ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಷ್ಟ್ರೀಯ ಬಸವ ದಳ ಟ್ರಸ್ಟ್ ಆಶ್ರಯದಲ್ಲಿ ವಿನೋಬ ನಗರದ ಬಸವ ಮಂಟಪದಲ್ಲಿ ಆಯೋಜಿಸಿದ್ದ 893ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಗುರು ಬಸವಣ್ಣನವರು ಇಡೀ ವಿಶ್ವಕ್ಕೆ ತಿಳಿಸಿದ ಕಾಯಕ ಮತ್ತು ದಾಸೋಹ ತತ್ವಗಳು ಅತ್ಯಂತ ಆದರ್ಶ ಎನಿಸಿದ್ದು, ಅವುಗಳ ಮಾರ್ಗದಲ್ಲಿ ವಿಶ್ವ ಸಾಗುವ ಅನಿವಾರ್ಯತೆ ಇದ್ದು ಆ ಮಾರ್ಗದಲ್ಲಿ ಸಾಗುವ ಪ್ರಯತ್ನ ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ಜಯಂತ್ಯುತ್ಸವ ಸಮಾರಂಭದಲ್ಲಿ ಶರಣರಾದ ಶಿವಮೊಗ್ಗ ವೇಣುಗೋಪಾಲ್ ವಿಶ್ರಾಂತ ಆಕಾಶವಾಣಿ ಕಲಾವಿದರು. ಶರಣ ಪಂ. ಹುಮಾಯುನ್ ಹರ್ಲಾಪುರ್ ಮತ್ತು ವಿಶ್ರಾಂತ ಮುಖ್ಯ ಶಿಕ್ಷಕ ಶರಣ ಬಾಬುಜಾನ್ ಶಿಕಾರಿಪುರ ಇವರುಗಳ ಪ್ರಾಮಾಣಿಕ ಕಾಯಕ ಸೇವೆಯನ್ನು ಗುರುತಿಸಿ ಅವರಿಗೆ ಭಕ್ತಿ ಸಮರ್ಪಣೆ ಸಲ್ಲಿಸಲಾಯಿತು.ಇಬ್ಬರೂ ಗಾಯಕರು ಸಹ ವಚನ ಗಾಯನದ ಮೂಲಕ ಗುರು ಬಸವಣ್ಣನವರಿಗೆ ಭಕ್ತಿ ಸಮರ್ಪಣೆ ಸಲ್ಲಿಸಿದರು. ಗುರು ಬಸವಣ್ಣನವರು ಕಲ್ಯಾಣದಲ್ಲಿ ಕಟ್ಟಿದ ಕಲ್ಯಾಣ ಸಾಮ್ರಾಜ್ಯ ವಿಶ್ವಕ್ಕೆ ಸದಾ ದಾರಿದೀಪ. ಅವರ ವಚನಗಳು ಅನುಭಾವ ಲೋಕದತ್ತ ಕರೆದುಕೊಂಡು ಹೋಗುವುದು. ಅವರ ವಚನಗಳು ನಮಗೆ ಸಾರ್ಥಕತೆಯ ಪಾಠ ಬೋಧನೆ ಮಾಡಿರುವುದನ್ನು ಕಾಣಬಹುದು. ವಿಶ್ವಶಾಂತಿಯ ಮಂದ ಮಂತ್ರವನ್ನು ಅವರ ವಚನಗಳಲ್ಲಿ ಕಾಣಬಹುದು. ಆ ದಿಕ್ಕಿನಲ್ಲಿ ಸಾಗುವ ಪ್ರಯತ್ನ ಮಾಡೋಣ ಎಂದು ಶರಣೆ ನೀಲಲೋಚನ ಹಾಲಪ್ಪನವರು ತಮ್ಮ ಅನುಭಾವ ಸಂದೇಶದಲ್ಲಿ ತಿಳಿಸಿದರು.