ಮಸೀದಿ ಮುಂದೆಯೇ ಮೆರವಣಿಗೆ ಮಾಡುತ್ತೇವೆ, ತಾಕತ್ ಇದ್ದರೆ ತಡೆಯಿರಿ

KannadaprabhaNewsNetwork |  
Published : Sep 16, 2026, 02:00 AM IST
ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್  | Kannada Prabha

ಸಾರಾಂಶ

ಮದ್ದೂರಿನಲ್ಲಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ಮಾಡುತ್ತೇವೆ. ಮಸೀದಿ ಮುಂದೆಯೇ ಮೆರವಣಿಗೆ ಮಾಡುತ್ತೇವೆ. ತಾಕತ್ ಇದ್ದರೆ ತಡೆಯಿರಿ. ಕಳೆದ ವರ್ಷ ಅನ್ಯಕೋಮಿನವರು ಗಣಪತಿಗೆ ಕಲ್ಲು ತೂರಿದರು. ಇದರಿಂದ ದೊಡ್ಡ ಮಟ್ಟದ ಗಲಾಟೆಯಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹೋರಾಟ ಮಾಡಿದ್ದರು.

ಮಳವಳ್ಳಿ:

ಕಳೆದ ವರ್ಷ ಮದ್ಧೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಸಂಬಂಧ ನನಗೂ ಸಮನ್ಸ್ ನೀಡಿದ್ದಾರೆ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ತಿಳಿಸಿದ್ದಾರೆ.

ಘಟನೆ ವಿಚಾರವಾಗಿ ವರ್ಷದ ಬಳಿಕ ಸಮನ್ಸ್ ನೀಡಿದ್ದಾರೆ. ನಮಗೆ ಒತ್ತಡ ಇದೆ ಎಂದು ಹೇಳಿ ಫೋನ್ ಮೇಲೆ ಫೋನ್ ಮಾಡಿ ಸಮನ್ಸ್ ನೀಡಿದ್ದಾರೆ. ಕಲ್ಲು ತೂರಿದವರ ಮೇಲೆ ಏನು ಕ್ರಮ ಆಯ್ತು ಅಂತ ಹೇಳಲ್ಲ. ಆದರೆ, ಪ್ರತಿಭಟನೆ ಮಾಡಿದ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿ ಇದೀಗ ಸಮನ್ಸ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರ‌ದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ಮಾಡುತ್ತೇವೆ. ಮಸೀದಿ ಮುಂದೆಯೇ ಮೆರವಣಿಗೆ ಮಾಡುತ್ತೇವೆ. ತಾಕತ್ ಇದ್ದರೆ ತಡೆಯಿರಿ. ಕಳೆದ ವರ್ಷ ಅನ್ಯಕೋಮಿನವರು ಗಣಪತಿಗೆ ಕಲ್ಲು ತೂರಿದರು. ಇದರಿಂದ ದೊಡ್ಡ ಮಟ್ಟದ ಗಲಾಟೆಯಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹೋರಾಟ ಮಾಡಿದ್ದರು. ಕಳೆದ ಒಂದು ವರ್ಷದಿಂದ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ನಾವು ಬಹಿರಂಗವಾಗಿ ಕೇಳಿದ್ರು ಮಾಹಿತಿ ನೀಡಿಲ್ಲ. ಟಿ.ನರಸೀಪುರದಲ್ಲಿ ಘಟನೆ ಬಳಿಕ 23 ಜನರಿಗೆ ಸಮನ್ಸ್ ನೀಡಿದ್ದಾರೆ. ಈ ರೀತಿ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಾವು ಯಾವ ದೇಶದಲ್ಲಿ ಇದ್ದೀವಿ ಎಂದು ಗೊತ್ತಾಗುತ್ತಿಲ್ಲ. ಹಬ್ಬವನ್ನು ಭಕ್ತಿಯಿಂದ ಮಾಡಲು ಆಗುತ್ತಿಲ್ಲ. ಭಯದಿಂದ ಹಬ್ಬ ಮಾಡುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನು ರಾಜ್ಯ ಸರ್ಕಾರ 6ನೇ ಭಾಗ್ಯವಾಗಿ ನೀಡಿದೆ. ಗಣೇಶ ಮೆರವಣಿಗೆಗೆ ಧ್ವನಿ ವರ್ಧಕ, ಡಿಜೆ ಏನು ಬಳಸಬೇಡಿ ಅಂತಾರೆ.

ನಾವು ಮದ್ದೂರಿನ ಬೃಹತ್ ಸಾಮೂಹಿಕ ವಿಸರ್ಜನೆ ಮೆರವಣಿಗೆ ಮಾಡುತ್ತೇವೆ. 10-15 ಸಾವಿರ ಹಿಂದೂ ಕಾರ್ಯಕರ್ತರು ಬರುತ್ತಾರೆ. ಮಸೀದಿ ಮುಂದೆಯೇ ನಾವು ಮೆರವಣಿಗೆ ಮಾಡುತ್ತೇವೆ. ನಮಗೆ ಅಲ್ಲಿ ಹೋಗಬೇಡಿ ಎಂದು ಯಾರು ಹೇಳಬೇಡಿ.

