ಈ ಬಾರಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ: ವಿಶ್ವಾಸ
ಕನ್ನಡಪ್ರಭ ವಾರ್ತೆ, ಬೀರೂರು.ಪಟ್ಟಣದ ಪುರಸಭೆ ಅಧ್ಯಕ್ಷರಾಗಿದ್ದ ವನಿತಾ ಮಧುಬಾವಿಮನೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆಯೆಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.ಸುದ್ದಿಗೋಷ್ಠಿ ನಡೆಸಿದ ಅವರು, ಪುರಸಭೆಯಲ್ಲಿ ಪಟ್ಟಣದ 9 ಜನ ಕಾಂಗ್ರೆಸ್ ಸದಸ್ಯರಿದ್ದು, ಎರಡನೇ ಅವಧಿಗೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸೇರಿ ವನಿತಾಮಧು ಬಾವಿಮನೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಪಕ್ಷದ ಆತಂರಿಕ ಒಡಂಬಡಿಕೆಗೆ ಮಣಿದು ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಈ ಬಾರಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಬಿಜೆಪಿ ಪುರಸಭೆ ಗದ್ದುಗೆ ಹಿಡಿಯಲು ನಮ್ಮ ನಾಲ್ವರು ಸದಸ್ಯರನ್ನು ಹೈಜಾಕ್ ಮಾಡಿ, ನಮ್ಮ ಸಂಪರ್ಕಕ್ಕೆ ಸಿಗದಂತೆ ಮಾಡಿ ದ್ದಾರೆ. ಅವರೆಲ್ಲ ನಮ್ಮ ನಿಷ್ಠಾವಂತ ಕಾಂಗ್ರೆಸ್ ಸದಸ್ಯರು. ಜು16ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಸೂಚಿಸಿದ ಅಭ್ಯರ್ಥಿಗೆ ಮತ ಹಾಕದಿದ್ದರೆ ಅಂತಹ ಸದಸ್ಯರ ವಿರುದ್ಧ ಪಕ್ಷ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದರಲ್ಲಿ ಸಂದೇಹವಿಲ್ಲ, ಇಂತಹುದರಲ್ಲಿ ಕಾಂಗ್ರೆಸ್ ಸದಸ್ಯರಾದ ರೋಹಿಣಿ ವಿನಾಯಕ್, ಜ್ಯೋತಿ ವೆಂಕಟೇಶ್, ಸಮಿಉಲ್ಲಾ, ನಂದಿನಿರುದ್ರೇಶ್ ಬಗೆಗಿನ ನಡಾವಳಿಗಳ ಬಗ್ಗೆ ಪಕ್ಷ ಕಣ್ಣಿಟ್ಟಿದ್ದು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಂದಿನ ಚುನಾವಣೆಗೆ ಶಾಸಕರು ಮತ್ತು ಸಂಸದರು ಸಹ ಆಗಮಿಸಲಿದ್ದಾರೆ ಎಂದರು . ಸದಸ್ಯತ್ವ ರದ್ದುಗೊಳ್ಳುವ ಸಾಧ್ಯತೆ:ಇಂದು ನಡೆಯಲಿರುವ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷದ ಸದಸ್ಯರು ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿರುತ್ತಾರೆ. ಬಳಿಕ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ವಿಪ್ ಜಾರಿಗೊಂಡಿರುವ ಕಾಂಗ್ರೆಸ್ ಸದಸ್ಯರು ವಿಪ್ ಉಲ್ಲಂಗಿಸಿದರೆ, ಕಾಂಗ್ರೆಸ್ ಪಕ್ಷ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ಸದಸ್ಯತ್ವ ರದ್ದುಗೊಳ್ಳುವ ಸಾಧ್ಯತೆ ಹೆಚ್ಚಿದ್ದು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಪುರಸಭಾ ಸದಸ್ಯರ ಸದಸ್ಯತ್ವ ರದ್ದುಗೊಂಡರೆ ಇತಿಹಾಸ ಸೃಷ್ಟಿಯ ಸಾಧ್ಯತೆಯೂ ಇದೆ.ಈ ಸಂದರ್ಭದಲ್ಲಿ ಪುರಸಭ ಸದಸ್ಯ ಬಿ.ಕೆ.ಶಶಿಧರ್, ನಾಮಿನಿ ಸದಸ್ಯ ಬಿ.ಎನ್.ಮಲ್ಲಿಕಾರ್ಜುನ್, ಆಶ್ರಯ ಕಮಿಟಿ ಸದಸ್ಯರಾದ ಬಿ.ಟಿ.ಚಂದ್ರಶೇಖರ್, ಮುಬಾರಕ್, ಆರೀಪ್, ಕಾಂಗ್ರೆಸ್ ಯುವ ಮುಖಂಡ ಅದ್ದೂರಿ ಪ್ರಭು, ಶಿವಣ್ಣ, ಜಯಣ್ಣ ಸೇರಿದಂತೆ ಮತ್ತಿತರಿದ್ದರು.15 ಬೀರೂರು 1ಬೀರೂರು ಪುರಸಭಾ ಅಧ್ಯಕ್ಷರ ಚುನಾವಣೆ ಬುಧವಾರ ನಡೆಯಲಿದ್ದು, ಕಾಂಗ್ರೆಸ್ ಪುರಸಭಾ ಸದಸ್ಯೆಯಾದ ರೋಹಿಣಿ ವಿನಾಯಕ್ ನಿವಾಸಕ್ಕೆ ಬೀರೂರು ಬ್ಲಾಕ್ ಅಧ್ಯಕ್ಷ ಆಸಂದಿ ಕಲ್ಲೇಶ್ ಮಂಗಳವಾರ ಮದ್ಯಾಹ್ನ ವಿಪ್ ಜಾರಿ ನೋಟೀಸ್ ಅಂಟಿಸಿದರು.