ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೂ ನಿಷ್ಠಾವಂತರಲ್ಲದ ನಿಮ್ಮಂತಹವರಿಗೆ ಸಂಸ್ಕೃತಿ, ಸಂಸ್ಕಾರ ಇಲ್ಲದಿರಬಹುದು. ಆದರೆ, ನಮ್ಮ ಮನೆ, ಪಕ್ಷವು ನನಗೆ ಸಂಸ್ಕೃತಿ, ಸಂಸ್ಕಾರವನ್ನು ಹೇಳಿಕೊಟ್ಟಿದೆ. ನೀವು ನನಗೆ ಏಕವಚನದಲ್ಲಿ ಮಾತನಾಡಿದ್ದರೂ, ನಾನು ನಿಮಗೆ ಗೌರವಯುತವಾಗಿಯೇ ಹೇಳುತ್ತಿದ್ದೇನೆ. ನಾನು ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ರ ಬಗ್ಗೆಯಾಗಲೀ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರ ಬಗ್ಗೆಯಾಗಲೀ ಎಂದಿಗೂ ಮಾತನಾಡಿದವನಲ್ಲ ಎಂದರು.
ನಿಮ್ಮ ಕಂಡ ನಂತರವೇ ಸಚಿವರು, ಸಂಸದರ ಬಳಿ ಅಧಿಕಾರಿಗಳು ಹೋಗಬೇಕಾ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮದೇ ಗ್ರಾಮದ 2 ಬೂತ್‌ಗೆ ಮಾತ್ರ ನಿಮ್ಮ ಸೀಮಿತಗೊಳಿಸಿ, ಉತ್ತರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಪತಿ ಮಲ್ಲಿಕಾರ್ಜುನ್‌ರನ್ನು ಗೆಲ್ಲಿಸಿಕೊಂಡರು ಎಂದು ತಿಳಿಸಿದರು.ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ನಿಟುವಳ್ಳಿ ಆರ್.ಎಸ್.ಶೇಖರಪ್ಪ, ಸೀಮೆಎಣ್ಣೆ ಮಲ್ಲೇಶ್ ಸೇರಿದಂತೆ ಅನೇಕ ಹಿರಿಯರು ಈಗೆಲ್ಲಿದ್ದಾರೆ? ನಿಮ್ಮಂತಹವರು ಪಕ್ಷ ನಿಷ್ಠರನ್ನು ಮೂಲೆಗುಂಪು ಮಾಡಿ, ತುಳಿದು ಹಾಕಿದಿರಿ. ಚನ್ನಯ್ಯ ಒಡೆಯರ್, ಕೆಂಗೋ ಹನುಮಂತಪ್ಪ ಕುಟುಂಬಗಳು ಈಗ ಎಲ್ಲಿವೆ? ಕಲ್ಪನಹಳ್ಳಿ ಗೌಡ್ರು, ಕೆ.ಎಂ.ಕಲ್ಲೇಶಪ್ಪ, ಬೇತೂರು ಬಿ.ಕರಿಬಸಪ್ಪ ಕುಟುಂಬಕ್ಕೆ ಏನು ಮಾಡಿದ್ದೀರಿ? ಬಾತಿ ಸಿದ್ದಲಿಂಗಪ್ಪ ಸೇರಿದಂತೆ ಇಂತಹ ಹಿರಿಯರು ಕಟ್ಟಿದ್ದ ಹುತ್ತಕ್ಕೆ ಬಂದು ಹೊಕ್ಕವರು ನೀವು. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ರ ಕಿವಿ ಕಚ್ಚುವ ಮೂಲಕ ಕಾಂಗ್ರೆಸ್ ನಿಷ್ಠರು, ಶಾಮನೂರು ಕುಟುಂಬದ ಆಪ್ತರನ್ನೆಲ್ಲಾ ಒಬ್ಬೊಬ್ಬರನ್ನಾಗಿ ದೂರ ಮಾಡಿದಿರಿ ಎಂದು ಆರೋಪಿಸಿದರು.
ಕಡ್ಲೇಬಾಳು ಆಂಜನೇಯ ಗುಡಿಯಲ್ಲಿ ಆಣೆ ಮಾಡು
ದಾವಣಗೆರೆ ತಾಲೂಕು ತಹಸೀಲ್ದಾರ್‌ಗೆ ಹೊಸಪೇಟೆ ತಹಸೀಲ್ದಾರ್ ಕಚೇರಿಯಲ್ಲಿ ಏನು ಕೆಲಸವಿದೆ? ಇಲ್ಲಿನ ತಹಸೀಲ್ದಾರ್‌ಗೆ ನಿಮ್ಮ ಜೊತೆಗೆ ಹೊಸಪೇಟಿ ತಾಲೂಕು ಕಚೇರಿಗೆ ಯಾಕೆ, ಯಾವ ಕಾರಣಕ್ಕೆ ಕರೆದೊಯ್ಯುತ್ತೀರಿ? ನಿಮ್ಮೆಲ್ಲಾ ಅನ್ಯಾಯ, ಅಕ್ರಮ, ಹಗರಣಗಳಿಗೆ ಶೀಘ್ರವೇ ನಾವು ತಕ್ಕ ಪಾಠ ಕಲಿಸುತ್ತೇವೆ.