ಕಬ್ಬು ಸರಬರಾಜು ಮಾಡಿ ಸಹಕಾರ ನೀಡಿದ ರೈತರನ್ನು ಮರೆಯಲಾರೆ: ವಿ.ರವಿರೆಡ್ಡಿ

KannadaprabhaNewsNetwork |  
Published : Oct 26, 2025, 02:00 AM IST
24ಕೆಎಂಎನ್ ಡಿ26 | Kannada Prabha

ಸಾರಾಂಶ

ಕಬ್ಬು ಬೆಳೆಗಾರರಿಗೆ ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ನೈಟ್ರೋಜನ್, ಗಂಧಕ ಹಾಗೂ ಸಾರಜನಕದಂತಹ ಗೊಬ್ಬರದ ಅಂಶದ ಮಡ್ಡಿಯನ್ನು ರೈತರಿಗೆ ಉಚಿತವಾಗಿ ವಿತರಿಸಿ ಮಣ್ಣಿನ ಫಲವತ್ತತೆ ಹೆಚ್ಚುವಂತೆ ಮಾಡಲಾಗಿದೆ. ರೈತರಿಗೆ ಸಕಾಲಕ್ಕೆ ಕಬ್ಬಿನ ಹಣ ಪಾವತಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಕ್ಕರೆ ಕಾರ್ಖಾನೆಗಳಿಗೆ ರೈತರೇ ಜೀವನಾಡಿ. ಕಬ್ಬು ಸರಬರಾಜು ಮಾಡಿ ಸಹಕಾರ ನೀಡಿದ ರೈತರನ್ನು ಮರೆಯಲಾರೆ ಎಂದು ಹೇಮಗಿರಿ ಷುಗರ್ಸ್ ಹಿರಿಯ ಉಪಾಧ್ಯಕ್ಷ ವಿ.ರವಿರೆಡ್ಡಿ ತಿಳಿಸಿದರು.

ಮಾಕವಳ್ಳಿಯ ಹೇಮಗಿರಿ ಷುಗರ್ಸ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಕಬ್ಬು ಬೆಳೆಗಾರರು, ಕಾರ್ಖಾನೆ ಸಿಬ್ಬಂದಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, 8 ವರ್ಷಗಳಿಂದ ಕಾರ್ಖಾನೆ ಹಿರಿಯ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದರು.

ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ, ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣವನ್ನು ಸಂಪೂರ್ಣ ಪಾವತಿಸಿ ರಾಜ್ಯದಲ್ಲಿಯೇ ಮಾದರಿ ಸಕ್ಕರೆ ಕಾರ್ಖಾನೆ ಮಾಡಲಾಗಿದೆ ಎಂದರು.

ಕಬ್ಬು ಬೆಳೆಗಾರರಿಗೆ ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ನೈಟ್ರೋಜನ್, ಗಂಧಕ ಹಾಗೂ ಸಾರಜನಕದಂತಹ ಗೊಬ್ಬರದ ಅಂಶದ ಮಡ್ಡಿಯನ್ನು ರೈತರಿಗೆ ಉಚಿತವಾಗಿ ವಿತರಿಸಿ ಮಣ್ಣಿನ ಫಲವತ್ತತೆ ಹೆಚ್ಚುವಂತೆ ಮಾಡಲಾಗಿದೆ. ರೈತರಿಗೆ ಸಕಾಲಕ್ಕೆ ಕಬ್ಬಿನ ಹಣ ಪಾವತಿಸಲಾಗಿದೆ ಎಂದರು.

ಪ್ರಸ್ತುತ ಸಕ್ಕರೆ ಕಾರ್ಖಾನೆಯನ್ನು ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಶುಗರ್ ಕಂಪನಿ ಮಾಲೀಕ ಸತ್ತಿ ಶುಗರ್ಸ್ ಅವರು ಕೋರಮಂಡಲ್ ಸಕ್ಕರೆ ಕಾರ್ಖಾನೆ ಕೊಂಡು ಹೇಮಗಿರಿ ಶುಗರ್ಸ್ ಎಂಬ ಹೆಸರಿನಲ್ಲಿ ನಡೆಸುವಾಗ ಕಾರ್ಖಾನೆ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಆಗಿದ್ದೇನೆ ಎಂದರು.

ಕಬ್ಬು ಅಭಿವೃದ್ಧಿ ವಿಭಾಗದ ಹಿರಿಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರವಿಚಂದ್ರನ್ ಮಾತನಾಡಿ, ಕಬ್ಬು ಬೆಳೆಗಾರರ ಎಲ್ಲ ನೋವು ನಲಿವುಗಳು ಹಾಗೂ ಸಮಸ್ಯೆಗಳ ನಿವಾರಣೆ ದಿಕ್ಕಿನಲ್ಲಿ ತಾವು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ಕಾರ್ಖಾನೆ ನೂತನ ಹಿರಿಯ ಎಜಿಎಂ ಆಗಿ ಅಧಿಕಾರ ಸ್ವೀಕರಿಸಿದ ವರದರಾಜನ್ ಮಾತನಾಡಿ, ಸೇವಾ ನಿವೃತ್ತರಾದ ರವಿ ರೆಡ್ಡಿ ಅವರಿಗೆ ನೀಡಿದ ಸಹಕಾರವನ್ನು ತಮಗೆ ನೀಡುವಂತೆ ಎಂದು ಮನವಿ ಮಾಡಿದರು.

ಈ ವೇಳೆ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಪ್ರಗತಿಪರ ಕೃಷಿಕರಾದ ಬೋರಾಪುರ ಮಂಜುನಾಥ್, ವಡಕಹಳ್ಳಿ ಮಂಜೇಗೌಡ, ಕೆ.ಆರ್.ನೀಲಕಂಠ, ಕಬ್ಬು ಅಭಿವೃದ್ಧಿ ವಿಭಾಗದ ಅಧಿಕಾರಿ ದತ್ತಾತ್ರೇಯ, ಸುರೇಶ್, ಕಾರ್ಖಾನೆ ರಕ್ಷಣಾ ವಿಭಾಗದ ಅಧಿಕಾರಿ ಯಲ್ಲಪ್ಪ, ಪುರಸಭೆ ಮಾಜಿ ಸದಸ್ಯ ಕೆ.ಆರ್. ನೀಲಕಂಠ, ಮಾಕವಳ್ಳಿ ರಾಮೇಗೌಡ, ಬಲರಾಮೇಗೌಡ, ಕಾಯಿ ಮಂಜೇಗೌಡ, ಕಾಳೆನಹಳ್ಳಿ ಸುರೇಶ್ ಸೇರಿದಂತೆ ಕಬ್ಬು ಬೆಳೆಗಾರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