ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಪ್ರತಿಯಲ್ಲಿ ಸಮಾಜವಾದ, ಜಾತ್ಯತೀತವಾದ ಎಂಬ ಎರಡೂ ಪದಗಳನ್ನು ಸೇರಿಸಿದ್ದಲ್ಲ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಈ ಎರಡು ಪದಗಳನ್ನು ಸಂವಿಧಾನದಲ್ಲಿ ತುರುಕಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಇಂದಿರಾ ಗಾಂಧಿ ತಿರುಚಿತ ಸಂವಿಧಾನದ ಪ್ರತಿಗೆ ಕಾಂಗ್ರೆಸ್ಸಿಗರು ಬಹಳ ಪ್ರೀತಿ ತೋರಿಸುತ್ತಿದ್ದಾರೆ. ರಾಹುಲ್ ಗಾಂಧಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಮೂಲ ಸಂವಿಧಾನ ಪ್ರತಿ ಇದ್ದರೆ ಕೊಡಿ, ಅದನ್ನು ಓದಿ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.೧೯೭೬ರಲ್ಲಿ ಕಾಂಗ್ರೆಸ್ ತಿರುಚಿತ ಪ್ರಸ್ತಾವನೆಯ ಸಾಲುಗಳನ್ನು ಓದಿದರೆ, ಅಜ್ಜಿಯ ಸರ್ವಾಧಿಕಾರದ ಕೆಟ್ಟಗುಣವೇ ಬಂದೀತು. ನಿಮ್ಮ ನಾಯಕರ ಒಳಿತಿಗಾದರೂ ಅಂಬೇಡ್ಕರ್ ಅವರಿಗೆ ಶರಣಾಗಿ ಎಂದು ತಿಳಿಸಿದ್ದಾರೆ.
ಜಾತ್ಯತೀತ ಹಿಂದೂಗಳ ಹಾಗೂ ಭಾರತೀಯರ ರಕ್ತದ ಕಣಕಣದಲ್ಲಿ ಬೆರೆತಿದೆ. ಸಮಾಜವಾದದ ಬಗ್ಗೆ ಆಕ್ಷೇಪವಿಲ್ಲ. ಆದರೆ, ಈ ಎರಡೂ ಕೂಡ ವಾದಗಳಷ್ಟೆ. ಸ್ವಾತಂತ್ರ‍್ಯ, ಸಮಾನತೆ, ಸೋದರತ್ವ, ಸಾಮಾಜಿಕ ನ್ಯಾಯದಂತೆ ಶಾಶ್ವತ ಮೌಲ್ಯಗಳ ಅಂಬೇಡ್ಕರ್‌ರವರದ್ದಾಗಿದೆ ಎಂದು ನಿಂಗರಾಜ್‌ಗೌಡ ತಿಳಿಸಿದ್ದಾರೆ.