ಭದ್ರಾ ಮೇಲ್ದಂಡೆ ಚಾನೆಲ್ ನಲ್ಲಿ ಬೇಸಿಗೆಯಲ್ಲಿ ನೀರು ಹರಿಸಲಾಗುವುದು: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Feb 21, 2025, 11:49 PM IST
ಬೆಟ್ಟತಾವರೆಕೆರೆ ಗ್ರಾಮದಲ್ಲಿ ನೂತನ ಅಕ್ಷರ ದಾಸೋಹ ಕೊಠಡಿಯ ಉದ್ಘಾಟನೆ  | Kannada Prabha

ಸಾರಾಂಶ

ತರೀಕೆರೆ, ಗ್ರಾಮಸ್ಥರು ಬೇಡಿಕೆಯಿಂತೆ ಭದ್ರಾ ಮೇಲ್ದಂಡೆ ಚಾನೆಲ್ ನಲ್ಲಿ ಈ ಬೇಸಿಗೆಯಲ್ಲಿ ನೀರು ಹರಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಬೆಟ್ಟತಾವರೆಕೆರೆ ಗ್ರಾಮದಲ್ಲಿ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಗ್ರಾಮಸ್ಥರು ಬೇಡಿಕೆಯಿಂತೆ ಭದ್ರಾ ಮೇಲ್ದಂಡೆ ಚಾನೆಲ್ ನಲ್ಲಿ ಈ ಬೇಸಿಗೆಯಲ್ಲಿ ನೀರು ಹರಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಬೆಟ್ಟತಾವರೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ಹಾಗೂ ಶ್ರೀ ಸಿರಿ ಜೀವ ಜಲ ಶುದ್ಧಗಂಗಾ ಕುಡಿಯುವ ನೀರು ಘಟಕ ಶಂಕುಸ್ಥಾಪನೆ ಮತ್ತು ರಂಗ ಮಂದಿರ ಉದ್ಘಾಟನೆ ಎಫ್.ಎಲ್.ಎನ್. ಕಲಿಕಾ ಹಬ್ಬಉದ್ಘಾಟನೆ ನೆರವೇರಿಸಿ ಮಾತನಾಡಿದರು. ಆರೋಗ್ಯ ಕೇಂದ್ರಕ್ಕೆ ಜಾಗ ಮಂಜೂರು ಮಾಡಿ ನಿರ್ಮಾಣ ಮಾಡಿಸಲಾಗುವುದು. ಜನರ ಆರೋಗ್ಯ ದೃಷ್ಟಿಯಿಂದ ಊರಿನ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕ ಶಂಕುಸ್ಥಾಪನೆ ಮಾಡಿದ್ದು ಜನರಿಗೆ ಅದನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಎಫ್.ಎಲ್.ಎನ್. ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಕಲಿಕೆಯಲ್ಲಿ ಕಲಿತ ವಿಷಯಗಳನ್ನು ಸ್ಪರ್ಧಾತ್ಮಕ ರೂಪದಲ್ಲಿ ಚಟುವಟಿಕೆ ಮಾಡಿ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಅನುಕೂಲವಾಗುವುದು. ಒಂದರಿಂದ ಐದನೇ ತರಗತಿ ಮಕ್ಕಳು ನಡೆಸುತ್ತಿರುವ ಕಾರ್ಯಕ್ರಮ. ಇದಕ್ಕೆ ಸರ್ಕಾರದಿಂದ ಇಲಾಖೆಯ ಪ್ರತಿ ಕ್ಲಸ್ವರಿಗೆ ₹ 25000 ಶಿಕ್ಷಣ ಇಲಾಖೆ ನೀಡುತ್ತದೆ. ಮಕ್ಕಳು ಅಡುಗೆ ಮತ್ತು ಊಟ ಮಾಡಲು ಅನುಕೂಲವಾಗುವಂತೆ ದಾಸೋಹ ಭವನ ನಿರ್ಮಿಸಲಾಗುವುದು ಎಂಧರು.

