ಡಿಜಿಟಲ್ ಯುಗದಲ್ಲಿ ವೆಬ್ ಜ್ಞಾನ ಅಗತ್ಯ

KannadaprabhaNewsNetwork |  
Published : Sep 25, 2026, 03:00 AM IST
(ಫೋಟೊಬಿಕೆಟಿ3, ಇಂಪೋಕ್ಷೇತ್ರ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಿಜಯಮಹಾಂತೇಶ ಬಂಗಾರಗುಂಡ  ಅವರು ನಾಲ್ಕು ದಿನಗಳ 'ವೆಬ್ ಕ್ರಾಫ್ಟ್' ಕಾರ್ಯಾಗಾರವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಇಂದಿನ ಡಿಜಿಟಲ್ ಯುಗದಲ್ಲಿ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳನ್ನು ವಿಸ್ತರಿಸಿಕೊಳ್ಳಲು ವೆಬ್ ತಂತ್ರಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಇಂಪೋಕ್ಷೇತ್ರ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಿಜಯಮಹಾಂತೇಶ ಬಂಗಾರಗುಂಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಂದಿನ ಡಿಜಿಟಲ್ ಯುಗದಲ್ಲಿ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳನ್ನು ವಿಸ್ತರಿಸಿಕೊಳ್ಳಲು ವೆಬ್ ತಂತ್ರಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಇಂಪೋಕ್ಷೇತ್ರ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಿಜಯಮಹಾಂತೇಶ ಬಂಗಾರಗುಂಡ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದಿಂದ ಆಯೋಜಿಸಿರುವ ನಾಲ್ಕು ದಿನಗಳ ವೆಬ್ ಕ್ರಾಫ್ಟ್ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅವಕಾಶಗಳನ್ನು ವಿಸ್ತರಿಸಿಕೊಳ್ಳಲು ವೆಬ್ ಡೆವಲಪ್ಮೆಂಟ್, ಡಿಜಿಟಲ್ ವಿನ್ಯಾಸ ಮತ್ತು ತಾಂತ್ರಿಕ ಕೌಶಲ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಸಮಸ್ಯೆಗಳೇ ಚಟುವಟಿಕೆಗಳ ಉಗಮಕ್ಕೆ ಕಾರಣ, ಜ್ಞಾನವಿದ್ದರೂ ಉಪಯೋಗಿಸಿಕೊಳ್ಳದಿದ್ದರೆ ಅದು ವ್ಯರ್ಥವಾಗುತ್ತದೆ. ಅಧ್ಯಯನ ವಿಭಾಗ ಯಾವುದಿದ್ದರೂ ಕಲಿಯುವ ಆಸಕ್ತಿ ಇದ್ದರೆ ಏನು ಬೇಕಿದ್ದರೂ ಸಾಧಿಸಬಹುದು. ತರಗತಿಯಲ್ಲಿ ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಾಗ ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗುತ್ತದೆ ಎಂದರು.

ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ಮಾತನಾಡಿ, ಕಲೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಇನ್ನೂ ಸ್ವಲ್ಪ ಒತ್ತು ನೀಡಬೇಕು. ಅಂದಾಗ ಮಾತ್ರ ಯಶಸ್ಸು ಕಾಣಬಹುದು. ಈಗಿನ ದಿನಗಳಲ್ಲಿ ವೆಬ್ಸೈಟ್ ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು ಅದನ್ನು ಕಲಿಯುವುದರಿಂದ ಅವಕಾಶಗಳ ಹಾದಿ ತೆರೆದುಕೊಳ್ಳುತ್ತವೆ. ನಮ್ಮಲ್ಲಿರುವಂತಹ ಕಲೆಯಯನ್ನು ಕಲಾತ್ಮಕವಾಗಿ ತೋರಿಸಿಕೊಳ್ಳಬೇಕು ಎಂದರು.

ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ನಟರಾಜ ಇಂಗಳಗಿ ಮಾತನಾಡಿದರು. ಸಾಂಸ್ಕೃತಿಕ ಚಟುವಟಿಕೆಗಳ ವಿಭಾಗದ ಸಂಯೋಜಕ ಡಾ.ಕೆ.ವಿ ಮಠ, ಲ್ಯಾಬ್ ಇನ್ಸ್‌ಪೆಕ್ಟರ್ ಎಂ.ಐ.ಕಂಬಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30% ಎಥೆನಾಲ್‌ ಕುರಿತು ಕೇಂದ್ರಕ್ಕೆ ಇಂದು ವರದಿ - ಲ್ಯಾಬ್‌ ರಿಪೋರ್ಟ್‌ ಕೂಡ ಹಸ್ತಾಂತರ: ರಿಜ್ವಾನ್‌
ರಾಜ್ಯದಲ್ಲಿ ಮತ ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ಅಭಿಯಾನ-ಈಗ ಎಸ್‌ಎಸ್‌ಆರ್‌