ಚನ್ನಪಟ್ಟಣ: ಸುಮಾರು ೪ ವರ್ಷಗಳ ಬಳಿಕ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಕಳೆಕಟ್ಟಿದ್ದು, ಹಳ್ಳಿಕಾರ್ ತಳಿ ರಾಸುಗಳು ಸೇರಿದಂತೆ ವಿವಿಧ ತಳಿಯ ರಾಸುಗಳ ಗಜ್ಜೆಯ ಸದ್ದು ಕೇಳಿಬಂದಿದೆ.
ಕೆಂಗಲ್ ದೇವಾಯಲಯದ ಆವರಣ, ಪಕ್ಕದ ನೀಲಗಿರಿ ತೋಪು, ಬೆಂಗಳೂರು-ಮೈಸೂರು ಹೆದ್ದಾರಿ, ಚಿಕ್ಕಮಣ್ಣುಗುಡ್ಡೆ ಪ್ರದೇಶದಲ್ಲಿ ರಾಸುಗಳನ್ನು ಕಟ್ಟಿದ್ದು, ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಆಗಮಿಸಿರುವ ವರ್ತಕರು ಹಾಗೂ ರೈತರು ರಾಸುಗಳನ್ನು ಮಾರುವ ಹಾಗೂ ಖರೀದಿಸುವ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ತಳಿಯ ರಾಸುಗಳೊಂದಿಗೆ ಪೋಟೋ ಕ್ಲಿಕಿಸಿಕೊಳ್ಳಲು ಜನ ಮುಗಿ ಬಿದ್ದರು.
ಹಳ್ಳಿಕಾರ್ ರಾಸುಗಳ ಕಲರವ: ಇನ್ನು ಜಾತ್ರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಳ್ಳಿಕಾರ್ ತಳಿಯ ರಾಸುಗಳು ಆಗಮಿಸಿದ್ದು, ವಿವಿಧೆಡೆಯಿಂದ ಆಗಮಿಸಿರುವ ರೈತರು, ಹಳ್ಳಿಕಾರ್ ತಳಿಯ ರಾಸುಗಳ ಖರೀದಿ ಹಾಗೂ ಮಾರಾಟದಲ್ಲಿ ತೊಡಗಿದ್ದಾರೆ. ಜಾತ್ರೆಯಲ್ಲಿ ೫೦ ಸಾವಿರದಿಂದ ೫ಲಕ್ಷದವರೆಗೆ ರಾಸುಗಳು ಇದ್ದು, ರೈತರು ಹಸುಗಳ ಸುಳಿ, ಕೊಂಬು ಸೇರಿದಂತೆ ವಿವಿಧ ಗುಣಲಕ್ಷಣಗಳನ್ನು ಪರಿಶೀಲಿಸಿ ಬೆಲೆ ನಿಗದಿ ಪಡಿಸುವ ಚಟುವಟಿಕೆ ನಡೆಸಿದರು. ಜಾತ್ರೆಯಲ್ಲಿ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ನೀಡಲು ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆದಿದು ಮಾಹಿತಿ ನೀಡಿದರು. ಬಾಕ್ಸ್..................ಏಕಲವ್ಯನದೇ ಸದ್ದು!
ತುಮಕೂರು ಜಿಲ್ಲೆಯ ತುರುವೇಕೆರೆಯ ಮಾಜಿ ಶಾಸಕ ಮಸಾಲೆ ಜಯರಾಮ್ ಅವರ ಹೋರಿ ಏಕಲವ್ಯನನ್ನು ಈ ಬಾರಿಯ ಕೆಂಗಲ್ ದನಗಳ ಜಾತ್ರೆಯಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಇದರೊಂದಿಗೆ ಏಕಲವ್ಯನಿಂದ ಜನ್ಮ ಪಡೆದ ಹೆಣ್ಣು ಕರು ಪುಣ್ಯ ಕೋಟಿ ಮತ್ತು ಅದರ ಎರಡನೇ ಕರುವನ್ನು ಕಟ್ಟಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.
ಬಾಕ್ಸ್.....................
ಜಾತ್ರೆಯಲ್ಲಿ ಬೆಂಗಳೂರಿನ ಕಂಬಿಪೂರದ ಎಚ್‌ಎಫ್ ಜಾತಿಯ ಹೋರಿ ಸುಲ್ತಾನ ಸಹ ಸಾಕಷ್ಟು ಗಮನ ಸೆಳೆಯುತ್ತಿದೆ. ಸುಮಾರು ೧೫೦೦ ಕೆಜಿಗೂ ಹೆಚ್ಚು ತೂಕವಿರುವ ಈ ಹೋರಿಗೆ ೪ ವರ್ಷ ವಯಸ್ಸಾಗಿದ್ದು ಮಜಭೂತಾಗಿರುವ ಈ ಹೋರಿಯನ್ನು ಬ್ರೀಡಿಂಗ್‌ಗಾಗಿಯೇ ಸಾಕಲಾಗಿದೆ. ಇದರ ವೀರ್ಯಾಣು ಹೆಚ್ಚು ಫಲವತ್ತೆ ಹೋಂದಿದ್ದು, ಇದರ ತಾಯಿ ವರ್ಷಕ್ಕೆ ೧೧,೮೬೨ ಲೀಟರ್ ಹಾಲನ್ನು ನೀಡಿತ್ತು ಎನ್ನಲಾಗಿದೆ.
ಕೆಂಗಲ್ ದನಗಳ ಜಾತ್ರೆಯಲ್ಲಿ ಗಮನಸೆಳೆಯುತ್ತಿರುವ ಏಕಲವ್ಯ ಹೋರಿ. ಪೊಟೋ೧೮ಸಿಪಿಟಿ೨:
ಜಾತ್ರೆಯಲ್ಲಿ ಭಾಗಿಯಾಗಿರುವ ರಾಸುಗಳು.