ನಂಬಿಕೆ ಇರುವಲ್ಲಿ ದೇವರು ಇರುತ್ತಾನೆ: ಹಿರೇಕಲ್ಮಠ ಶ್ರೀ

KannadaprabhaNewsNetwork |  
Published : Feb 24, 2025, 12:32 AM IST
.ಹೊನ್ನಾಳಿ ಫೋಟೋ 23ಎಚ್.ಎಲ್.ಐ2. ಬಂದೇ ಶಾವಲಿ ದರ್ಗಾ ಮತ್ತು ಸೈದುಲ್ಲಾ ಶಾ ಖಾದ್ರಿ ದರ್ಗಾದ ಸಂದಲ್ ಉರುಸ್ ಅಂಗವಾಗಿ ನ್ಯಾಮತಿಯಲ್ಲಿ  ನಡೆದ ಧರ್ಮಸಭೆಯಲ್ಲಿ ಹಿರೇಕಲ್ಮಠ ಡಾ.  ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿಯವರನ್ನು ಜಾಮೀಯ ಮಸೀದಿ ಮತ್ತು ಮುಸ್ಲಿಂ ಸಮುದಾಯದವರು ಗೌರವಿಸಿದರು. | Kannada Prabha

ಸಾರಾಂಶ

ಭಗವಂತನ ಮುಂದೆ ಯಾವುದೇ ಧರ್ಮದವರೇ ಆದರೂ ಸಮಾನರು. ಭಗವಂತ ಕೊಟ್ಟಿರುವ ಪ್ರಕೃತಿ ಸಂಪತ್ತು ಅವನದು, ಎಲ್ಲರನ್ನೂ ರಕ್ಷಿಸುವ ಉದಾರ ಗುಣ ಭಗವಂತನದು ಎಂದು ಹಿರೇಕಲ್ಮಠ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ನ್ಯಾಮತಿ ಬಂದೇ ಶಾವಲಿ ದರ್ಗಾ- ಸೈದುಲ್ಲಾ ಶಾ ಖಾದ್ರಿ ದರ್ಗಾದಲ್ಲಿ ಸಂದಲ್ ಉರುಸ್ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭಗವಂತನ ಮುಂದೆ ಯಾವುದೇ ಧರ್ಮದವರೇ ಆದರೂ ಸಮಾನರು. ಭಗವಂತ ಕೊಟ್ಟಿರುವ ಪ್ರಕೃತಿ ಸಂಪತ್ತು ಅವನದು, ಎಲ್ಲರನ್ನೂ ರಕ್ಷಿಸುವ ಉದಾರ ಗುಣ ಭಗವಂತನದು ಎಂದು ಹಿರೇಕಲ್ಮಠ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನ್ಯಾಮತಿ ಪಟ್ಟಣದಲ್ಲಿ ಬಂದೇ ಶಾವಲಿ ದರ್ಗಾ ಮತ್ತು ಸೈದುಲ್ಲಾ ಶಾ ಖಾದ್ರಿ ದರ್ಗಾದ ಸಂದಲ್ ಉರುಸ್ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಉರುಸ್ ಅಂದರೆ ಮಹಾತ್ಮರನ್ನು ಸ್ಮರಿಸಿಕೊಳ್ಳುವುದು. ಗುರು-ಹಿರಿಯರನ್ನು ಆರಾಧಿಸುವ ಸಂಸ್ಕೃತಿ ನಮ್ಮದು. ಮುಸ್ಲಿಂ ಸಮುದಾಯದವರು ವಿಶೇಷವಾಗಿ ಯಾವುದೇ ಹಿಂದಿನ ಧಾರ್ಮಿಕ ಆಚರಣೆಗಳನ್ನು ಕಠಿಣವಾಗಿ ಶ್ರದ್ಧೆಯಿಂದ ಆಚರಿಸುತ್ತಾರೆ. ಪ್ರತಿಯೊಬ್ಬರಿಗೂ ನಂಬಿಕೆ ಅನ್ನುವುದು ಬಹಳ ಮುಖ್ಯ. ನಂಬಿಕೆ- ವಿಶ್ವಾಸ ಇರುವಲ್ಲಿ ದೇವರು ಇರುತ್ತಾನೆ. ನಾವು ಭಗವಂತನನ್ನು ಬೇಡಬೇಕು, ಎಲ್ಲವನ್ನು ಕೊಡುತ್ತಾನೆ ಎಂದರು.

