ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಆಲಂಬೂರು ಏತ ನೀರಾವರಿ ಯೋಜನೆಯಡಿ ತಾಲೂಕಿನ ಹುತ್ತೂರು ಕೆರೆ ತುಂಬಿದ್ದು ಹುತ್ತೂರು ಕೆರೆಯಿಂದ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಪ್ರಯತ್ನ ಆಗಿಲ್ಲ!. ತಾಲೂಕಿನ ವಡ್ಡಗೆರೆ ಕೆರೆ ಕಳೆದ ಬಾರಿ ತುಂಬಿ ಕೋಡಿ ಬಿದ್ದಿತ್ತು. ಈ ಬಾರಿ ಮಳೆ ಬೀಳದ ಕಾರಣ ತುಂಬಿದ ವಡ್ಡಗೆರೆ ಕೆರೆ ನೀರಿಲ್ಲದೆ ಬರಡಾಗಿ ಹೋಗಿದ್ದು ಅಂತರ್ಜಲ ಮಟ್ಟ ಕುಸಿದಿದೆ. ಇಂತ ಸಮಯದಲ್ಲಿ ತುಂಬಿದ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರನ್ನು ಲಿಫ್ಟ್ ಮಾಡಿದರೆ ನೀರಿಲ್ಲದೆ ಬರಡಾದ ಕೆರೆಗೆ ನೀರು ಬರುತ್ತಿತ್ತು ಎಂದು ವಡ್ಡಗೆರೆ ಗ್ರಾಮದ ರೈತರ ಮಾತಾಗಿದೆ. ಆದರೆ ತುಂಬಿದ ಹುತ್ತೂರು ಕೆರೆಯಿಂದ ಚಾಮರಾಜನಗರ ತಾಲೂಕಿನ ಕಿಲಗೆರೆ ಕೆರೆಗೆ ನೀರು ತುಂಬಿಸಲಾಗುತ್ತಿದ್ದು, ಕಿಲಗೆರೆ ಕೆರೆ ತುಂಬಿದ ಬಳಿಕ ಮೇಲೂರು ಕೆರೆಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಹುತ್ತೂರು ಕೆರೆಯಿಂದ ಕಿಲಗೆರೆ ಕೆರೆ ತುಂಬಿದ ವಡ್ಡಗೆರೆ ಕೆರೆಗೆ ನೀರು ತುಂಬಿಸಬೇಕು ಎಂಬುದು ವಡ್ಡಗೆರೆ ಗ್ರಾಮಸ್ಥರು ಹಾಗೂ ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.
ಒಂದು ಹನಿ ನೀರಿಲ್ಲ!: ತಾಲೂಕಿನ ವಡ್ಡಗೆರೆ ಕೆರೆಯಲ್ಲಿ ಒಂದನಿ ನೀರಿಲ್ಲದ ಕಾರಣ ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಕ್ಷೇತ್ರದ ಶಾಸಕರು ವಡ್ಡಗೆರೆಗೆ ನೀರು ತುಂಬಿಸಲು ಸೂಚಿಸಲಿ ಎಂದು ಗ್ರಾಮಸ್ಥರ ಒತ್ತಾಯ.ಪ್ರಯತ್ನ ಪಡುವೆ: ಕಾವೇರಿ ನೀರಾವರಿ ನಿಗಮದ ಇಇ ಪಾಟೀಲ್ ಕನ್ನಡಪ್ರಭದೊಂದಿಗೆ ಮಾತನಾಡಿ, ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇಲ್ಲ.ಹೆಚ್ಚುವರಿ ಮೋಟರ್ ಹಾಕಲು ಆಗುತ್ತಿಲ್ಲ. ಜೊತೆಗೆ ವಿದ್ಯುತ್ ಸಮಸ್ಯೆ ಕೂಡ ಇದೆ. ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಸಂಬಂಧ ಕ್ಷೇತ್ರದ ಶಾಸಕರು ಹೇಳಿದ್ದಾರೆ ಆದರೀಗ ಹುತ್ತೂರು ಕೆರೆಯಿಂದ ಪಂಪ್ ಮಾಡಿ ನೀರು ಹರಿಸಬೇಕಿದೆ.ನದಿಯಲ್ಲಿ ನೀರಿನ ಪ್ರಮಾಣ ನೋಡಿಕೊಂಡು ವಡ್ಡಗೆರೆ ಕೆರೆಗೆ ನೀರು ತುಂಬಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು.ಕಳೆದ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಕಾಲದಲ್ಲಿ ಹುತ್ತೂರು ಕೆರೆಯಿಂದ ಒಂದು ವರ್ಷ ಚಾ.ನಗರ ತಾಲೂಕಿನ ಕೆರೆಗಳಿಗೆ,ಮತ್ತೊಂದು ವರ್ಷ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಎಂದು ನಿರ್ಣಯವಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ವಡ್ಡಗೆರೆ ಕೆರೆಗೆ ನೀರು ಹರಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ.-ಎಚ್.ಎಂ. ಗಣೇಶ್ ಪ್ರಸಾದ್ ಶಾಸಕರು ಗುಂಡ್ಲುಪೇಟೆಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ತುಂಬಿಸಿದರೆ ಅನುಕೂಲವಾಗಲಿದೆ. ಚಾಮರಾಜನಗರ ತಾಲೂಕಿನ ಕಿಲಗೆರೆ ಕೆರೆಗೆ ೨ ಬಾರಿ ನೀರು ತುಂಬಿಸಿದ್ದಾರೆ. ವಡ್ಡಗೆರೆ ಕೆರೆಗೂ ನೀರು ತುಂಬಿಸಬೇಕು ಇಲ್ಲದಿದ್ದಲ್ಲಿ ಶೀಘ್ರದಲ್ಲೇ ರೈತಸಂಘ ಪ್ರತಿಭಟನೆ ನಡೆಸಬೇಕಾಗುತ್ತದೆ.ಶಾಸಕರು ಮಧ್ಯ ಪ್ರವೇಶಿಸಿ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸಲಿ.