ನಾಯಕರನ್ನು ಕೇವಲ ಜಯಂತಿಗೆ ಸೀಮಿತ ಮಾಡಿದ್ದೇವೆ

KannadaprabhaNewsNetwork |  
Published : May 12, 2026, 01:30 AM IST
೧೧ಶಿರಾ೧: ಶಿರಾ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮವನ್ನು ಹ ರಾ ಮಹೇಶ್ ಉದ್ಘಾಟಿಸಿದರು. ಭಂತೇಜಿ ಧಮ್ಮವೀರ, ದಸಂಸ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಸಂವಿಧಾನವನ್ನು ತೆಗೆದು ಹಾಕಲು ಕೆಲವರು ಹೊಂಚು ಹಾಕುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು

ಕನ್ನಡಪ್ರಭ ವಾರ್ತೆ ಶಿರಾ ದೇಶದಲ್ಲಿ ಎಲ್ಲಾ ಮಹಾನ್ ನಾಯಕರನ್ನು ಕೇವಲ ಜಯಂತಿಗೆ ಸೀಮಿತ ಮಾಡಿದ್ದೇವೆ. ದಲಿತರು ಅಂಬೇಡ್ಕರ್ ಅವರನ್ನು, ಲಿಂಗಾಯಿತರು ಬಸವಣ್ಣನವರನ್ನು, ಒಕ್ಕಲಿಗರು ಕುವೆಂಪು ಅವರನ್ನು, ಕುರುಬರು ಕನಕದಾಸರನ್ನು ಅನುಸರಿಸಿ ಅವರ ಸಿದ್ದಾಂತ, ತತ್ವಗಳನ್ನು ಅರಿತುಕೊಂಡಿದ್ದರೆ ಜಾತಿಯತೆ ಎಂಬುದು ಕೊನೆಯಾಗುತ್ತಿತ್ತು. ಆದರೆ ಎಲ್ಲರೂ ಅವರನ್ನು ಜಯಂತಿಗೆ ಸೀಮಿತ ಮಾಡಿದ್ದಾರೆ ಎಂದು ಚಿಂತಕರು ಹಾಗೂ ಬಿಎಸ್‌ಪಿ ರಾಜ್ಯ ಉಸ್ತುವಾರಿ ಹ ರಾ ಮಹೇಶ್ ವಿಷಾದಿಸಿದರು. ಅವರು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ನಮಗೆಲ್ಲ ಬುದ್ಧನ ಪ್ರಜ್ಞೆ ನೀಡಿದ್ದಾರೆ ಅದನ್ನು ನಾವು ಅನುಸರಿಸುತ್ತಿಲ್ಲ. ಎಲ್ಲರೂಬುದ್ಧನ ತತ್ವಗಳನ್ನು ಅನುಸರಿಸಿ ಜಾತಿ ಎನ್ನುವುದು ರೋಗ ಅದಕ್ಕೆ ಮದ್ದು. ಬುದ್ಧನ ತತ್ವಗಳು ಬಗ್ಗೆ ಅಂಬೇಡ್ಕರ್ ಅವರು ೨೨ ಸಂಪುಟಗಳನ್ನು ಬರೆದಿದ್ದಾರೆ. ಅವುಗಳನ್ನು ಎಲ್ಲ ಜಾತಿಯವರು ಓದಬೇಕು. ಅವರ ಪುಸ್ತಕಗಳನ್ನು ಎಲ್ಲಾ ಜಾತಿಯವರು ಓದಿದ್ದರೆ ಜಾತಿ ಮತ ಇರುತ್ತಿರಲಿಲ್ಲ. ವಿದ್ಯಾರ್ಥಿಗಳು ದಿನಕ್ಕೆ ಒಂದು ಪುಟವಾದರೂ ಓದಿ. ಅಂಬೇಡ್ಕರ್ ಅವರ ಹೋರಾಟದ ಬಗ್ಗೆ ನಮ್ಮ ಅಕ್ಕಪಕ್ಕದವರಿಗೆ ಮನೆಯವರಿಗೆ ಹೇಳಬೇಕು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲವನ್ನೂ ನೀಡಿದ್ದಾರೆ. ನಮ್ಮ ಮುಂದಿನ ಪೀಳಿಗೆಗೋಸ್ಕರ ಎಲ್ಲರೂ ಅದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂವಿಧಾನವನ್ನು ತೆಗೆದು ಹಾಕಲು ಕೆಲವರು ಹೊಂಚು ಹಾಕುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು ಎಂದರು. ಚಿಂತಕರು ಹಾಗೂ ಕ.ಅ.ಪ್ರಾಧಿಕಾರದ ಸದಸ್ಯರಾದ ಡಾ.