ಡಿಜೆ, ಕಲಾ ತಂಡಗಳ ಮೂಲಕ ಹೋಗುತ್ತೇವೆ. ತಾಕತ್ ಇದ್ದರೆ ಬಂದು ತಡೆಯಿರಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಂದು 108 ಸಾಮೂಹಿಕ ಗಣಪತಿ ವಿಸರ್ಜನೆ: ಬಿಜೆಪಿ, ಜೆಡಿಎಸ್ ನಾಯಕರು ಭಾಗಿಮದ್ದೂರು: ಪಟ್ಟಣದಲ್ಲಿ ಇಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಮ್ಮಿಕೊಂಡಿರುವ 108 ಗಣೇಶಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮದಲ್ಲಿ ದೋಸ್ತಿ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ.ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸುವ ಸಾಧ್ಯತೆ ಇದೆ.

ಕಳೆದ ವರ್ಷ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಿದ ಪ್ರಕರಣ ನಡೆದಿತ್ತು. ಈ ವರ್ಷ ದೋಸ್ತಿ ಪಕ್ಷಗಳ ಮುಖಂಡರು, ಕಾರ್ಯಕರ್ತರು 108 ಗಣೇಶಗಳ ಸಾಮೂಹಿಕ ವಿಸರ್ಜನೆ ಹಮ್ಮಿಕೊಂಡಿದ್ದಾರೆ. ಇದೀಗ ಕಳೆದ ವರ್ಷದ ಗಲಾಟೆಯನ್ನು ಸವಾಲಾಗಿ ತೆಗೆದುಕೊಂಡಿರುವ ದೋಸ್ತಿಗಳು ಬಿಜೆಪಿ-ಜೆಡಿಎಸ್ ಪಕ್ಷಗಳ ನೇತೃತ್ವದಲ್ಲಿ ಮದ್ದೂರಿನ ಹಲವು ಕಡೆ ಕೂರಿಸಿರುವ ಗಣಪತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಿದ್ದಾರೆ.ಸಾಮೂಹಿಕ ಗಣಪತಿ ವಿಸರ್ಜನೆ‌ಗೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಅಲ್ಲದೇ, ಕಳೆದ ವರ್ಷ ಸಾಗಿದ್ದ ವೇಳೆ ಗಲಭೆ ಸಂಭವಿಸಿದ್ದ ರಸ್ತೆಗಳ ಮಾರ್ಗದಲ್ಲಿಯೇ ಮೆರವಣಿಗೆ ಮಾಡಲು ನಿರ್ಧರಿಸಿದ್ದಾರೆ. ಪೇಟೆ ಬೀದಿಯ ಮಸೀದಿ ಪಕ್ಕದಲ್ಲೇ ರ್ಯಾಲಿ ಸಾಗಲಿದೆ. ಸುಮಾರು 10 ಸಾವಿರ ಮಂದಿ ಮೆರವಣಿಗೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.ಗಲಭೆ ಪ್ರಕರಣ ವಿಚಾರಣೆಗೆ ಹಾಜರಾಗದ 10 ಮಂದಿಗೆ ನ್ಯಾಯಾಲಯದಿಂದ ಬಂಧನ ವಾರೆಂಟ್

ಮದ್ದೂರು:ಪಟ್ಟಣದಲ್ಲಿ ಕಳೆದ ವರ್ಷ ಗಣೇಶನ ಮೂರ್ತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಮತ್ತು ಗಲಭೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ 10 ಮಂದಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.ಹಿಂದೂಪರ ಸಂಘಟನೆಯ ಗಿರೀಶ್, ಸೌಮ್ಯ, ರಮ್ಯ, ಮಧು, ರಾಕೇಶ್, ವರುಣ, ಭಾಸ್ಕರ್, ಸ್ವಾಮಿ, ರಾಂಖ, ಚಂದನ್ ಹಾಗೂ ದರ್ಶನ್ ವಿರುದ್ಧ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಎಸ್.ಆರ್.ನಂದಿನಿ ಅವರು ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದ್ದಾರೆ.

ಈ ಎಲ್ಲಾ ಆರೋಪಿಗಳನ್ನು ಸೆ.28ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರಪಡಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಆದೇಶ ನೀಡಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ 10 ಮಂದಿ ಹಾಗೂ ಜಾಮೀನು ಪಡೆದಿರುವ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ತಾಲೂಕ್ ಘಟಕದ ಅಧ್ಯಕ್ಷ ಸಿ.ಕೆ.ಸತೀಶ ಸೇರಿದಂತೆ 23 ಮಂದಿ ವಿರುದ್ಧ ನ್ಯಾಯಾಲಯ ಸಮಸ್ತ ಜಾರಿ ಮಾಡಿದ್ದು, ಸೆಪ್ಟೆಂಬರ್ 28ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಧೀಶರಾದ ನಂದಿನಿ ಆದೇಶ ಹೊರಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆಯಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ: ಪ್ರಹ್ಲಾದ್ ಜೋಶಿ
ಜನಸ್ನೇಹಿ ವೈದ್ಯರ ಆರೊಗ್ಯ ಕೈಪಿಡಿ, 2 ಕವನ ಸಂಕಲನ