ಆಲಮಟ್ಟಿ ಡ್ಯಾಂನಿಂದ ಲಾಭ ಯಾವಾಗ ? ಆಯುಷ್ಯ ಎಷ್ಟು ?

KannadaprabhaNewsNetwork |  
Published : Jun 16, 2025, 03:47 AM ISTUpdated : Jun 16, 2025, 04:02 AM IST
ವಿಜಯಪುರ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ವಿಜಯಪುರ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

 ಆಲಮಟ್ಟಿ ಜಲಾಶಯ ನಿರ್ಮಾಣದ ಆಯುಷ್ಯ ಎಷ್ಟು ? ಗೊತ್ತಿದೆಯಾ ಅದೊಂದು ಕಾಂಕ್ರಿಟ್ ಡ್ಯಾಮ್. ಅದರಲ್ಲೂ ತಗ್ಗು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ರೈತರು ಅದರ ಲಾಭ ಪಡೆಯುವುದು ಯಾವಾಗ ? ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪ್ರಶ್ನಿಸಿದರು.

  ವಿಜಯಪುರ :  ಆಲಮಟ್ಟಿ ಜಲಾಶಯ ನಿರ್ಮಾಣದ ಆಯುಷ್ಯ ಎಷ್ಟು ? ಗೊತ್ತಿದೆಯಾ ಅದೊಂದು ಕಾಂಕ್ರಿಟ್ ಡ್ಯಾಮ್. ಅದರಲ್ಲೂ ತಗ್ಗು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ರೈತರು ಅದರ ಲಾಭ ಪಡೆಯುವುದು ಯಾವಾಗ ? ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ ಖ್ಯಾತೆ ನೆಪ ಹೇಳಿ, ರಾಜ್ಯ ಕಾಂಗ್ರೆಸ್ ಸರ್ಕಾರ ಆಲಮಟ್ಟಿ ಜಲಾಶಯದಲ್ಲಿ ೫೨೪ ಮೀಟರ್‌ಗೆ ನೀರು ನಿಲ್ಲಿಸುವ ಕೆಲಸವನ್ನು ಇಲ್ಲಿಗೆ ನಿಲ್ಲಿಸಬಾರದು. ನ್ಯಾಯಾಧಿಕರಣದ ತೀರ್ಪಿನಂತೆ ಜಲಾಶಯದಲ್ಲಿ ನೀರು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಆಲಮಟ್ಟಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲಿಸಲು ಪ್ರಾರಂಭಿಸಿದರೆ, ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಆಧಾರ ರಹಿತ ಖ್ಯಾತೆ ತೆಗೆದಿದೆ. ನ್ಯಾಯಾಧೀಕರಣದ ಆದೇಶದಂತೆ ೫೨೪ ಮೀಟರ್‌ಗೆ ನೀರು ನಿಲ್ಲಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಕೃಷ್ಣಾ ನದಿಯಲ್ಲಿ ಮಹಾಪುರ ಬಂದಾಗ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹಿಸಲು ಸಾಧ್ಯವೇ ? ಬೇರೆ ಯಾವುದೇ ಜಲಾಶಯವಿರಲಿ ಮಹಾಪೂರ ಬಂದಂತಹ ಸಂದರ್ಭದಲ್ಲಿ ನೀರು ಸಂಗ್ರಹಿಸುವುದಿಲ್ಲ. ನಂತರ ಮಳೆ ಕಡಿಮೆಯಾಗುತ್ತಿದ್ದಂತೆ ನೀರು ನಿಲ್ಲಿಸಲು ಪ್ರಾರಂಭಿಸಲಾಗುತ್ತದೆ. ಮಹಾರಾಷ್ಟ್ರ ಸರ್ಕಾರಕ್ಕೆ ಅಷ್ಟು ಅರ್ಥವಾಗುವುದಿಲ್ಲವೇ ? ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೃಷ್ಣಾ ಸಂತ್ರಸ್ತರ ನೋವು ಅರ್ಥವಾಗುವುದು ಯಾವಾಗ? ಚುನಾವಣೆಯಲ್ಲಿ ನಾವು ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ಹಣ ನೀಡುತ್ತೇವೆ ಎಂದು ಹೇಳಿ ಈಗ ಮಾತು ಮರೆತು ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ಕಳೆದುಕೊಂಡ ಸಂತ್ರಸ್ತರು ಬೀದಿಪಾಲಾಗಿ ಮನೆ-ಮಠ ಮಾರಿಕೊಂಡು ಬಯಲಲ್ಲಿ ನಿಂತಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನಸಿಂಗ್ ಸರ್ಕಾರ ರೈತರ ಭೂಮಿಗೆ ನಾಲ್ಕು ಪಟ್ಟು ಪರಿಹಾರ ನೀಡುವುದಾಗಿ ಕಾಯ್ದೆ ಜಾರಿಗೊಳಿಸಿತು. ಇದು ನಿಜಕ್ಕೂ ಅನ್ಯಾಯದಿಂದ ಕೂಡಿದೆ. ಭೂಮಿ ಬೆಲೆಗಳು ಹಳ್ಳಿಯಿಂದ ಹಳ್ಳಿಗೆ ಬೇರೆ-ಬೇರೆ ರೀತಿಯಾಗಿದ್ದು, ಪರಿಹಾರವೂ ಸಾಕಷ್ಟು ವ್ಯತ್ಯಾಸದಿಂದ ಕೂಡಿದೆ. ಆಗಿನ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪನ್ನು ಇಂದು ಕೃಷ್ಣಾ ಸಂತ್ರಸ್ತರು ಅನುಭವಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸರ್ಕಾರಕ್ಕೆ ₹ ೧ ಲಕ್ಷ ಕೋಟಿ ಹಣ ಬೇಕು. ಗ್ಯಾರಂಟಿಯಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬೊಕ್ಕಸ ಬರಿದಾಗಿದೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಇನ್ನೂ ವಿಳಂಭ ಮಾಡುವುದನ್ನು ರೈತರು ಸಹಿಸುವುದಿಲ್ಲ. ದಿ.ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆಗೆ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಿದ್ದರು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಬಾಂಡ್‌ಗಳನ್ನು ಮಾರಾಟ ಮಾಡಿ ಯೋಜನೆ ಪೂರ್ಣಗೊಳಿಸಲಿ ಎಂದು ಒತ್ತಾಯಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜ್ಯೋಶಿ ಸೇರಿದಂತೆ ಮುಂತಾದವರು ಇದ್ದರು 

