ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಂದಿನ ಯುವಕರು ಹಿರಿಯ ಹೋರಾಟಗಾರರ ತ್ಯಾಗ ಬಲಿದಾನ ಅರಿತು ಅವರ ಮಾರ್ಗದರ್ಶನದಲ್ಲಿ ಹೋರಾಟಗಳನ್ನು ರೂಪಿಸಿಕೊಂಡು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಸಲಹೆ ನೀಡಿದರು.ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗೂಲಿ ಗ್ರಾಮದಲ್ಲಿ ಡಾ. ಬಿ ಆರ್. ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಇಂದು ಭಾನುವಾರ ಡಾ. ಬಿ. ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಮಾಡಿದ ನಂತರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಬಿ. ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಆದರ್ಶಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ತಿಳಿಸಿದರು. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಕೆ.ಎಮ್. ಜಾನಕಿಯವರು ಅವರು ಮಾತನಾಡಿ, ನಮ್ಮ ಸಂಘಟನೆ ಡಾ. ಬಿ. ಆರ್. ಅಂಬೇಡ್ಕರ್ ಅವರ ತತ್ವಾದರ್ಶಕ್ಕೆ ಕಳಂಕ ಅಗದಂತೆ ಉತ್ತಮ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಮೈಸೂರು ಅಕಾಡೆಮಿ ಐ ಎಸ್ ಶಿವಕುಮಾರ್ ಅವರು ಮಾತನಾಡಿ, ಇಂದಿನ ಮಕ್ಕಳು ಹಾಗೂ ಯುವ ಹೋರಾಟಗಾರರು ಹಿರಿಯ ಹೋರಾಟಗಾರರ ಹೋರಾಟಗಳನ್ನು ಅರ್ಥಮಾಡಿಕೊಂಡು ನಡೆಯಬೇಕು ಹಾಗೂ ಇಂದಿನ ವಿದ್ಯಾರ್ಥಿಗಳು ಅರಿವು ಸಂಸ್ಕಾರದ ಸತ್ವ, ಶಿಕ್ಷಣದ ಮಹತ್ವವನ್ನು ಪರಿಪೂರ್ಣವಾಗಿ ಅರಿತು ಸಾಗಿದರೆ ಮಾತ್ರ ಸತ್ಪ್ರಜೆಗಳಾಗಿ ಬೆಳೆಯಬೇಕು ಮತ್ತು ಪ್ರತಿನಿತ್ಯ ಕನಿಷ್ಠ ಐದು ಗಂಟೆಗಳ ಕಾಲ ಮನೆಯಲ್ಲಿ ಓದುವ ಅವ್ಯಾಸ ರೂಢಿಸಿಕೊಂಡು ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟ ಸಂವಿಧಾನಕ್ಕೆ ಮಾರಕವಾಗದೇ ನಾವೆಲ್ಲರೂ ಸಂವಿಧಾನವನ್ನು ಉಳಿಸುವ ಹಾಗೂ ರಕ್ಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿ. ಆರ್. ಮಹೇಶ್, ಹಾಸನ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು ಎಂ.ಬಿ. ಚನ್ನಕೇಶವ, ತಹಸೀಲ್ದಾರ್ ಗ್ರೇಡ್ 2 ಸಿ. ಸ್ವಾಮಿ, ಜಿಲ್ಲಾ ಕ.ರಾ.ಸ. ನೌಕರರ ಕಾರ್ಯಾಧ್ಯಕ್ಷರು ವಿಷ್ಣುಪ್ರಕಾಶ್, ದ.ಸಂ. ರಾಜ್ಯ ಸಂಚಾಲಕರು ಈರೇಶ್ ಹಿರೇಹಳ್ಳಿ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಹರೀಶ್ ಅತ್ನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಪವನಕುಮಾರಿ ಕುಮಾರ್, ಉಪಾಧ್ಯಕ್ಷರು ಸಿದ್ದರಾಜು, ಮಾಜಿ ಉಪಾಧ್ಯಕ್ಷರು ಮಾದೇಶ್, ಸದಸ್ಯರಾದ ವರದಮ್ಮ, ಮಾಹದೇಶ್, ಮೋಹನ್ ಯುವಕರ ಸಂಘದ ಅಧ್ಯಕ್ಷರು ಬಿ. ಎಚ್, ಪ್ರಸನ್ನ ಉಪಾಧ್ಯಕ್ಷರು ಶ್ರೀಶಿವ, ಕಾರ್ಯದರ್ಶಿ ಬಿ.ಸಿ. ಶಿವಣ್ಣ, ಖಜಾಂಚಿ ಬಿ.ಎಸ್. ಕುಮಾರ್, ಸಹಕಾರ್ಯದರ್ಶಿ ಬಿ.ಎನ್. ರವಿಕುಮಾರ್, ಗೌರವಾಧ್ಯಕ್ಷರು ಬಿ.ಕೆ. ಶಿವಣ್ಣ ಹಾಗೂ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.