ನವೋದಯ ವಿದ್ಯಾಲಯಕ್ಕೆ ಆಗಮಿಸಿದ ವಲಸೆ ವಿದ್ಯಾರ್ಥಿಗಳಿಗೆ ಸ್ವಾಗತ

KannadaprabhaNewsNetwork |  
Published : Jul 16, 2026, 02:30 AM IST
೧೪ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಸೀಗೋಡು ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯಕ್ಕೆ ಆಗಮಿಸಿದ ವಲಸೆ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು, ಸಿಬ್ಬಂದಿಗಳು ಸ್ವಾಗತ ಕೋರಿದರು. | Kannada Prabha

ಸಾರಾಂಶ

ಬಾಳೆಹೊನ್ನೂರುರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಂಸ್ಕೃತಿಕ ವಿನಿಮಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಲಸೆ ಪದ್ಧತಿ ಯೋಜನೆಯಡಿ ಮಧ್ಯಪ್ರದೇಶದಿಂದ ಸೀಗೋಡಿನ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯಕ್ಕೆ ಆಗಮಿಸಿದ ವಿದ್ಯಾರ್ಥಿ ಗಳಿಗೆ ಮಂಗಳವಾರ ಸ್ವಾಗತ ಕೋರಲಾಯಿತು.

15 ಬಾಲಕರು, 10 ಬಾಲಕಿಯರು ಸೇರಿ 25 ವಿದ್ಯಾರ್ಥಿಗಳ ಆಗಮನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಂಸ್ಕೃತಿಕ ವಿನಿಮಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಲಸೆ ಪದ್ಧತಿ ಯೋಜನೆಯಡಿ ಮಧ್ಯಪ್ರದೇಶದಿಂದ ಸೀಗೋಡಿನ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯಕ್ಕೆ ಆಗಮಿಸಿದ ವಿದ್ಯಾರ್ಥಿ ಗಳಿಗೆ ಮಂಗಳವಾರ ಸ್ವಾಗತ ಕೋರಲಾಯಿತು. ಮಧ್ಯಪ್ರದೇಶದ ಜವಾಹರ ನವೋದಯ ವಿದ್ಯಾಲಯದಿಂದ ವಲಸೆ ಯೋಜನೆಯಡಿ ಸೀಗೋಡು ವಿದ್ಯಾಲಯಕ್ಕೆ ಒಟ್ಟು 15 ಬಾಲಕರು ಹಾಗೂ 10 ಬಾಲಕಿಯರು ಸೇರಿದಂತೆ ಒಟ್ಟು 25 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಮಂಗಳವಾರ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ವಿದ್ಯಾಲಯದ ಪ್ರಾಚಾರ್ಯ ಅಕ್ಷಯ್ ಕುಮಾರ್ ದ್ವಿವೇದಿ, ಉಪ ಪ್ರಾಚಾರ್ಯ ರಮೇಶ್ ನಾಯಕ್ ಮತ್ತು ಸಿಬ್ಬಂದಿ ವರ್ಗ ಹೊಸದಾಗಿ ಆಗಮಿಸಿದ ಎಲ್ಲ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಪ್ರಾಚಾರ್ಯ ಅಕ್ಷಯ್ ಕುಮಾರ್ ದ್ವಿವೇದಿ ಮಾತನಾಡಿ ನವೋದಯ ವಿದ್ಯಾಲಯಗಳ ಪ್ರಮುಖ ಆಶಯಗಳಲ್ಲಿ ವಲಸೆ ಪದ್ಧತಿಯೂ ಒಂದಾಗಿದೆ. ಇದು ವಿದ್ಯಾರ್ಥಿಗಳಲ್ಲಿ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ, ಭಾಷೆ ಮತ್ತು ಜೀವನ ಶೈಲಿ ಅರಿಯಲು ಹಾಗೂ ಅವರಲ್ಲಿ ಸೌಹಾರ್ದತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿ ಉಪಸ್ಥಿತರಿದ್ದು, ಹೊಸದಾಗಿ ಬಂದ ಸ್ನೇಹಿತರನ್ನು ಸ್ವಾಗತಿಸಿದರು.೧೪ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಸೀಗೋಡು ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯಕ್ಕೆ ಆಗಮಿಸಿದ ವಲಸೆ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು, ಸಿಬ್ಬಂದಿಗಳು ಸ್ವಾಗತ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಿಗೆ ಕುಲಪತಿ ಗದ್ದುಗೆ ಕನಸು!
ಬೆಳೆ ವಿಮೆ ಗೊಂದಲ ಬಗೆಹರಿಸಿ, ಹಾವೇರಿ ಜಿಲ್ಲೆ ಬರಪೀಡಿತವೆಂದು ಘೋಷಿಸಲು ಆಗ್ರಹ