ರವಿಕುಮಾರ್ ನೀಹ ಮಾತನಾಡಿ ಪ್ರತಿ ವರ್ಷ ನಾವು ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದೇವೆ. ಆದರೆ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದೇವೆ. ಶೂದ್ರರಿಗೆ ೧೦೦ ವರ್ಷಗಳ ಹಿಂದೆ ಶಿಕ್ಷಣ ಇರಲಿಲ್ಲ. ಅಂಬೇಡ್ಕರ್ ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಶಿಕ್ಷಣ ದೊರಕಿದೆ. ಇಂದು ಶಿಕ್ಷಣ ಪಡೆವರು ಅರಿವು ಮೂಡಿಸುತ್ತಿಲ್ಲ. ಬುದ್ಧನ ಅನುಯಾಯಿಗಳನ್ನು ದೂರ ಇಡಲು ನಮ್ಮನ್ನು ಅಸ್ಪೃಶ್ಯರು ಎಂದು ಕರೆದರು. ಅದಕ್ಕಾಗಿಯೇ ನಾವು ಚರಿತ್ರೆಗಳನ್ನು ಸರಿಯಾಗಿ ಓದಬೇಕು ಎಂದರು. ದಸಂಸ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್‌, ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ರಚನೆ ಮಾಡುವ ಮೂಲಕ ಗುಲಾಮಗಿರಿಗೆ ಅಂತ್ಯ ಹಾಡಿ ಜಾತಿ ವ್ಯವಸ್ಥೆಯನ್ನು ತೊಲಗಿಸಿ ವ್ಯಕ್ತಿ ಗೌರವಕ್ಕೆ ಭದ್ರ ತಳಹದಿ ಹಾಕಿದರು. ದೇಶದಲ್ಲಿ ಸಂವಿಧಾನವನ್ನು ಆಳುವ ಸರ್ಕಾರಗಳು ಸರಿಯಾಗಿ ಜಾರಿ ಮಾಡುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವರಾಜು.ಎನ್, ಆರ್.ವಿ.ಪುಟ್ಟಕಾಮಯ್ಯ, ಬರಗೂರು ನರಸಪ್ಪ, ಬೀರನಹಳ್ಳಿ ನರಸಪ್ಪ, ಅರ್ಷದ್, ಗೋಮಾರದನಹಳ್ಳಿ ಮಂಜುನಾಥ್, ನರಸಿಂಹರಾಜು.ಬಿ.ಕೆ, ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಂತೇಜಿ ಧಮ್ಮವೀರ, ನಿವೃತ್ತ ಪ್ರಾಂಶುಪಾಲರಾದ ರಾಮಚಂದ್ರಪ್ಪ, ಸ್ಲಂ ಜನಾಂದೋಲನ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ, ತಾಲೂಕು ದಸಂಸ ಅಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಕೋದಂಡರಾಮ, ರಾಜು.ಆರ್.ಆರ್., ಸಂಘಟನಾ ಸಂಚಾಲಕ ಶ್ರೀರಂಗಪ್ಪ, ಚನ್ನನಕುಂಟೆ ರಂಗನಾಥ್, ಕಳ್ಳಂಬೆಳ್ಳ ಹೋಬಳಿ ಅಧ್ಯಕ್ಷ ದಿನೇಶ್, ಗೌಡಗೆರೆ ಹೋಬಳಿ ಅಧ್ಯಕ್ಷ ನವೀನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಲಾವಣ್ಯ, ನಗರ ಅಧ್ಯಕ್ಷೆ ಭಾಗ್ಯಮ್ಮ, ಸಂಘಟನಾ ಸಂಚಾಲಕಿ ಜ್ಯೋತಿ, ಶಿರಾ ನಗರ ಪ್ರಧಾನ ಕಾರ್ಯದರ್ಶಿ ಕಾರ್ತಿಕ್, ತಿಪ್ಪೇಶ್ ಕೆ.ಕೆ., ಖಜಾಂಚಿ ಜಯರಾಜ್, ರಂಗನಾಥ್ ಮೌರ್ಯ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಮಾನಸದ ನಾಯಕನಿಗೆ ಕಣ್ಣೀರಿನ ಅಶ್ರುತರ್ಪಣ
ಸೂರನಹಳ್ಳಿಯಲ್ಲಿ ಸುಧಾಕರ್ ನೆನೆದು ಕಣ್ಣೀರು