- ತಿಮ್ಮೇನಹಳ್ಳಿಯಲ್ಲಿ ವಾಲ್ಮಿಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಸನ್ನಾನಂದ ಶ್ರೀ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಮಾಜದಲ್ಲಿ ಜಾತಿ-ಮತ ಬೇಧ, ಮೇಲು-ಕೀಳು ಎಂಬ ಭಾವನೆಗಳನ್ನು ಬಿದಿಗಿಟ್ಟು ಎಲ್ಲರೂ ಪರಸ್ಪರ ಸಹಬಾಳ್ವೆ ನಡೆಸಬೇಕು. ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯ ವಾತಾವರಣ ಕಾಣಬಹುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ಬುಧವಾರ ನಾಯಕ ಸಮಾಜ, ಗ್ರಾಮಸ್ಥರು ಸೇರಿ ಹಮ್ಮಿಕೊಂಡಿದ್ದ ಶ್ರೀ ವಾಲ್ಮಿಕಿ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವಣ್ಣ, ಕನಕದಾಸರು, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನೀಯರ ಜಯಂತಿ ಕಾರ್ಯಕ್ರಮಗಳನ್ನು ಆಯಾಯ ಜಾತಿಗಳಿಗೆ ಸೀಮಿತಗೊಳಿಸಿ ಅವರನ್ನ ಜಾತಿಗಳ ಚೌಕಟ್ಟಿನಲ್ಲಿಟ್ಟು ಆಚರಿಸುವಂತಾಗಿರುವುದು ಸಲ್ಲದು ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಮಾಹಸ್ವಾಮಿಜಿಗಳು ಆಶೀರ್ವಚನ ನೀಡಿದರು. ಕನಕರು ಮತ್ತು ವಾಲ್ಮೀಕಿಯವರು ಕೇವಲ ಒಂದು ಜಾತಿಗೆ ಸೀಮೀತರಾದವರಲ್ಲ. ಅವರು ಎಲ್ಲ ಸಮುದಾಯಗಳಿಗೆ ಜ್ಞಾನ ಮತ್ತು ಸಂಸ್ಕಾರಗಳನ್ನು ನೀಡಿದ ಪುಣ್ಯಪುರುಷರು. ಹಿಂದುಳಿದ ಜನ ಸಮುದಾಯಗಳು ಒಗ್ಗಟ್ಟಾಗಬೇಕಾದರೆ ರಾಜ್ಯದಲ್ಲಿ ಕುರುಬ ಮತ್ತು ನಾಯಕ ಸಮುದಾಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ವಿವಿಧ ರಂಗಗಳಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಒಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ಟಿ ಮೋರ್ಚಾ ರಾಜ್ಯಾ ಉಪಾಧ್ಯಕ್ಷ ಶ್ರಿನಿವಾಸ್ ದಾಸಕರಿಯಪ್ಪ, ಎಂ.ಪಿ.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಾಯಕ ಸಮಾಜದ ಅಧ್ಯಕ್ಷ ಕುಳಗಟ್ಟೆ ಹನುಮಂತಪ್ಪ, ಎಂ.ಬಿ. ಹಾಲಪ್ಪ ಮಾಯಾಕರ್, ಗಂಗಾಧರ್, ಹನುಮಂತಪ್ಪ, ಮುಖಂಡ ಚಂದಪ್ಪ, ಡಿಎಸ್. ಸುರೇಂದ್ರಗೌಡ, ಹದಡಿ ಹಾಲಪ್ಪ, ವಕೀಲ ಹಾಲೇಶಪ್ಪ,ಕೆ.ರಂಗಪ್ಪ, ಟಿ.ಆರ್.ಬಸವರಾಜಪ್ಪ ಹಾಲೇಶಪ್ಪ ನ್ಯಾಮತಿ ಅಧ್ಯಕ್ಷ ಸೋಮಣ್ಣ, ಜಿ ಆರ್. ಹನುಮಂತಪ್ಪ, ಮುಖಂಡರು ಇದ್ದರು.
-28ಎಚ್.ಎಲ್.ಐ1: