ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತ್ರಿವಿಧ ದಾಸೋಹಿಗಳು ಹಾಗೂ ನಡೆದಾಡುವ ದೇವರು ಡಾ. ಶಿವಕುಮಾರಸ್ವಾಮೀಜಿ ಅವರನ್ನು ಕಂಡ ನಾವುಗಳೇ ಧನ್ಯರು. ಅಂತಹ ಮಹಾ ಪುರುಷರು ನಡೆದಂತಹ ದಾರಿ ನಮಗೆ ದಾರಿ ದೀಪವಾಗಿದೆ. ಅಕ್ಷರಾಭ್ಯಾಸದ ಜತೆಗೆ ಅನ್ನ ದಾಸೋಹದ ಪರಂಪರೆಯನ್ನು ಮಠದಲ್ಲಿ ಪಾಲಿಸಿದ ಪೂಜ್ಯರ ಆದರ್ಶಗಳನ್ನು ನಾವುಗಳು ಪಾಲನೆ ಮಾಡೋಣವೆಂದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಸಲಹೆ ನೀಡಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾ. ವಕೀಲರ ಸಂಘ ಆಯೋಜಿಸಿದ್ದ ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮಿಜೀಯವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ರೀತಿಯ ಕಾರ್ಯಕ್ರಮಗಳ ಮೂಲಕ ಪೂಜ್ಯರನ್ನು ನೆನಪಿಸಿಕೊಳ್ಳುವ ಜತೆಗೆ ಅವರ ಜೀವನದ ಆದರ್ಶಗಳು ಮಾರ್ಗದರ್ಶನ ನೀಡುತ್ತದೆ ಮತ್ತು ಪಾಲನೆ ಮಾಡುವ ಮೂಲಕ ಜೀವನ ಪಾವನ ಮಾಡಿಕೊಳ್ಳೋಣವೆಂದು ಕರೆಕೊಟ್ಟರು.
ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಮಾತನಾಡಿ, ಸ್ವಾಮೀಜಿಗಳು ಶ್ರೀ ಮಠದ ಜವಾಬ್ದಾರಿ ವಹಿಸಿಕೊಂಡಂತಹ ಸಂದರ್ಭದಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಅಸಮಾನತೆ ತಾಂಡವ ಆಡುತ್ತಿದ್ದ ಸಂದರ್ಭದಲ್ಲಿಯೂ ಯಾವುದೇ ರೀತಿಯ ತಾರತಮ್ಯ ಮಾಡದೇ ಭಿಕ್ಷಾಟನೆ ಮಾಡುವ ಮೂಲಕ ಕರ್ತವ್ಯ ನಿರ್ವಹಿಸುವ ಜತೆಗೆ ಅಚ್ಚುಕಟ್ಟಾಗಿ ದಶಕಗಳ ಕಾಲ ಯಾವುದೇ ಕಳಂಕವಿಲ್ಲದೇ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಮಾಡುತ್ತಾ ಸ್ವಾಮೀಜಿಗಳು ಮಾಡಿರುವ ಸಾಧನೆ ಆಸಾಧಾರಣವಾಗಿದೆ ಎಂದು ಸ್ಮರಿಸುತ್ತಾ ಹಲವಾರು ವಿಷಯ ಕುರಿತು ಮಾತನಾಡಿದರು.ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್ ಪ್ರಧಾನ ಭಾಷಣ ಮಾಡಿದರು. ಗಂಗಾರಾಜು ಪ್ರಾರ್ಥಿಸಿದರು, ಕೃಷ್ಣಮೂರ್ತಿ ಸ್ವಾಗತಿಸಿದರು ಹಾಗೂ ಶಿವಮೂರ್ತಿ ನಿರೂಪಿಸಿದರು.
ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಗುಡದಿನ್ನಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸುನೀಲ್ ಕುಮಾರ್, ಶಿವಕುಮಾರ್ ಹಾಗೂ ಶಿರೀನ್, ತಾ. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಹಿರಿಯ ವಕೀಲರಾದ ಉದಯರಂಜನ್, ಎಚ್.ಎಸ್.ಅರುಣ್ ಕುಮಾರ್, ರಾಮಪ್ರಸನ್ನ, ಪುರುಷೋತ್ತಮ್, ರವೀಶ್, ನಟರಾಜ್, ಸತೀಶ್, ಮೈತ್ರಿ, ಕೆ.ಎಸ್.ಪ್ರಕಾಶ್, ರಾಮಪ್ರಸಾದ್, ಬಲರಾಮ, ಕೃಷ್ಣೇಗೌಡ, ರವಿ, ದೇವರಾಜ್, ಚೇತನ್, ಮಮತ, ಸಂಗೀತಾ, ಜಯಲಕ್ಷ್ಮೀ, ಶಿವಕುಮಾರ್, ಮಂಜುನಾಥ್, ನವೀನ್, ಶಿವಣ್ಣ, ಶೇಖರಪ್ಪ, ಶಶಿಕುಮಾರ್, ಆಶಾಕುಮಾರಿ, ಆಶಾರಾಣಿ, ಮೇಘನ, ಉಮೇಶ, ಪ್ರಕಾಶ್, ಎಸ್.ಬಿ.ಸೋಮಶೇಖರ್, ಸಂಗೀತ, ರಾಣಿ, ಜ್ಯೋತಿ, ಅನುಷಾ, ಸುರೇಶ್, ಇತರರು ಇದ್ದರು.