೧೬ ಕೆರೆಗಳಿಗೆ ನೀರು ಯೋಜನೆ: 2 ಮೋಟಾರ್‌ಗಳ ಟ್ರಯಲ್‌ ರನ್‌

KannadaprabhaNewsNetwork |  
Published : Jun 18, 2024, 12:50 AM IST
17 ಜೆ.ಜಿ.ಎಲ್.1) ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ಬರುತ್ತಿರುವ ದೃಷ್ಯ. | Kannada Prabha

ಸಾರಾಂಶ

ಜಗಳೂರು ತಾಲೂಕಿನ ೫೭ ಕೆರೆ ತುಂಬಿಸುವ ಯೋಜನೆಯಾದ ತುಂಗಭದ್ರಾ ನದಿಯಿಂದ ನೀರೆತ್ತುವ ಏತ ನೀರಾವರಿ ಯೋಜನೆ ಮೊದಲ ಹಂತದ ಕೆರೆಗಳಿಗೆ ನೀರು ಹರಿಸುವ ಟ್ರಯಲ್ ರನ್‌ಗೆ ಕರ್ನಾಟಕ ನೀರಾವರಿ ನಿಗಮದ ದಾವಣಗೆರೆ ವಿಭಾಗದ ಎಂಜಿನಿಯರ್‌ಗಳು ಚಾಲನೆ ನೀಡಿದ್ದಾರೆ.

- ಆನ್ ಮಾಡಿರುವ 2 ಮೋಟಾರ್‌ಗಳಿಗೂ ತುಂಗಭದ್ರಾ ನದಿಯಲ್ಲಿ ನೀರಿಲ್ಲ

- ನಾಳೆ ಮಧ್ಯಾಹ್ನ ಟ್ರಯಲ್ ರನ್‌ ಬಂದ್‌: ಎಂಜಿನಿಯರುಗಳ ಹೇಳಿಕೆ - - - ಕನ್ನಡಪ್ರಭವಾರ್ತೆ ಜಗಳೂರು

ತಾಲೂಕಿನ ೫೭ ಕೆರೆ ತುಂಬಿಸುವ ಯೋಜನೆಯಾದ ತುಂಗಭದ್ರಾ ನದಿಯಿಂದ ನೀರೆತ್ತುವ ಏತ ನೀರಾವರಿ ಯೋಜನೆ ಮೊದಲ ಹಂತದ ಕೆರೆಗಳಿಗೆ ನೀರು ಹರಿಸುವ ಟ್ರಯಲ್ ರನ್‌ಗೆ ಕರ್ನಾಟಕ ನೀರಾವರಿ ನಿಗಮದ ದಾವಣಗೆರೆ ವಿಭಾಗದ ಎಂಜಿನಿಯರ್‌ಗಳು ಚಾಲನೆ ನೀಡಿದ್ದಾರೆ.

೧೬ ಕೆರೆಗಳಿಗೆ ಸೋಮವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು. ಹರಿಹರದ ತುಂಗಭದ್ರಾ ನದಿಯಿಂದ ಚಟ್ನಳ್ಳಿ ಗುಡ್ಡದವರೆಗೆ ನೀರು ಹರಿಸಲು ಎರಡು ಮೋಟಾರ್‌ಗಳನ್ನು ಆನ್ ಮಾಡಲಾಗಿದೆ ಎಂದು ಎಇಇ ಶ್ರೀಧರ್ ಮತ್ತು ಎಇ ಆನಂದ್ ಮಾಹಿತಿ ನೀಡಿದರು.

ಏರ್‌ಔಟ್‌ಗೆ ಮೋಟಾರ್‌ಗಳ ಆನ್‌:

ಪ್ರಾರಂಭದಲ್ಲಿ ಅರಸಿಕೆರೆಯ ಉಚ್ಚಂಗಿದುರ್ಗ ಭಾಗದಲ್ಲಿರುವ ಯು.ಕಲ್ಲಹಳ್ಳಿ, ನಂದಿಕಂಬ, ಚಟ್ನಳ್ಳಿ, ಕುರೆಮಾಗನಹಳ್ಳಿ ಸೇರಿದಂತೆ ಆರು ಕೆರೆಗಳು ಮತ್ತು ಜಗಳೂರು ತಾಲೂಕಿನ ತುಪ್ಪದಹಳ್ಳಿ, ಹಾಲೇಕಲ್ಲು, ಚದರಗೊಳ್ಳ, ಮೆದಗಿನಕೆರೆ ಸೇರಿದಂತೆ ೯ ಕೆರೆಗಳಿಗೆ ಎರಡು ಮೋಟಾರ್ ಮೂಲಕ ನೀರು ಹರಿಸಲು ಪ್ರಾಯೋಗಿಕವಾಗಿ ಕ್ರಮ ಕೈಗೊಂಡಿದ್ದೇವೆ. ಆದರೆ, ಆನ್ ಮಾಡಿರುವ ಎರಡು ಮೋಟಾರ್‌ಗಳಿಗೂ ನದಿಯಲ್ಲಿ ನೀರಿಲ್ಲ. ಏರ್‌ಔಟ್ ಮಾಡುವ ಸಲುವಾಗಿ ಮೋಟಾರ್‌ಗಳನ್ನು ಆನ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

೩೩ ಕೆರೆಗಳಿಗೆ ನೀರು ಹರಿಸಲು ಸಿದ್ಧ:

ತುಂಗಭದ್ರಾ ನದಿ ಪಾತ್ರದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಹೊಳೆ ತುಂಬುತ್ತದೆ. ಆದರೆ, ಒಂದು ವಾರದಿಂದ ಮಳೆ ಸ್ಥಬ್ಧವಾಗಿದೆ. ಮಳೆಗಾಗಿ ಕಾಯುತ್ತಿದ್ದೇವೆ ಎಂದು ಕರ್ನಾಟಕ ನೀರಾವರಿ ನಿಗಮದ ಎಂಜಿಯರುಗಳು ತಿಳಿಸಿದ್ದಾರೆ. ಮಳೆ ಬಂದರೆ ೩೩ ಕೆರೆಗಳಿಗೆ ನೀರು ಹರಿಸಲು ಸಿದ್ಧವಾಗಿದ್ದೇವೆ. ನೀರಿಲ್ಲದ ಕಾರಣ ಟ್ರಯಲ್ ರನ್ ನಾಳೆ ಮಧ್ಯಾಹ್ನ ಬಂದ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

- - - -17ಜೆ.ಜಿ.ಎಲ್.1:

ಜಗಳೂರು ತಾಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ಬರುತ್ತಿರುವ ದೃಶ್ಯ.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?