- ಜಿಲ್ಲಾ ನೇಕಾರ ಒಕ್ಕೂಟ ಮಹಿಳಾ ವಿಭಾಗದಿಂದ ಗೀತಾ ಜಯಂತಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ನೇಕಾರ ಸಮಾಜಕ್ಕೆ ದಿವಂಗತ ಶಾಮನೂರು ಶಿವಶಂಕರಪ್ಪ ಸದಾ ಸ್ಪಂದಿಸಿ, ಪ್ರೋತ್ಸಾಹಿಸುತ್ತಿದ್ದರು. ಶಿವಶಂಕರಪ್ಪ ಅವರಿಗೆ ಸಮಾಜ ಸದಾ ಋಣಿಯಾಗಿರುತ್ತದೆ ಎಂದು ಭಜರಂಗ ದಳದ ಹಿರಿಯ ಮುಖಂಡ ಕೆ.ಹನುಮಂತಪ್ಪ ಎಸ್‌ಒಜಿ ಹೇಳಿದರು.ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಮಹಿಳಾ ವಿಭಾಗದಿಂದ ಹಮ್ಮಿಕೊಂಡಿದ್ದ ಗೀತಾ ಜಯಂತಿ ಮತ್ತು ಭಗವದ್ಗೀತೆಯ 12ನೇ ಅಧ್ಯಾಯದ ಶತಕಂಠದಲ್ಲಿ ಸಾಮೂಹಿಕ ಗೀತ ಸಮರ್ಪಣೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಮುಖಂಡ ಬೆನಕಲ್ಲಪ್ಪ ಬುಗಡೆ ಮಾತನಾಡಿ, ಮುಂದಿನ ದಿನಗಳಲ್ಲಿ ನೇಕಾರ ಸಮುದಾಯದ ಮಹಿಳಾ ಒಕ್ಕೂಟವನ್ನು ಇನ್ನಷ್ಟು ಬಲಪಡಿಸಲಾಗುವುದು. ಅದಕ್ಕಾಗಿ ನಾವು ಮಹಿಳಾ ಒಕ್ಕೂಟಕ್ಕಾಗಿ ಕೋಆಪರೇಟಿವ್ ಸೊಸೈಟಿ ಅಥವಾ ಮಹಿಳಾ ಬ್ಯಾಂಕ್ ಮಾಡಿಕೊಡುತ್ತೇವೆ. ನಮ್ಮ ಸಮುದಾಯವೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಖ್ಯ ವಾಹಿನಿಗೆ ಬರಲು ಮಹಿಳೆಯರು ಸಹ ಸಂಘಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಸಮಾಜದ ಜಿಲ್ಲಾಧ್ಯಕ್ಷ ಶ್ರೀಕಾಂತ ಕಾಕಿ ಮಾತನಾಡಿ, ದಾವಣಗೆರೆಯಲ್ಲಿ ಕೈಗಾರಿಕಾ ನಿವೇಶನ, ವಸತಿ ನಿವೇಶನಗಳ ಬಗ್ಗೆ ಈವರೆಗೆ ಆಗಿರುವ ಪ್ರಗತಿಯ ಕುರಿತಂತೆ ಸಮಾರಂಭದಲ್ಲಿ ವಿವರಿಸಿದರು. ಸ್ವಕುಳಸಾಳಿ ಸಮಾಜದ ಕ್ಷೀರಸಾಗರ ಹನುಮಂತಪ್ಪ, ಒಕ್ಕೂಟದ ರಾಜ್ಯ ಪ್ರತಿನಿಧಿಗಳಾದ ಜ್ಯೋತಿ ಕೃಷ್ಣ ಸಾರೋದೆ, ಉಮಾದೇವಿ, ಜಿಲ್ಲಾ ಘಟಕದ ಅಕ್ಕಮ್ಮ, ತೊಗಟವೀರ ಸಮಾಜದ ರವಿಕುಮಾರ, ಉಮಾದೇವಿ, ಜ್ಯೋತಿ, ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ, ಅಮಿತಾ ಶ್ರೀನಿವಾಸ, ರೇಖಾ ಶಾವಿ, ಸಂಧ್ಯಾ, ರಾಘಾ ರಘುರಾಮ್ ಇತರರು ಇದ್ದರು.
- - -
ದಾವಣಗೆರೆಯಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಮಹಿಳಾ ವಿಭಾಗದಿಂದ ಗೀತಾ ಜಯಂತಿ ಮತ್ತು ಭಗವದ್ಗೀತೆ 12ನೇ ಅಧ್ಯಾಯದ ಶತಕಂಠದಲ್ಲಿ ಸಾಮೂಹಿಕ ಗೀತ ಸಮರ್ಪಣೆ, ಜಿಲ್ಲಾ ಮತ್ತು ತಾಲೂಕುಮಟ್ಟದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಸಮಾರಂಭದ ನಡೆಯಿತು.