ಕನ್ನಡಪ್ರಭ ವಾರ್ತೆ ವಿಜಯಪುರ
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣ ಸಿಐಡಿಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಿ.ಟಿ.ರವಿ ಎನ್ಕೌಂಟರ್‌ಗೆ ಪ್ಲಾನ್ ಆಗಿತ್ತು ಎಂಬ ಶಂಕೆ ಇದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ಆಗಬೇಕು. ಕಮಿಷನರ್ ಕಿವಿಗೆ ಹಿಡಿದ ಫೋನ್ ಬಿಟ್ಟಿಲ್ಲ. ಅದು ಸಹ ತನಿಖೆ ಆಗಬೇಕು. ಕಮಿಷನರ್ ಡಿ.ಕೆ.ಶಿವಕುಮಾರ ಜೊತೆಗೆ ಮಾತನಾಡುತ್ತಿದ್ದನಾ? ಅಥವಾ ಲಕ್ಷ್ಮೀ ಹೆಬ್ಬಾಳ್ಕರ ಜೊತೆಗೆ ಮಾತನಾಡುತ್ತಿದ್ದನಾ? ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಅಹಿಂದ, ದಲಿತ ಸಂಘಟನೆಗಳಿಂದ ಡಿ.28ರಂದು ವಿಜಯಪುರ ಬಂದ್‌ಗೆ ಕರೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಹೇಳಿಕೆ ಕಟ್ ಮಾಡಿ ಬೇಕಾದಂತೆ ಬಳಸುತ್ತಿದ್ದಾರೆ. ಬಾಂದ್ರಾದಲ್ಲಿ ಅಂಬೇಡ್ಕರ್‌ರನ್ನು ಸೋಲಿಸಿದ್ದು ಯಾರು? ಕಾನೂನು ತಿದ್ದುಪಡಿಗೆ ಮುಂದಾದಾಗ ಅಸಹಕಾರ ಮಾಡಿದ್ದರು. ನೆಹರು ಬಾಬಾ ಸಾಹೇಬರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಾಬಾಸಾಹೇಬರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ನೆಹರು, ಇಂದಿರಾ, ರಾಜೀವ್ ಗಾಂಧಿ ತಾವೇ ಸ್ವತಃ ಭಾರತ ರತ್ನ ತೆಗೆದುಕೊಂಡರು. ಅಂಬೇಡ್ಕರ್‌ಗೆ ಭಾರತ ರತ್ನ ಕೊಡಲಿಲ್ಲ. ಬಾಬಾಸಾಹೇಬರ ಪಾರ್ಥಿವ ಶರೀರ ತರಲು ಇವರು ವಿಮಾನ ವ್ಯವಸ್ಥೆಯನ್ನು ಮಾಡಲಿಲ್ಲ. ಅವರ ಕಾರು ಮಾರಾಟ ಮಾಡಿ ಅವರ ಪಾರ್ಥಿವ ಶರೀರ ತರಲಾಯಿತು ಎಂದು ಟೀಕಿಸಿದರು.ಧರ್ಮದಿಂದ ಸಂವಿಧಾನ ಉಳಿಯುತ್ತೆ:
ಯತ್ನಾಳ ಕಾರ್ಖಾನೆ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾದ ಬಗ್ಗೆ ಮಾಹಿತಿ ನೀಡಿದ ಅವರು, ಸರ್ಕಾರ ಕಾರ್ಮಿಕರ ಜೊತೆಗೆ ಚೆಲ್ಲಾಟ ವಾಡಿದೆ. ಕಾಂಗ್ರೆಸ್ ಪತನವಾಗೋದು ನಿಶ್ಚಿತ. ನಾವು ಅಧಿಕಾರಕ್ಕೆ ಬಂದಾಗ ಅವರು ಅನುಭವಿಸಬೇಕಾಗುತ್ತದೆ ಎಂದು ಕಾರ್ಖಾನೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದವರಿಗೆ ವಾರ್ನ್ ಮಾಡಿದರು.
ವಾಜಪೇಯಿ ಅಜಾತಶತ್ರು:
ಇದು ನಕಲಿ ಕಾಂಗ್ರೆಸ್‌ನ ಅಧಿವೇಶನ. ಈ ಅಧಿವೇಶನದಲ್ಲಿ ಇರೋರು ನಕಲಿ ಗಾಂಧಿಗಳು. ಫಿರೋಜ್ ಖಾನ್ ಇದ್ದದ್ದು ಗಾಂಧಿ ಹೇಗೆ ಆಯ್ತು ಬಹಿರಂಗಪಡಿಸಬೇಕು. ಹೆಸರು ಇಟ್ಟುಕೊಂಡ ಮಾತ್ರಕ್ಕೆ ಪಾವಿತ್ರ್ಯತೆ ಬರೋದಿಲ್ಲ. ಇವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆ ಮಾಡಲ್ಲ. ಗಾಂಧಿ ಸ್ಮರಣೆ ಮಾತ್ರ ಮಾಡುತ್ತಾರೆ.