ರಾಮನಲ್ಲಿದ್ದ ಗುಣಗಳ ಪೈಕಿ ಒಂದನ್ನಾದರೂ ನಾವು ಅಳವಡಿಸಿಕೊಳ್ಳಬೇಕು

KannadaprabhaNewsNetwork |  
Published : Oct 19, 2024, 12:23 AM ISTUpdated : Oct 19, 2024, 12:24 AM IST
ಕ್ಯಾಪ್ಸನ್: ಚನ್ನರಾಯಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಕಥ ವಿದ್ವಾನ್ ಶ್ರೀಶವಿಠಲದಾಸರು ಪ್ರವಚನ ನೀಡಿದರು. | Kannada Prabha

ಸಾರಾಂಶ

ರಾಮ ಮಂತ್ರವ ಜಪಿಸೋ ಹೇ ಮನುಜ ಆ ಮಂತ್ರ ಈ ಮಂತ್ರ ನೆಚ್ಚಿನೀ ಕೆಡಬೇಡ ಸೋಮಶೇಖರ ತನ್ನ ಸತಿಗೆ ಹೇಳಿದ ಮಂತ್ರ ಎಂದು ಶ್ರೀ ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ರಾಮನಾಮನ ಮಹತ್ವವನ್ನು ತಿಳಿಸಿದ್ದಾರೆ ಎಂದು ಹರಿಕಥಾ ವಿದ್ವಾನ್ ಶವಿಠಲದಾಸರು ತಿಳಿಸಿದರು. ಅವರು ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಡೆದ 48ದಿನ ವಾಲ್ಮೀಕಿ ರಾಮಾಯಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಾಮ ಮಂತ್ರವ ಜಪಿಸೋ ಹೇ ಮನುಜ ಆ ಮಂತ್ರ ಈ ಮಂತ್ರ ನೆಚ್ಚಿನೀ ಕೆಡಬೇಡ ಸೋಮಶೇಖರ ತನ್ನ ಸತಿಗೆ ಹೇಳಿದ ಮಂತ್ರ ಎಂದು ಶ್ರೀ ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ರಾಮನಾಮನ ಮಹತ್ವವನ್ನು ತಿಳಿಸಿದ್ದಾರೆ ಎಂದು ಹರಿಕಥಾ ವಿದ್ವಾನ್ ಶವಿಠಲದಾಸರು ತಿಳಿಸಿದರು.

ಅವರು ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಡೆದ 48ದಿನ ವಾಲ್ಮೀಕಿ ರಾಮಾಯಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮನ ಮಂತ್ರವನ್ನು ಶಿವನೂ ತನ್ನ ಪತ್ನಿಯಾದ ಪಾರ್ವತಿಗೆ ಉಪದೇಶ ಮಾಡಿದ ಎನ್ನುತ್ತಾರೆ. ಕಾಪಾಡಿ ಆಗಿದ್ದ ರತ್ನಾಕರ ಎಂಬ ಬೇಡನು ನಾರದರು ಉಪದೇಶ ಮಾಡಿದ ರಾಮನಾಮದ ಅದ್ಬುತ ಶಕ್ತಿಯಿಂದ ತಾನು ಮಾಡುತ್ತಿದ್ದ ದರೋಡೆ, ಕೊಲೆ ಸುಲಿಗೆಗಳಂತಹ ಹೀನಕೃತ್ಯವನ್ನು ಬಿಟ್ಟು ರಾಮ ಮಂತ್ರವನ್ನು ಜಪಿಸಿ ತಪಸ್ಸು ಮಾಡಿ ವಾಲ್ಮೀಕಿ ಮಹರ್ಷಿಗಳಾಗಿ ಮರು ಹುಟ್ಟು ಪಡೆದು ಬ್ರಹ್ಮದೇವರ ಅನುಗ್ರಹದಿಂದ ರಾಮಾಯಣದಂತಹ ಆದಿ ಕಾವ್ಯವನ್ನು ರಚಿಸಿ ಆದಿ ಕವಿ ವಾಲ್ಮೀಕಿ ಎನಿಸಿದರು ಎಂದರು.

