ಹೊನ್ನಾಳಿ: ಸಮಾಜದಲ್ಲಿ ವಿಶೇಷವಾಗಿ ಹೊನ್ನಾಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕರು ಅತಿಯಾದ ದುಶ್ಚಟಗಳಿಗೆ ಬಲಿಯಾಗಿ, ಉಜ್ವಲ ಭವಿಷ್ಯವನ್ನು ಹಾಳುಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಫೋಷಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಹೊನ್ನಾಳಿಯಲ್ಲಿ ಯುವಕರು ಹೆಚ್ಚಾಗಿ ಮದ್ಯಪಾನ, ಗಾಂಜಾ ಬಳಸುತ್ತಿದ್ದಾರೆ. ಉತ್ತಮ ಬದುಕು ಕಟ್ಟಿಕೊಳ್ಳಲು ಶ್ರಮಿಸದೇ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ತಂದೆ-ತಾಯಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿಸಬೇಕು. ಮೊಬೈಲ್‌ಗಳಿಂದ ಮಕ್ಕಳಲ್ಲಿ ಮಾನಸಿಕ ಅಸಮತೋಲ ಉಂಟಾಗಲಿದೆ. ಬಹುತೇಕ ಕುಟುಂಬಗಳಲ್ಲಿ ತಂದೆ-ತಾಯಿಯೇ ಪರೋಕ್ಷವಾಗಿ ಮಕ್ಕಳಿಗೆ ಶತ್ರುಗಳಂತಾಗುತ್ತಿದ್ದಾರೆ. ಮಕ್ಕಳ ಕೈಗೆ ಮೊಬೈಲ್ ಕೊಡಬಾರದು. ಬದಲಿಗೆ ಜಾನಪದ ಗೀತೆಗಳು, ಸಂಗೀತ, ಕಲೆ, ಸಂಸ್ಕೃತಿ ಸಂಸ್ಕಾರ, ಕ್ರೀಡೆಗಳು, ಸಂಪ್ರದಾಯಗಳನ್ನು ತಿಳಿಸಿಕೊಡಬೇಕು. ಅವರನ್ನು ಉತ್ತಮ ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕಾಂಗ್ರೆಸ್‌ನ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಎಚ್.ಎ. ಉಮಾಪತಿ. ಪ್ರೇರಣಾ ಪಬ್ಲಿಕ್ ಸ್ಕೂಲ್ ಅಧ್ಯಕ್ಷೆ ಆರತಿ ಯೋಗೇಶ್, ಆಡಳಿತಾಧಿಕಾರಿ ವೈ.ಕೀರ್ತಿ, ಕಾರ್ಯದರ್ಶಿ ಕೆ.ಪುಟ್ಟಪ್ಪ, ಮುಖ್ಯಶಿಕ್ಷಕಿ ಕಲಾಶ್ರೀ ಜಯಪ್ಪ, ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.- - -
-ಎಚ್.ಎಲ್.ಐ2.: