ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ಹಿರಿಯ ಪತ್ರಕರ್ತ ದಿ.ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಎಷ್ಟೇ ವ್ಯಾಪಕವಾದರೂ ಭಾರತದಲ್ಲಿ ಮುದ್ರಣ ಮಾಧ್ಯಮದ ಬೇಡಿಕೆಗೆ ಕುಂದು ಉಂಟಾಗಿಲ್ಲ. ಏಕೆಂದರೆ ಮುದ್ರಣ ಮಾಧ್ಯಮದ ಬಗ್ಗೆ ಜನರಲ್ಲಿ ಇನ್ನೂ ವಿಶ್ವಾಸ ಉಳಿದುಕೊಂಡಿದೆ. ದೃಶ್ಯ ಮಾಧ್ಯಮಗಳು ಹಾಗೂ ಜಾಲತಾಣಗಳು ಅವಸರದ ಸರಕಾದರೆ ಮುದ್ರಣ ಮಾಧ್ಯಮವು ದಿನಪೂರ್ತಿ ಕೂಲಂಕಷ ಪರಿಶೀಲಿಸಿ ಮರುದಿನ ಸತ್ಯವಾಗಿದ್ದನ್ನು ಕೊಡುತ್ತವೆ ಎಂಬ ವಿಶ್ವಾಸ ಓದುಗರಲ್ಲಿ ಈಗಲೂ ಇದ್ದು ಇದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.1884ರ ಜುಲೈ 1 ರಂದು ಮಂಗಳೂರಿನಲ್ಲಿ ಹರ್ಮಿನ್ ಮೋಗ್ಲಿಂಗ್ ರವರು ಮಂಗಳೂರು ಸಮಾಚಾರ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ್ದು ಇಂದಿನ ಪತ್ರಿಕಾ ದಿನಾಚರಣೆಗೆ ಕಾರಣವಾದರೂ ಅದು ಮತಪ್ರಚಾರದ ಪತ್ರಿಕೆಯಾಗಿತ್ತು. ನಿಜವಾಗಿಯೂ ಕರ್ನಾಟಕದಲ್ಲಿ 1888 ರಲ್ಲಿ ಬಿ.ನರಸಿಂಗರಾಯರು ಮಂಗಳೂರಿನಲ್ಲಿ ಕನ್ನಡದ ಮೊಟ್ಟ ಮೊದಲ ದಿನಪತ್ರಿಕೆ ಸೂರ್ಯೋದಯ ಪ್ರಕಾಶಿಕವನ್ನು ಆರಂಭಿಸಿದ್ದೇ ನಿಜವಾದ ಕನ್ನಡ ಪತ್ರಿಕೋದ್ಯಮದ ಆರಂಭ ಎನ್ನಬಹುದು ಎಂದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮಾಜಿ ಮಹಾಪೌರ ಕೆ.ಚಮನ್ ಸಾಬ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕ್ರುದ್ದೀನ್, ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಕೆ.ಏಕಾಂತಪ್ಪ, ಚಂದ್ರಣ್ಣ. ಖಜಾಂಚಿ ಬದ್ರಿನಾಥ್. ಕೆ.ಜಿ.ಶಿವಕುಮಾರ್, ಕಾಡಜ್ಜಿ ಮಂಜುನಾಥ, ಉಪಾಧ್ಯಕ್ಷರಾದ ಜೆ.ಎಸ್.ತಿಪ್ಪೇಸ್ವಾಮಿ, ಜೆ.ಎಸ್.ವೀರೇಶ್, ಕೃಷ್ಣಾಜಿರಾವ್, ವೇದಮೂರ್ತಿ, ಬಿ.ಚನ್ನವೀರಯ್ಯ. ಇಂದುಧರ ನಿಶಾನಿಮಠ, ಬಿ.ಎಸ್.ಮುದ್ದಯ್ಯ, ಕೆ.ಸಿ.ನಿಂಗರಾಜು, ಮಂಜುನಾಥ್, ಕೃಷ್ಣ ಪಿ.ರಾಜೋಳಿ, ಮಂಜುನಾಥ್ ಬಿ ರಾಜೋಳಿ, ಅನಿಲ್ ಕುಮಾರ್ ಭಾವಿ, ಚನ್ನಬಸವ ಶೀಲವಂತ್, ಗೋವಿಂದ ರಾಜ್, ಕೆ.ಜೈಮುನಿ, ಹನುಮಂತಪ್ಪ, ಚಂದ್ರು, ಎ.ಬಿ.ರುದ್ರಮ್ಮ, ಸುಜಾತ ಬೂಸನೂರು ಮತ್ತಿತರರು ಹಾಜರಿದ್ದರು.