ಭರತ್‌ ಬೊಮ್ಮಾಯಿಗೆ ಟಿಕೆಟ್‌-ಆಕಾಂಕ್ಷಿಗಳಿಂದ ಸ್ವಾಗತ

KannadaprabhaNewsNetwork |  
Published : Oct 21, 2024, 12:43 AM IST
ಶಿಗ್ಗಾಂವಿ ಪಟ್ಟಣದ ಶಿವಪ್ರಸಾದ ಸುರಗಿಮಠ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮುಖಂಡ ಗಂಗಾಧರ ಸಾತಣ್ಣವರ ಮಾತನಾಡಿದರು. | Kannada Prabha

ಸಾರಾಂಶ

ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿಯಾಗಿ ಭರತ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ ವರಿಷ್ಠರ ನಿರ್ಧಾರವನ್ನು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಸ್ವಾಗತಿಸಿದ್ದಾರೆ.

ಶಿಗ್ಗಾಂವಿ: ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿಯಾಗಿ ಭರತ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ ವರಿಷ್ಠರ ನಿರ್ಧಾರವನ್ನು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಸ್ವಾಗತಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮುಖಂಡ ಗಂಗಾಧರ ಸಾತಣ್ಣವರ, ಭರತ್‌ ಬೊಮ್ಮಾಯಿ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಬಿಜೆಪಿಯಿಂದ 45 ಆಕಾಂಕ್ಷಿಗಳಿದ್ದರು. ಈಗ ಎಲ್ಲರೂ ಭರತ ಬೊಮ್ಮಾಯಿ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಈಗ ಅವರೆಲ್ಲ ಭರತ್ ಬೊಮ್ಮಾಯಿ ಗೆಲುವಿಗೆ ಶ್ರಮಿಸಬೇಕು. ಭರತ್ ಅವರು ಮುತ್ಸದ್ದಿ ನಾಯಕ, ಈಗಾಗಲೇ ಕ್ಷೇತ್ರದಲ್ಲಿ 2 ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ನೀಡಿದ್ದಾರೆ. ಅವರು ಆಯ್ಕೆಯಾದರೆ ಕ್ಷೇತ್ರಕ್ಕೆ ಇನ್ನಷ್ಟು ಕೈಗಾರಿಕೆಗಳು ಬರಲು ಸಾಧ್ಯವಾಗಲಿದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ ಮಾತನಾಡಿ, ಕ್ಷೇತ್ರದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದು ಸಂತಸ ಸಂದಿದೆ. ಪಕ್ಷದ ಎಲ್ಲ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಒಬಿಸಿ ವಿಭಾಗದ ಅಧ್ಯಕ್ಷ ಸುಭಾಸ ಚವ್ಹಾಣ, ಶಶಿಧರ ಹೊಣ್ಣನವರ, ಪರಶುರಾಮ ಸೊನ್ನದ, ಕರೆಪ್ಪ ಕಟ್ಟಿಮನಿ ಮಾತನಾಡಿದರು.

ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ, ಚನ್ನಪ್ಪ ಬಿಂದ್ಲಿ, ಶಂಕರಗೌಡ ಪಾಟೀಲ, ಎಂ.ಎಸ್. ಪಾಟೀಲ, ರೂಪಾ ಬನ್ನಿಕೊಪ್ಪ, ಕೊಟ್ರಪ್ಪ ನಡೂರ, ಸಂಗಪ್ಪ ಕಂಕನವಾಡ, ಆನಂದ ಸುಬೇದಾರ, ರಮೇಶ ವನಹಳ್ಳಿ, ಸುಧೀರ ಮಾಳವಾದೆ ಇದ್ದರು.

ಜಿಪಂ ಮಾಜಿ ಸದಸ್ಯೆ ಡಾ. ಶೋಭಾ ನಿಸ್ಸೀಮಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷದ ಹಲವು ಮುಖಂಡರು, ಶಾಸಕರ ಸಲಹೆ ಮೇರೆಗೆ ಭರತ್ ಬೊಮ್ಮಾಯಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಪಕ್ಷದ ಎಲ್ಲ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಗೆಲುವಿಗೆ ಶ್ರಮಿಸಬೇಕು ಎಂದರು.

ಬಿಜೆಪಿ ಯುವ ಮುಖಂಡ ರೇಣುಕಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