ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ಪಟ್ಟಣಕ್ಕೆ ಆಲಮಟ್ಟಿ ಕುಡಿಯುವ ನೀರು ಸರಬರಾಜು ಮಾಡುವ ಆಲಮಟ್ಟಿ ಜಾಕವೆಲ್‌ನಲ್ಲಿ ಸೋರಿಕೆ ಉಂಟಾಗಿದ್ದರಿಂದ ಒಂದು ವಾರದಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಪಟ್ಟಣಕ್ಕೆ ಆಲಮಟ್ಟಿ ಕುಡಿಯುವ ನೀರು ಸರಬರಾಜು ಮಾಡುವ ಆಲಮಟ್ಟಿ ಜಾಕವೆಲ್‌ನಲ್ಲಿ ಸೋರಿಕೆ ಉಂಟಾಗಿದ್ದರಿಂದ ಒಂದು ವಾರದಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಗುಳೇದಗುಡ್ಡ ಪಟ್ಟಣ ಸೇರಿದಂತೆ ಕೆಲವು ಹಳ್ಳಿಗಳು ಸಂಪೂರ್ಣ ಆಲಮಟ್ಟಿ ಜಲಾಶಯದ ನೀರನ್ನೇ ಅವಲಂಭಿಸಿದ್ದು, ಬೇಸಿಗೆ ಸಮಯ ಆಗಿರುವುದರಿಂದ ಈ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಕೆಲವರು ಖಾಸಗಿ ಬೋರವೆಲ್‌ಗಳಿಂದ ನೀರು ಪಡೆದರೆ, ಇನ್ನು ಕೆಲವರು ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ಆಲಮಟ್ಟಿ ನೀರು ಪೂರೈಕೆಯಾಗುವ ಮಾರ್ಗ ಮಧ್ಯದ ಗ್ರಾಮಸ್ಥರು ನೀರಿಲ್ಲದೆ ಪರದಾಡುವಂತಾಗಿದೆ. ಬೂದಿನಗಡ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಗ್ರಾಮದೇವತೆ ಜಾತ್ರೆ ಇರುವುದರಿಂದ ನೀರಿನ ಕೊರತೆಯಿಣದ ಜಾತ್ರೆಗೆ ಆಗಮಿಸಿದ ಬಂಧುಗಳು ಮತ್ತು ಆತ್ಮೀಯರು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಆದಷ್ಟು ಬೇಗ ಜಾಕ್ವೆಲ್ ದುರಸ್ತಿ ಮಾಡಿ ನೀರು ಪೂರೈಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-----ಕೋಟ್-----
ಬೂದಿನಗಡ ಗ್ರಾಮದ 3 ಜನ ರೈತರ ಕೊಳವೆಬಾವಿಗಳಿಂದ ಜನರಿಗೆ ನೀರು ಕೊಡಲಾಗುತ್ತಿದೆ. ನೀರಿನ ಪೂರೈಕೆಯಲ್ಲಿ ಸ್ವಲ್ಪ ತೊಂದರೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಜಾಕ್ವೆಲ್ ರಿಪೇರಿ ಕೆಲಸ ಆರಂಭವಾಗಿದ್ದು, ಶನಿವಾರದ ವೇಳೆಗೆ ಮುಗಿಯಲಿದ್ದು, ಬಳಿಕ ನೀರು ಪೂರೈಕೆ ಮಾಡಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.