ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವೃತ್ತಿಯ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಭಾನುವಾರ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆಯ ಸಮನ್ವಯತೆ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿ,
ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಅಸ್ಮಿತೆಗೆ ಹೋರಾಟ ನಡೆಯುತ್ತಿದ್ದ ಕಾಲಘಟ್ಟ ಕುವೆಂಪು ಅವರದ್ದು. ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ಅವರ ಸಾಲುಗಳೆ ಭಾರತ, ಕರ್ನಾಟಕ ತದ್ವಿರುದ್ಧವಲ್ಲ ಎಂಬ ನಿಲುವು ತೋರಿಸಿದೆ ಎಂದರು.ಭಾರತದ ಐಕ್ಯತೆಗೆ ಅತ್ಯಂತ ಮುಖ್ಯವೆಂದು ಹೇಳಿದರು. ಕನ್ನಡಕ್ಕಾಗಿ ಕೈಎತ್ತಿ ಎಂದು ಹೇಳುವವರು ಮುಂದಿನದ್ದು ಭಾರತ ಎಂಬುದನ್ನು ಮರೆಯುತ್ತಿದ್ದಾರೆ, ಇದು ವಿಷಾದನೀಯ. ಕನ್ನಡಿಗ, ಭಾರತೀಯ ಎಂಬ ವಿಷಯ ಮುಖಾಮುಖಿ ಮಾಡುವ ಸಂದರ್ಭವೇ ಇಲ್ಲ. ಅದೊಂದು ವಿಭಜಿಸುವ ತಂತ್ರ, ಅದು ಬಾಲಿಶವಾದದು. ವೇದ, ಉಪನಿಷತ್ತುಗಳ ಮೂಲಕ ನಾವು ಇಲ್ಲಿಯವರೆಗೂ ಐಕ್ಯತೆ ಸಾಧಿಸುತ್ತಾ ಬಂದಿದ್ದೇವೆ ಅದರ ಮೂಲಕವೇ ನಾವು ಸಾಗಬೇಕು ಎಂದರು.
ಸೈದ್ಧಾಂತಿಕವಾಗಿ ಕುವೆಂಪು ಅವರ ವಿಚಾರವನ್ನು ಮುನ್ನಲೆಗೆ ತರುವ ಕೆಲಸ ಆಗಬೇಕು. ಆಗ ಭಾರತದ ಅಸ್ಮಿತೆ ಎಲ್ಲರನ್ನೂ ತಲುಪುವುದು. ಆಸುರಿ ಸಾಹಿತ್ಯ, ದೈವೀ ಸಾಹಿತ್ಯ ಎಂಬುದರ ಸ್ಪಷ್ಟನೆ ಕೊಟ್ಟವರು ಕುವೆಂಪು ಅವರು ಅದನ್ನು ತಿಳಿದು ಸಾಗೋಣ ಎಂದು ಕರೆ ನೀಡಿದರು.
ರಾಷ್ಟ್ರೀಯತೆಯ ಕಲ್ಪನೆ ತಿಳಿಸುವ ಕೆಲಸ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಾಹಿತಿಗಳಿಗಿತ್ತು. ಅಜ್ಞಾನ ತೊರೆದು ಜ್ಞಾನದೆಡೆಗೆ ಸಾಗಿ ಎಂಬುದು ಕುವೆಂಪು ಸಾಹಿತ್ಯದಲ್ಲಿದೆ. ಸಂಸ್ಕೃತಿಯ ಹಿನ್ನೆಲೆಯ ದೃಷ್ಟಿಯಲ್ಲಿ ರಾಷ್ಟ್ರೀಯತೆ ಕಟ್ಟಿಕೊಳ್ಳಲು ಕುವೆಂಪು ಸಾಹಿತ್ಯ ಓದಬೇಕು ಎಂದು ಹೇಳಿದರು.
----
-ಡಾ.ಟಿ.ಎಲ್. ಪ್ರವೀಣ್, ಸಹಪ್ರಾಧ್ಯಾಪಕ ದಾವಣಗೆರೆ ವಿಶ್ವವಿದ್ಯಾಲಯ.
ರಾಷ್ಟ್ರೀಯ ಪ್ರಜ್ಞೆ ಹಾಗೂ ಸಂಸ್ಕೃತಿಯ ಪ್ರಜ್ಞೆಯನ್ನು ಕುವೆಂಪು ಅವರು ಸಾಹಿತ್ಯದಲ್ಲಿ ತೋರಿಸಿದರು. ರಾಷ್ಟ್ರೀಯತೆ ಹಾಗೂ ಕನ್ನಡದ ಮೇಲಿನ ಅವರ ಪ್ರೇಮವನ್ನು ವೈರುದ್ಯವಾಗಿ ಪ್ರದರ್ಶಿಸಲಾಗಿದೆ. ವ್ಯವಸ್ಥಿತವಾಗಿ ಅದನ್ನು ಮುಗಿಸಲಾಗಿದೆ. ಭಾರತೀಯ ಸಂಸ್ಕೃತಿಯ ಚಿತ್ರಣವನ್ನು ಕುವೆಂಪುರವರು ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅದನ್ನೇ ಅವರು ರಾಷ್ಟ್ರೀಯತೆ ಎಂದಿರಬಹುದು.