ಶಾಲೆ ಕೊಠಡಿಗಳನ್ನು ಮೇಲ್ಚಾವಣಿ ಹಾಳಾಗಿದ್ದು ಈ ವರ್ಷದಲ್ಲಿ ಒಂದು ಕೊಠಡಿ ಮೇಲ್ಚಾವಣಿ ರಿಪೇರಿ ಮಾಡಿಸಿದ್ದೇನೆ. ಮುಂದಿನ ತಿಂಗಳು ಎಲ್ಲಾ ಕೊಠಡಿಗಳು ಮೇಲ್ಚಾವಣಿಯನ್ನು ಆದಷ್ಟು ಬೇಗ ರಿಪೇರಿ ಮಾಡಿಸುವಂತೆ ಇಲಾಖೆ ಅಧಿಕಾರಿ ಗಳಿಗೆ ತಿಳಿಸಿದ ಅವರು ಮಕ್ಕಳ ಶೌಚಾಲಯ ರಿಪೇರಿ ಮತ್ತು ಆಟದ ಮೈದಾನವನ್ನು ಶಾಲೆ ಹೆಸರಿಗೆ ಮಾಡಿಸುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಶುರಾಮಪ್ಪ ಮಾತನಾಡಿ, ನ್ಯುಮೋನಿಯಾ ದಿಂದ ಬಳಲುತ್ತಿರುವ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿನಿ ಎಸ್. ಸಿ. ಬೃಂದಾ ಅವರಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘರದಿಂದ ₹1ಲಕ್ಷ ನೆರವಿನ ಚೆಕ್ ನೀಡಲಾಯಿತು. ತಾಲೂಕು ಪಂಚಾಯಿತಿ ಇ. ಒ. ದೇವೇಂದ್ರಪ್ಪ. ಅಜ್ಜಂಪುರ ತಾಲೂಕು ಪಂಚಾಯತಿ ಇ.ಒ. ವಿಜಯಕುಮಾರ್. ನೌಕರ ಸಂಘದ ತಾಲೂಕು ಅಧ್ಯಕ್ಷ ಆನಂತಪ್ಪ,ಶಿಕ್ಷಕರ ಸಂಘದ ತಾಲೂಕ್ ಅಧ್ಯಕ್ಷ ಧರಣೇಶ, ತರೀಕೆರೆ ಕೆರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ.ಬಿ.ಜಿ.ಗೌರೀಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಆರ್. ಆನಂದ. ಕೋರನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಯಮ್ಮ., ಉಪಾಧ್ಯಕ್ಷ ಮಂಜ ನಾಯಕ್. ಸದಸ್ಯರಾದ ಸುಮಿತ್ರಮ್ಮ, ಪಿಡಿಒ ಚೇತನ್, ಮುಖ್ಯಶಿಕ್ಷಕಿ ಉಮಾ.ಸಿ ಆರ್ ಪಿ ಮಮತಾ, ಸಹ ಶಿಕ್ಷಕ ಕುಮಾರಸ್ವಾಮಿ. ಬೆಟ್ಟತಾವರೆಕೆರೆ ಗ್ರಾಮದ ಗ್ರಾಮಸ್ಥರು ಎಲ್ಲ ಸಂಘ ಸಂಸ್ಥೆಗಳು, ಆರೋಗ್ಯ ಇಲಾಖೆ ಅಂಗನವಾಡಿ ಕೇಂದ್ರಗಳು ಪಂಚಾಯತ್ ಸಿಬ್ಬಂದಿ ಭಾಗವಹಿಸಿದ್ದರು,

21ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಬೆಟ್ಟತಾವರೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ಶ್ರೀ ಸಿರಿ ಜೀವ ಜಲ ಶುದ್ದ ಗಂಗಾ ಕುಡಿಯುವ ನೀರು ಘಟಕ ಶಂಕುಸ್ಥಾಪನೆ ಮತ್ತು ರಂಗ ಮಂದಿರ ಉದ್ಘಾಟನೆ ಎಫ್,.ಎಲ್.ಎನ್. ಕಲಿಕಾ ಹಬ್ಬ ಉದ್ಘಾಟಿಸಿದರು.ತರೀಕೆರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ.ಬಿ.ಜಿ.ಗೌರೀಶ್, ನೌಕರ ಸಂಘದ ತಾಲೂಕು ಅಧ್ಯಕ್ಷ ಆನಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಶುರಾಮಪ್ಪ ಮತ್ತಿತರರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