ಉರುಸ್ ಕಾರ್ಯಕ್ರಮಕ್ಕೆ ಹಿರೇಕಲ್ಮಠ ಶ್ರೀಗಳ ಕರೆಸಿರುವುದು ಸಂತೋಷದ ವಿಷಯ. ಚನ್ನಪ್ಪಸ್ವಾಮಿ ಅವರ ಕಾಲದಿಂದಲೂ ಹಿರೇಕಲ್ಮಠ ಮತ್ತು ಹೊನ್ನಾಳಿ ನವಾಬರಿಗೂ ಅವಿನಾಭಾವ ಸಂಬಂಧವಿದೆ. ಮುಸ್ಲಿಂ ಸಮುದಾಯದವರಿಗೂ ಚನ್ನಪ್ಪಸ್ವಾಮಿ ಮಠಕ್ಕೂ ಬಹಳ ಸಂಬಂಧವಿದೆ. ದೇಶದ ಐಕ್ಯತೆಗೆ, ಒಗ್ಗಟ್ಟಿಗೆ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಶ್ರಮಿಸೋಣ, ಹಿಂದೂ ಮುಸ್ಲಿಂ ಬಾಂಧವರ ಸಂಬಂಧ ಉತ್ತಮವಾಗಿರಬೇಕು. ಈ ಕಾರ್ಯಕ್ರಮ ಅವಳಿ ತಾಲೂಕುಗಳಲ್ಲಿ ಹಿಂದೂ- ಮುಸ್ಲಿಂ ಸಹಬಾಳ್ವೆಗೆ ಮುನ್ನುಡಿ ಹಾಡಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಮಾತನಾಡಿ, ಸಂತ ಬಂದೇ ಶಾವಲಿ ಅವರು ಕುರುಡರಾಗಿದ್ದು, ಹಸು ಮತ್ತು ಗಿಣಿ ಸಾಕಿದ್ದರು. ಕಷ್ಟ ಹೇಳಿಕೊಂಡು ಬಂದವರಿಗೆ ಪರಿಹಾರ ತೋರಿಸುವ ಮಹಾತ್ಮರಾಗಿದ್ದರು. ಅಂತಹವರ ಪುಣ್ಯಸ್ಮರಣೆ ಮಾಡುತ್ತಿರುವುದು ಹಿಂದೂ ಮುಸ್ಲಿಂ ಬಾಂಧವರ ಪುಣ್ಯ. ಪಟ್ಟಣದಲ್ಲಿ ಹಿಂದೂ ಮುಸ್ಲಿಮರು ಅನ್ಯೂನತೆಯಿಂದ ಇರುವುದು ಇದಕ್ಕೆ ಸಾಕ್ಷಿ ಎಂದರು.

ಮುಸ್ಲಿಂ ಧರ್ಮಗುರುಗಳಾದ ಮಹಮ್ಮದ್ ಅಸ್ಲಾಂ ಪಾಷ, ಹಜರತ್ ನಸೀಂವುಲ್ಲಾ, ಜಾಮೀಯ ಮಸೀದಿ ಅಧ್ಯಕ್ಷ ಜಭೀವುಲ್ಲಾ, ಉಪಾಧ್ಯಕ್ಷ ಮಹಮ್ಮದ್ ರಫಿಕ್, ಹಿರಿಯರಾದ ಮಂಡಕ್ಕಿ ಬಾಬು, , ಸೈಯದ್ ಅಪ್ಸರ್ ಪಾಷ, ನ್ಯಾಮತಿ ನಾಗರಾಜ, ಎಂ.ಎಸ್.ಜಗದೀಶ, ಬಿ.ಜಿ.ಚೈತ್ರಾ, ರಹಮತ್‌ವುಲ್ಲಾ, ಎನ್.ಎಸ್.ಶಬ್ಬಿರ್ ಇದ್ದರು.

ಇದಕ್ಕೊ ಮೊದಲು ಪ್ರಮುಖ ಬೀದಿಗಳಲ್ಲಿ ಸಂದಲ್ ಉರುಸ್ ಮೆರವಣಿಗೆ ನಡೆಯಿತು. ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಜಾಮೀಯ ಮಸೀದಿ ವಕ್ಫ್ ಬೋರ್ಡ್ ಕಮಿಟಿಯವರು ವಹಿಸಿದ್ದರು.

- - - -23ಎಚ್.ಎಲ್.ಐ2.ಜೆಪಿಜಿ:

ಧರ್ಮಸಭೆಯಲ್ಲಿ ಹಿರೇಕಲ್ಮಠ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳನ್ನು ಜಾಮೀಯ ಮಸೀದಿ ಮತ್ತು ಮುಸ್ಲಿಂ ಸಮುದಾಯದಿಂದ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