿ ಖರ್ಚು ಮಾಡಿದ್ದೇನೆ. ನೀರಿನ ಮಧ್ಯೆ 120 ಅಡಿ ಆಳದಲ್ಲಿ ಪಿಲ್ಲರ್ ಕೂರಿಸಿ ದೊಡ್ಡ ಟ್ಯಾಂಕ್ ಕಟ್ಟಿ ಅಲ್ಲಿಂದು ನೀರು ತರಲಾಗುವುದು. ಸಾವಿರಾರು ಕೋಟಿ ರು.ಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ ಎಂದು ಹೇಳಿದರು.

ಚಿಕ್ಕಜಾಜೂರಿನ ಕೋಟೆಹಾಳ್ ಬಳಿ 13.5 ಎಕರೆ ಪ್ರದೇಶದಲ್ಲಿ ₹300 ಕೋಟಿ ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಜೋಗ್‍ಫಾಲ್ಸ್‌ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದೆ. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಉಚಿತವಾಗಿ ಬಸ್‍ಗಳನ್ನು ಕೊಟ್ಟಿದ್ದೇನೆ. ಭಾರತದಲ್ಲಿ ಯಾವ ಶಾಸಕನೂ ಇಂತಹ ಪುಣ್ಯ ಸಾರ್ಥಕ ಕೆಲಸ ಮಾಡಿಲ್ಲ. ಕುಡಿಯುವ ನೀರು, ರಸ್ತೆ, ಶಾಲಾ-ಕಾಲೇಜುಗಳ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವುದು, ಹೈಟೆಕ್ ಆಸ್ಪತ್ರೆ, ಹೀಗೆ ಎಲ್ಲಿ ಏನು ಅಗತ್ಯವಿದೆ ಎನ್ನುವುದನ್ನು ಹುಡುಕಿ ಹುಡುಕಿ ಕೆಲಸ ಮಾಡಿದ್ದೇನೆಂದು ತಿಳಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಾಂತಕುಮಾರಿ, ಕುಮಾರಣ್ಣ, ಸಿದ್ದರಾಮಪ್ಪ, ಅಕ್ಷಯ್, ಶಿವಾನಂದಪ್ಪ, ಭೋಜಪ್ಪ, ಬೇಬಿ ಶ್ಯಾಮಲಸ್ವಾಮಿ, ಮರುಳಸಿದ್ದಪ್ಪ, ತಿಮ್ಮಯ್ಯ, ರಾಮಚಂದ್ರಪ್ಪ, ಗೋವಿಂದಪ್ಪ, ಬಸವರಾಜಪ್ಪ, ಸುರೇಶ್ ಮಲ್ಯಾಪುರ ಹಾಗೂ ಪುಣಜೂರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹3,600 ನೀಡದಿದ್ದರೆ ನಾಳೆಯಿಂದ ಸಚಿವರ ಮನೆ ಎದುರು ಧರಣಿ
ಬ್ಯಾಡಗಿ ಯೂನಿಯನ್ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ: ಎರಡು ಕ್ಯಾಬಿನ್ ಸುಟ್ಟು ಭಸ್ಮ