ಕೋಟ್‌ಕೃಷ್ಣಾನದಿಯಲ್ಲಿ ಮಹಾಪುರ ಬಂದಾಗ ಆಲಮಟ್ಟಿಯಲ್ಲಿ ನೀರು ಸಂಗ್ರಹಿಸಲು ಸಾಧ್ಯವೇ ? ಯಾವುದೇ ಜಲಾಶಯದಲ್ಲಿಯೂ ಮಹಾಪೂರದ ಸಂದರ್ಭದಲ್ಲಿ ನೀರು ಸಂಗ್ರಹಿಸುವುದಿಲ್ಲ. ಮಳೆ ಕಡಿಮೆಯಾಗುತ್ತಿದ್ದಂತೆ ನೀರು ನಿಲ್ಲಿಸಲು ಪ್ರಾರಂಭಿಸಲಾಗುತ್ತದೆ. ಮಹಾರಾಷ್ಟ್ರ ಸರ್ಕಾರಕ್ಕೆ ಅಷ್ಟು ಅರ್ಥವಾಗುವುದಿಲ್ಲವೇ ? ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೃಷ್ಣಾ ಸಂತ್ರಸ್ತರ ನೋವು ಅರ್ಥವಾಗುವುದು ಯಾವಾಗ? ಚುನಾವಣೆಯಲ್ಲಿ ನಾವು ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ಹಣ ನೀಡುತ್ತೇವೆ ಎಂದು ಹೇಳಿ ಈಗ ಮಾತು ಮರೆತು ಬಿಟ್ಟಿದೆ.ಎಸ್‌.ಕೆ.ಬೆಳ್ಳುಬ್ಬಿ, ಮಾಜಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ
ಚಿಕ್ಕಮಗಳೂರು ಗಿರಿಧಾಮಗಳಲ್ಲಿ ಪ್ರವಾಸಿಗರ ಕಾರುಬಾರು