ಯಲಬುರ್ಗಾ: ತಾಲೂಕಿನ ಶಿರಗುಂಪಿ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಜೀವ ಅಂಗೈಯಲ್ಲಿ ಎಂಬಂತಾಗಿದೆ. ಅಂಗನವಾಡಿ ಒಳಗೆ ಹೋದರೆ ಸಾಕು ಬಿರುಕುಬಿಟ್ಟ ಗೋಡೆಗಳು, ನೆಲದಂಚಿನಲ್ಲಿ ನೋಡಿದರೆ ಹೆಗ್ಗಣಗಳು ನೆಲ ಅಗೆದ ತಗ್ಗುಗಳು, ಇದರ ಮಧ್ಯೆ 49 ಕಂದಮ್ಮಗಳು ಕುಳಿಕೊಳ್ಳುವ ದುಸ್ಥಿತಿ.
ಅಂಗನವಾಡಿಯಲ್ಲಿ ಬರುವ ಆಹಾರ ಸಾಮಗ್ರಿಗಳನ್ನು ಸರಿಯಾಗಿ ಇಡಲು ಸ್ಥಳಾವಕಾಶ ಇಲ್ಲ. ಅಲ್ಲದೆ, ಕೇಂದ್ರದ ನೆಲವನ್ನು ಹೆಗ್ಗಣಗಳು ಅಗೆದಿವೆ. ಕೇಂದ್ರಕ್ಕೆ ಬಂದ ಕೂಡಲೇ ಅಂಗನವಾಡಿ ಶಿಕ್ಷಕರು, ಕಾರ್ಯಕರ್ತೆಯರು ಆ ಮಣ್ಣನ್ನು ತೆಗೆಯುವ ಕೆಲಸ ಮಾಡಬೇಕು. ಇದಕ್ಕೂ ತೀವ್ರ ಸಮಸ್ಯೆ ಎಂಬಂತೆ ಮಕ್ಕಳಿಗಾಗಿ ನೀಡಲು ತಂದಿರುವ ಆಹಾರ ಸಾಮಗ್ರಿಯಲ್ಲಿ ಹೆಗ್ಗಣಗಳ ಓಡಾಟವಾದರೆ, ಅವರ ಆರೋಗ್ಯ ಸಮಸ್ಯೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ಸಹ ಆಗಿದೆ.
ಅಂಗನವಾಡಿ ಕೇಂದ್ರದ ಗೋಡೆಗಳು ಬಿರುಕು ಬಿಟ್ಟಿದ್ದು, ಮಕ್ಕಳ ಮೇಲೆ ಬಿದ್ದರೆ ಅವರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸಿಡಿಪಿಒ ಇಲಾಖೆ ನೂತನ ಅಂಗನವಾಡಿ ಕೇಂದ್ರದತ್ತ ಯಾಕೆ ಚಿತ್ತ ಹರಿಸುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.ಅಂಗನವಾಡಿ ಕೇಂದ್ರಕ್ಕೆಂದು ನೂತನ ಕಟ್ಟಡ ನಿರ್ಮಾಣ ಆಗಿದೆ. ಆದರೂ ಇನ್ನೂ ಉದ್ಘಾಟನೆ ಆಗುತ್ತಿಲ್ಲ. ಹಳೆಯ ಕೇಂದ್ರದಲ್ಲಿ ಜೀವ ಭಯದಲ್ಲಿ ಮಕ್ಕಳು ದಿನ ಕಳೆಯುವ ಸ್ಥಿತಿ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ನೂತನ ಅಂಗನವಾಡಿಯಲ್ಲಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಶಿರಗುಂಪಿ ಅಂಗನವಾಡಿ ಕೇಂದ್ರದ ಕೆಲಸ ಪೂರ್ಣ ಆಗದ ಕಾರಣ ಉದ್ಘಾಟನೆ ಮಾಡಿರಲಿಲ್ಲ. ಶೀಘ್ರ ಕೆಲಸ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು ಎಂದು ಯಲಬುರ್ಗಾ ಸಿಡಿಪಿಒ ಹಾಗೂ ಕುಕನೂರು ತಾಪಂ ಇಒ