ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಕೋಕಿಲ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್ .ಪ್ರಸನ್ನ ಕುಮಾರ್ ಸೇರಿದಂತೆ ಬೆಂಬಲಿಗರು ಶಾಸಕರ ನಿಲುವನ್ನು ಸಮರ್ಥಿಸಿಕೊಂಡರು.
ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ,ಗೊರವನಹಳ್ಳಿ , ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳ ಸೇರ್ಪಡೆಯಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆತು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಯಾವುದೇ ಶಾಸಕರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡದ ಕಾರಣ ಹಿಂದುಳಿದ ಕ್ಷೇತ್ರವಾಗಿ ಉಳಿದುಕೊಂಡಿದೆ. ಆನಂತರ ಶಾಸಕರಾಗಿ ಆಯ್ಕೆಯಾದ ಉದಯ್ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪಟ್ಟಣದ ಎಲ್ಲಾ ವಾರ್ಡ್ ಗಳ ರಸ್ತೆ, ಮೂಲ ಸೌಲಭ್ಯಗಳಿಗೆ ಮತ್ತು ಕೆಮ್ಮಣ್ಣುನಾಲ ಆಧುನಿಕರಣ, ಪೇಟೆ ಬೀದಿ ಅಗಲಿಕರಣ ಸೇರಿದಂತೆ ಕೆಲವೊಂದು ಅಡೆತಡೆಗಳು ಬರುತ್ತಿದ್ದರೂ ಸಹ ಎಲ್ಲವನ್ನು ಎದುರಿಸಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.ನಗರಸಭೆಗೆ ಗ್ರಾಪಂಗಳ ಸೇರ್ಪಡೆ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕೆ ಆಯಾ ಗ್ರಾಮಗಳ ಜನಪ್ರತಿನಿಧಿಗಳು, ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಕೈಜೋಡಿಸಬೇಕು ಎಂ.ಡಿ. ಮಹಾಲಿಂಗಯ್ಯ ಮನವಿ ಮಾಡಿದರು.
ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ವನಿತಾ, ಮಾಜಿ ಸದಸ್ಯರಾದ ಸಿದ್ದರಾಜು, ಎಂ.ಬಿ .ಸಚಿನ್, ಬಸವರಾಜು, ಡಾಬಾ ಮಹೇಶ್, ಎನ್,ಸಿ .ರಘು, ಮಹಮದ್ ಸಲಾರ್, ಮುನ್ಶಿಪ್, ಯಾಸಿನ್ ಮತ್ತಿತರರು ಇದ್ದರು.