ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗ್ರಾಮ ಪಂಚಾಯತಿ ಹಳದೂರದಲ್ಲಿಯೇ ಇದೆ. ಸಾಕಷ್ಟು ಬಾರಿ ಹೇಳಿದರೂ ಪಿಡಿಒ ಹಾಗೂ ಸಿಬ್ಬಂದಿ ನೀರು ಪೂರೈಕೆ ಮಾಡುತ್ತಿಲ್ಲ. ನೀರು ಪೂರೈಸುವ ಇಂಜಿನವಾರಿ ಹತ್ತಿರದ ಘಟಕದಲ್ಲಿ ಯಂತ್ರಗಳ ರಿಪೇರಿ ಇದೆ ಎಂದು ಹೇಳುತ್ತಿದ್ದು, ತಕ್ಷಣ ದುರಸ್ತಿ ಮಾಡುವ ವ್ಯವಸ್ಥೆಯೂ ಇಲ್ಲ. ಇದರಿಂದ ಗ್ರಾಮದಲ್ಲಿ ಮೇಲಿಂದ ಮೇಲೆ ಕುಡಿಯುವ ನೀರಿನ ತೊಂದರೆ ತಪ್ಪಿದ್ದಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ಶಿವು ಚೊಳಚಗುಡ್ಡ ಆರೋಪಿಸಿದ್ದಾರೆ.
ನದಿಗೆ ನೀರು ತರಲು ಹಾಗೂ ಬಟ್ಟೆ ತೊಳೆಯಲು ಹೋದರೆ ಮೊಸಳೆಗಳ ಕಾಟವಿದೆ. ಏನಾದರೂ ಅನಾಹುತವಾದರೆ ಯಾರು ಹೊಣೆ ಎಂದು ಮಹಿಳೆಯರು ಪ್ರಶ್ನಿಸುತ್ತಾರೆ. ಕುಡಿಯುವ ನೀರು ಟ್ಯಾಪ್ ಗಳ ಗುಂಡಿಗಳಲ್ಲಿ ಪೈಪ್ ಲೀಕೇಜ್ ಇದ್ದರೂ ಅದನ್ನು ದುರಸ್ತಿಗೊಳಿಸದೇ ಮಲೀನ ನೀರು ತೆಗೆಯದೇ ನೀರು ಬಿಡುತ್ತಾರೆ. ಇದರಿಂದ ಲೀಕೇಜ್ ಇರುವ ಕುಡಿಯುವ ನೀರಿನ ಪೈಪ್‌ನಲ್ಲಿ ಕೊಳಚೆ ನೀರು ಸಹ ಪೂರೈಕೆಯಾಗುತ್ತಿದೆ. ಇದರಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಂದ ನರಳುವಂತಾಗಿದೆ ಎಂದು ಲಕ್ಷ್ಮವ್ವ ಮಲ್ಲಪ್ಪ ಕುರಿ, ಯಮನವ್ವ ಕುರಿ, ಬಸಯ್ಯ ನಿಂಬರಗಿಮಠ, ಗ್ರಾಪಂ ಮಾಜಿ ಸದಸ್ಯೆ ಲಕ್ಷ್ಮೀಬಾಯಿ ಕುರಿ, ಮಹಾಂತವ್ವ ನಿಂಬರಗಿಮಠ, ಗ್ರಾಪಂ ಮಾಜಿ ಸದಸ್ಯ ಶಿವು ಚೊಳಚಗುಡ್ಡ, ಶಾರವ್ವ ನಿಂಬರಗಿಮಠ ಸೇರಿ ಇತರರು ದೂರಿದರು.ಹತ್ತಾರು ಸಮಸ್ಯೆಗಳು: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಹತ್ತಾರು ಸಮಸ್ಯೆಗಳಿವೆ. ಸ್ವಚ್ಛತೆ, ಬೀದಿ ದೀಪ ನಿರ್ವಹಣೆ, ರಸ್ತೆ ನಿರ್ಮಾಣ, ಕೆಲ ವಾರ್ಡಗಳಲ್ಲಿ ವಿದ್ಯುತ್ ಕಂಬಗಳಿಲ್ಲ, ಅಂಗನವಾಡಿಯಲ್ಲಿ ಕಾರ್ಯಕರ್ತೆಯ ನೇಮಕಾತಿ ಆಗಿಲ್ಲ. ಮನೆ ಮನೆಯ ಕಸ ವಿಲೇವಾರಿಯೂ ಆಗುತ್ತಿಲ್ಲ. ಹೀಗೆ ಹತ್ತಾರು ಸಮಸ್ಯೆಗಳ ಆಗರವಾಗಿದೆ ಎಂದು ಗ್ರಾಮಸ್ಥರು ನೋವಿನಿಂದ ಹೇಳುತ್ತಾರೆ.ಸಮಸ್ಯೆಗಳ ಕುರಿತು ಸಾಕಷ್ಟು ಬಾರಿ ಗ್ರಾಮ ಪಂಚಾಯತಿಗೆ ಹೋಗಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಆದಷ್ಟು ಬೇಗ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಸೇರಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಗ್ರಾಪಂ ಮಾಜಿ ಸದಸ್ಯ ಶಿವು ಚೊಳಚಗುಡ್ಡ, ಅಣ್ಣಪ್ಪ ಕಂಬಾರ, ಈರಣ್ಣ ಹೊರಗಿನಮಠ, ಈರಣ್ಣ ಹುನಗುಂದ, ಹಣಮಂತ ಚಲವಾದಿ, ಯಲಗುರ್ದಪ್ಪ ಮೂಲಿಮನಿ, ರಂಜಾನಸಾಬ್ ಸಾರಥಿ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.
-ಗೂಳಪ್ಪ ಹೊರ್ತಿ ಪಿಡಿಒ ಹಳದೂರ ಗ್ರಾಪಂ