ದೊಡ್ಡೇನಹಳ್ಳಿಯಲ್ಲಿ ನೀರಿನದ್ದೇ ದೊಡ್ಡ ಸಮಸ್ಯೆ

KannadaprabhaNewsNetwork |  
Published : Mar 13, 2026, 01:15 AM IST
ಫೋಟೋ 12ಪಿವಿಡಿ3ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದಲೂ ಶುದ್ದ ನೀರಿನ ಘಟಕ ದುರಸ್ತಿ ಪಡಿಸದ ಪರಿಣಾಮ ಕುಡಿಯುವ ನೀರಿಗೆ ಮಹಿಳೆಯರ ಪರದಾಟಪಡುತ್ತಿದ್ದಾರೆ.ಫೋಟೋ 12ಪಿವಿಜಿ3ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಪಾಠಶಾಲಾ ಸಮೀಪದಲ್ಲಿಯೆ ಆನೈರ್ಮಲ್ಯ ತಾಂಡವ.ಫೋಟೋ 12ಪಿವಿಡಿ4ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ಚರಂಡಿ ದುರಸ್ತಿ ಕಾಣದೇ ಕೊಳಚೆ ನೀರು ರಸ್ತೆಗೆ ಹರಿದು ಗಜ್ಜುನಾಥ ಹೊಡೆಯುತ್ತಿದೆ.     | Kannada Prabha

ಸಾರಾಂಶ

ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಪರದಾಟ ಹಾಗೂ ಚರಂಡಿಗಳ ಸ್ವಚ್ಛತೆ ಇಲ್ಲದೆ ಅನೈರ್ಮಲ್ಯ ತಾಂಡವಾಡುವ ಸ್ಥಿತಿ ಬಂದೋದಗಿದೆ.