ಯುಗ ಯುಗಗಳೇ ಕಳೆದರೂ ಸಹ ರಾಮ ಮತ್ತು ರಾಮಾಯಣ ಇನ್ನು ನಿತ್ಯ ನೂತನವಾಗಿದೆ. ಆ ಮಹಾಕಾವ್ಯದಲ್ಲಿ ಬರುವ ಶ್ರೀ ರಾಮನ ಪಾತ್ರ ಅದ್ಭುತವಾಗಿದೆ. ರಾಮರ ಆದರ್ಶ, ಸನ್ನಡತೆ, ಸತ್ಯ, ಪಿತೃವಾಕ್ಯ ಪರಿಪಾಲನೆ, ಮಾನವೀಯ ಮೌಲ್ಯಗಳ ಪಾಲನೆಯ ಜೊತೆಗೆ ಆದರ್ಶ ಮಗ, ಆದರ್ಶಪತಿ, ಆದರ್ಶ ಸಹೋದರ, ಆದರ್ಶ ರಾಜ ಮತ್ತು ಧರ್ಮವೇ ಮೂರ್ತಿಯಾಗಿ ಬಂದಂತೆ ರಾಮನ ಧರ್ಮ ಪ್ರಜ್ಞೆ ಹಾಗೂ ಆದರ್ಶ ರಾಮ ರಾಜ್ಯವನ್ನ ನಡೆಸಿದಂತಹ ರೀತಿ ಇವೆಲ್ಲ ಕಾರಣಗಳಿಂದ ಸೀಮ ಗ್ರಾಮಾಯಣ ಮಹಾಕಾವ್ಯವು ಇಂದಿಗೂ ಎಂದೆಂದಿಗೂ ಪೂಜನೀಯ ಸ್ಥಾನವನ್ನು ಹೊಂದಿದೆ. ಇಂತಹ ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳು ಸಹ ಎಲ್ಲರಿಗೂ ಪೂಜ್ಯರಾಗಿದ್ದಾರೆ ಎಂದರು.

ವಾಲ್ಮೀಕಿಗಳು ಈ ಕಾವ್ಯದಲ್ಲಿ ಶ್ರೀ ರಾಮನ 16 ಗುಣಗಳನ್ನು ವರ್ಣಿಸಿದ್ದಾರೆ. ರಾಮರಲ್ಲಿದ್ದ ಗುಣಗಳ ಪೈಕಿ ಒಂದನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ. ರಾಮರ ಜೀವನ ಭೋಗ ಜೀವನವಲ್ಲ, ಅದು ತ್ಯಾಗದ ಜೀವನ ಯೋಗದ ಜೀವನ ಯೋಗಿಗಳ ಜೀವನ. ರಾಮಾಯಣದಲ್ಲಿ ಒಂದು ಮಾತಿದೆ. ರಾಮನನ್ನು ಯಾರು ನೋಡಲಿಲ್ಲವೋ, ರಾಮನೇ ಯಾರನ್ನು ನೋಡಲಿಲ್ಲವೋ ಅವರ ಜೀವನ ವ್ಯರ್ಥ. ಅದಕ್ಕೋಸ್ಕರವಾಗಿ ಶ್ರೀ ಪುರಂದರದಾಸರು ರಾಮ ಶಬ್ದವನ್ನು ಮಂತ್ರ ಎಂದು ಕರೆದಿದ್ದಾರೆ. ಅದು ಬರಿ ಮಂತ್ರವಲ್ಲ ತಾರಕ ಮಂತ್ರ. ರಾಮ ತಾರಕ ಮಂತ್ರ ಎಂದಿದ್ದಾರೆ. ಜ್ಞಾನಿಗಳು ಎಲ್ಲರಿಗೂ ಎಂದೆಂದಿಗೂ ಆದರ್ಶ ಪುರುಷನಾಗಿರುವ ಶ್ರೀರಾಮರು ಆದರ್ಶಗಳನ್ನ ಪಾಲಿಸೋಣ ಎಂದರು.

ಇದೇ ಸಂದರ್ಭದಲ್ಲಿ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ. ಎನ್. ಅಶೋಕ್, ಸದಸ್ಯರಾದ ಮಹದೇವ್, ಸೋಮಶೇಖರ್, ಲಾ. ನಾ. ಗುಪ್ತ, ಸುರೇಶ್ ಮತ್ತಿತರಿದ್ದರು.

ಫೋಟೋ ಶೀರ್ಷಿಕೆ: ಚನ್ನರಾಯಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಕಥಾ ವಿದ್ವಾನ್‌ ವಿಠಲದಾಸರು ಪ್ರವಚನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