- ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ವಾಲ್ಮೀಕಿ ಜಾತ್ರೆ-2026 । ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ
- 2013ರ ಬೆಳಗಾವಿ ಅಧಿವೇಶನದಲ್ಲಿ ಆರೇಳು ಸಾವಿರ ಕೋಟಿ ಅನುದಾನ ನೀಡಿದ್ದೇವೆ
- ಬಿಜೆಪಿಯವರು ನಾವೇ ಮಾಡಿದ್ದು ಎನ್ನುತ್ತ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ- - -
ಪರಿಶಿಷ್ಠ ಜಾತಿ ಮತ್ತು ಪಂಗಡಗಳಿಗೆ ವಿವಿಧ ಮೀಸಲಾತಿಗಳನ್ನು ನೀಡಿದವರು ಹಾಗೂ ಅತಿ ಹೆಚ್ಚು ಅನುದಾನಗಳನ್ನು ಕೊಟ್ಟವರು ನಾವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಪ್ಪುದಾರಿಗೆ ಎಳೆಯುವ ಬಿಜೆಪಿ:
ಶೋಷಿತ ಸಮಾಜಗಳ ಮಠಗಳು ಮುಖಂಡರು ಇಂಥ ಜಾತ್ರಾ ಸಂದರ್ಭದಲ್ಲಿ ಸಮಾಜದ ಜನತೆಗೆ ಇತಿಹಾಸ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಇದರಿಂದ ಸಮಾಜದಲ್ಲಿ ಇದ್ದ ವ್ಯವಸ್ಥೆ ಹಾಗೂ ಈಗ ಇರುವ ವ್ಯವಸ್ಥೆಯ ಅರಿವು ಮೂಡಿಸಿಕೊಳ್ಳುವ ಕಾರ್ಯ ಆಗಲು ಸಾಧ್ಯ. ಯಾರಿಗೆ ಇತಿಹಾಸದ ಅರಿವು ಇರುವುದೋ ಅವರು ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದರು.
ಹಿಂದಿನ ಜನ್ಮ ಎಂಬುದೇ ಇಲ್ಲ:
ಮೌಢ್ಯ, ಕಂದಾಚಾರ, ಮೂಢನಂಬಿಕೆಗಳಿಂದ ಹೊರಬನ್ನಿ. ಉತ್ತಮ ಶಿಕ್ಷಣ ಹೊಂದಿ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬನ್ನಿ. ಉತ್ತಮ ಶಿಕ್ಷಣ, ಸಂಘಟನೆ, ಹೋರಾಟಗಳಿಂದ ನಿಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸಮಸಮಾಜ ನಿರ್ಮಾಣ ಸಾಧ್ಯ. ಈಗಾಗಲೇ ಶೇ.3ರಿಂದ ಶೇ.7ರಷ್ಟು ಮೀಸಲಾತಿಗೆ ನಾವು ಒಪ್ಪಿಗೆ ನೀಡಿದ್ದೇವೆ. ಅದನ್ನು ಕೇಂದ್ರ ಸರ್ಕಾರದಿಂದ ಅನುಮೋದನೆ ಮಾಡಿಸುವ ಕಾರ್ಯ ಸಂಸದರ ಬಳಿ ಇದೆ. ಅಧ್ಯಕ್ಷ ಬಸವನಗೌಡ ದದ್ದಲ್ ನೀಡಿರುವ ವಿವಿಧ ಬೇಡಿಕೆಗಳ ಮನವಿ ಪರಿಗಣಿಸಿ ಹಂತ ಹಂತವಾಗಿ ಪೂರೈಸುವುದಾಗಿ ಭರವಸೆ ನೀಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಶಂಕರ್, ಸಂಸದ ಕುಮಾರನಾಯ್ಕ, ಹಾಲಿ ಮಾಜಿ ಶಾಸಕರು, ಸಚಿವರು ನಿಗಮ ಮಂಡಳಿ ಅಧ್ಯಕ್ಷರಾದ ಬಿ.ಪಿ. ಹರೀಶ್, ಬಸವಂತಪ್ಪ, ಕೃಷ್ಣ ನಾಯ್ಕ, ಡಿ.ಬಿ. ಶಾಂತನಗೌಡ, ದೇವೇಂದ್ರಪ್ಪ, ಶ್ರೀನಿವಾಸ್, ಟಿ.ವಿ. ಜಯಚಂದ್ರ, ಎನ್.ವೈ. ಗೋಪಾಲಕೃಷ್ಣ, ರುದ್ರಪ್ಪ ಲಮಾಣಿ, ರಘುಮೂರ್ತಿ ಯೋಗಿಶ್, ಮರಿಯೋಜಿ ರಾವ್ ಜಯದೇವ ನಾಯ್ಕ,. ರಘು ಮೂರ್ತಿ, ಎಚ್. ಆಂಜನೇಯ, ಸಮರ್ಥ ಮಲ್ಲಿಕಾರ್ಜುನ್, ಸಂಚಾಲಕ ಎಂ.ಜಿ. ಪಂಪಾಪತಿ, ರೇಣುಕಾಚಾರ್ಯ, ಮಾಜಿ ಸಂಸದ ಪ್ರತಾಪ್ ಸಿಂಹ, ಅರವಿಂದ ಬೆಲ್ಲದ್, ರುದ್ರಪ್ಪ ಲಂಬಾಣಿ, ಎಸ್.ಪಿ. ಬಸವರಾಜನ್, ಪ್ರಕಾಶ್ ಕೋಳಿವಾಡ, ಶಿವನಗೌಡ ನಾಯಕ, ವಿವಿಧ ಮಂಡಳಿಗಳ ಅಧ್ಯಕ್ಷರಾದ ಎಚ್.ಪಿ. ಮಂಜಪ್ಪ, ಬಂಗಾರು ಹನುಮಂತು, ಜಯದೇವ ನಾಯಕ್, ಎಸ್.ವಿ. ರಾಮಚಂದ್ರಪ್ಪ ಸೇರಿದಂತೆ ಅನೇಕ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು, ಮುಖಂಡರು ಭಾಗವಹಿಸಿದ್ದರು.
- - --09ಎಚ್‌ಆರ್‌ಆರ್01.ಜೆಪಿಜಿ:
ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರೆ-2026ರ ಎರಡನೇ ದಿನವಾದ ಸೋಮವಾರ ನಡೆದ ಜನಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.