ಕನ್ನಡಪ್ರಭವಾರ್ತೆ ಪಾವಗಡ

ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಪರದಾಟ ಹಾಗೂ ಚರಂಡಿಗಳ ಸ್ವಚ್ಛತೆ ಇಲ್ಲದೆ ಅನೈರ್ಮಲ್ಯ ತಾಂಡವಾಡುವ ಸ್ಥಿತಿ ಬಂದೋದಗಿದೆ. ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಮೂರು ನಾಲ್ಕು ಕಿಮೀ ದೂರದ ಪ್ರದೇಶದ ರೈತರ ಕೊಳವೆಬಾವಿ ಹಾಗೂ ಇತರೆ ಗ್ರಾಮಗಳ ಶುದ್ದ ನೀರಿನ ಘಟಕಗಳಿಂದ ನೀರು ತಂದು ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಅನೇಕ ಬಾರಿ ಮನವಿ ಮಾಡಿದರೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿ ನಿರ್ಲಕ್ಷ್ಯವಹಿಸಿದ್ದು, ತಾಪಂ ಇಒ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು,ಹಾಗೂ ದಲಿತ ಮಹಿಳೆಯರು ಅಳಲು ತೊಡಿಕೊಂಡಿದ್ದಾರೆ. ಈ ಸಂಬಂಧ ತಾಳೇ ಮರದಹಳ್ಳಿ ಗೋವಿಂದಪ್ಪ ಮಾತನಾಡಿ, ಇದು ಸರ್ಕಾರಿ ಸೌಲಭ್ಯದಿಂದ ವಂಚಿತಗೊಂಡ ಊರಾಗಿದೆ. ಇಲ್ಲಿ ಸುಮಾರು 600ಕ್ಕಿಂತ ಹೆಚ್ಚು ಕುಟುಂಗಳು ವಾಸವಾಗಿದ್ದು, ಗ್ರಾಪಂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಪರಿಣಾಮ ಅಭಾವ ಸೃಷ್ಟಿಯಾಗಿ ಕಳೆದ 3ತಿಂಗಳಿಂದಲೂ ಶುದ್ಧ ಕುಡಿಯುವ ನೀರಿಗೆ ಪರದಾಟ ಶುರುವಾಗಿದೆ. ಸಮೀಪದ ವದನಕಲ್ಲು ಹಾಗೂ ರಂಗಸಮುದ್ರಗಳ ಘಟಕಗಳಿಗೆ ಬೈಕ್‌ ಹಾಗೂ ಇತರೆ ವಾಹನಗಳಲ್ಲಿ ತೆರಳಿ ಶುದ್ಧ ಕುಡಿಯುವ ನೀರು ತರಬೇಕಿದೆ. ಜಿಪಂ ನಿಂದ ತುಂಗಭದ್ರಾ ಕುಡಿಯುವ ನೀರು ಮನೆಮನೆಗೆ ಸರಬರಾಜ್‌ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದು, ಗ್ರಾಮದ ಯಾವುದೇ ಮನೆಗೂ ತುಂಗಭದ್ರಾ ಯೋಜನೆ ನೀರು ಸರಬರಾಜು ಆಗುತ್ತಿಲ್ಲ ಎಂದರು. ಗ್ರಾಮದ ಕಂಚಪ್ಪ ಮಾತನಾಡಿ, ಗ್ರಾಮದಲ್ಲಿ ಚರಂಡಿಗಳು ಸ್ವಚ್ಛತೆ ಕಾಣದೇ ಅನೇಕ ತಿಂಗಳುಗಳು ಕಳೆದಿದ್ದು ಗಬ್ಬು ನಾಥ ಹೊಡೆಯುತ್ತಿವೆ. ಮನೆಗಳ ಬಚ್ಚಲು ಇತರೆ ಶೌಚಾಲಯಗಳ ನೀರು ಚರಂಡಿಗಳಲ್ಲಿ ಶೇಖರಣೆಯಾಗಿದ್ದು, ದುರಸ್ತಿ ಕಾಣದೆ ಕಟ್ಟಿಕೊಂಡ ಕಾರಣ ಚರಂಡಿಗಳ ಗಲೀಜು ನೀರು ರಸ್ತೆಗೆ ಹರಿದುಬರುತ್ತಿದೆ. ಗ್ರಾಮದ ತಾಂಡವಾಗುತ್ತಿರುವ ಸಮಸ್ಯೆ ಕುರಿತು ಸ್ಥಳೀಯ ಯಾವ ಅಧಿಕಾರಿ ಗಮನಕ್ಕೂ ತಂದರೂ ಪ್ರಯೋಜನವಾಗುತ್ತಿಲ್ಲ. ಗ್ರಾಪಂ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಇತ್ತ ಗಮನಹರಿಸಿ ಕುಡಿಯುವ ನೀರು ಸಮಸ್ಯೆ ಚರಂಡಿ ದುರಸ್ತಿ ಮತ್ತು ನೈರ್ಮಲ್ಯ ಶುಚಿತ್ವ ಕಾಪಾಡುವಂತೆ ಒತ್ತಾಯಿಸಿ ಮನವಿ ಮಾಡಿದ್ದಾರೆ. ಇದೇ ವೇಳೆ ಕಂಪ್ಲಪ್ಪ, ಕೆಂಚಪ್ಪ ಶಿವಪ್ಪ, ಸುನಿಲ್‌ ಕುಮಾರ್‌, ಲೋಕೇಶ್‌, ಲಕ್ಷ್ಮೀದೇವಮ್ಮ, ಜಯಮ್ಮ, ಮಹದೇವಮ್ಮ, ಯಶೋಧಮ್ಮ, ಅಶೋಕ್‌, ಶ್ರೀದೇವಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅಡಿಗಲ್ಲುಗಳು: ಜಿ.ಮುನಿರೆಡ್ಡಿ
ಕರ್ನಾಟಕದ ರಫ್ತುಗಳ ಭವಿಷ್ಯ ಅತ್ಯಂತ ಪ್ರಕಾಶಮಾನ