ರಾಮನಗರ: ಸುಗ್ಗನಹಳ್ಳಿ ಗ್ರಾಮ ಪಂಚಾಯತಿಗೆ ತಂಬಾಕು ಮುಕ್ತ ಪಂಚಾಯತಿ ಎಂದು ಡಬ್ಲ್ಯೂ ಎಚ್‌ಒ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಪಂಚಾಯತಿ ಅಧ್ಯಕ್ಷೆ ಅರ್ಪಿತಾ ಹರೀಶ್ ಕುಮಾರ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ರಾಜ್ಯ ಸರ್ಕಾರದ ವತಿಯಿಂದ ತಂಬಾಕು ಮುಕ್ತ ಪಂಚಾಯತಿ ಎಂಬ ಕೇಂದ್ರ ಪ್ರಶಸ್ತಿಗೆ ಘೋಷಣೆಯಾಗಿರುವ ಕುರಿತು ಮಾಹಿತಿ ನೀಡಿದ ಅವರು, 2009ರಿಂದ ಸತತವಾಗಿ ರಾಜ್ಯ ಸರ್ಕಾರದ ಮಾರ್ಗದರ್ಶನದೊಂದಿಗೆ ಸುಗ್ಗನಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ನಿಷೇಧ ಪಂಚಾಯತಿಯನ್ನಾಗಿ ಮಾಡಬೇಕೆನ್ನುವ ಮನವಿಗೆ ಪಂಚಾಯತಿ ವ್ಯಾಪ್ತಿಯ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ಇದರ ಪ್ರತಿಫಲವಾಗಿ ರಾಷ್ಟ್ರಮಟ್ಟದಲ್ಲಿ ನಮ್ಮ ಪಂಚಾಯತಿಗೆ ತಂಬಾಕು ಮುಕ್ತ ಪಂಚಾಯತಿ ಎಂಬ ಪ್ರಶಸ್ತಿಗೆ ಭಾಜನವಾಗಿದೆ ಎಂದರು.ಈ ಪ್ರಶಸ್ತಿ ಬರಲು ಸಹಕರಿಸಿದ ಪೊಲೀಸ್ ಇಲಾಖೆ, ಸುಗ್ಗನಹಳ್ಳಿ ಪಂಚಾಯತಿ ಸಿಬ್ಬಂದಿವರ್ಗ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರ ನಿರಂತರ ಶ್ರಮದಿಂದ ಸಾಧ್ಯವಾಗಿದೆ. ದೆಹಲಿಯಲ್ಲಿ ಕೇಂದ್ರ ಸಚಿವರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಗ್ಗನಹಳ್ಳಿ ಗ್ರಾಪಂ ಇಡೀ ದೇಶದಲ್ಲಿಯೇ ಪ್ರಥಮವಾಗಿ ತಂಬಾಕು ಮುಕ್ತ ಪಂಚಾಯತಿ ಪ್ರಶಸ್ತಿ ಘೋಷಣೆ ಮಾಡಲಿದ್ದಾರೆ. ಪಂಚಾಯತಿಗೆ ಈ ಪ್ರಶಸ್ತಿ ಲಭ್ಯವಾಗಿರುವ ಸಂದರ್ಭದಲ್ಲಿ ನಾನು ಅಧ್ಯಕ್ಷೆಯಾಗಿರುವುದು ಸಂತೋಷ ತಂದಿದೆ ಎಂದರು.
2024ರಿಂದ ರಾಮನಗರ ಸಿಲ್ಕ್ ಸಿಟಿ ಸಂಸ್ಥೆಯವರು ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ. ಅವರಿಗೆ ಪಂಚಾಯತಿ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತೇನೆ. ಕಳೆದ ಆರು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಇಡೀ ದೇಶದಲ್ಲಿಯೇ ರಾಜ್ಯದಲ್ಲಿ ಸುಗ್ಗನಹಳ್ಳಿ ಪಂಚಾಯತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಪ್ರಯತ್ನ ಪಟ್ಟರೆ ಯಶಸ್ಸು ಸಾಧ್ಯ ಎಂಬುದಕ್ಕೆ ನಮ್ಮ ಪಂಚಾಯತಿಗೆ ಬಂದಿರುವ ಪ್ರಶಸ್ತಿಯೇ ಉದಾಹರಣೆಯಾಗಿದೆ ಎಂದು ಅರ್ಪಿತಾ ಹೇಳಿದರು.ಗ್ರಾಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ್, ರೋಟರಿ ಸಿಲ್ಕ್ ರಾಮನಗರ ಅಧ್ಯಕ್ಷ ವೆಂಕಟೇಶ್, ಪರಮೇಶ್, ಜಿಲ್ಲಾ ತಂಬಾಕು ಮುಕ್ತ ಆರೋಗ್ಯಾಧಿಕಾರಿ ಚಂದ್ರಶೇಖರ್, ಸದಸ್ಯರಾದ ಕೃಷ್ಣಪ್ಪ, ಗುರುಲಿಂಗಯ್ಯ, ಪ್ರಾಂಶುಪಾಲ ಪ್ರದೀಪ್, ಗ್ರಂಥ ಪಾಲಕಿ ಶಿಲ್ಪಾ, ಗ್ರಾಮಸ್ಥರಾದ ಮಹೇಶ್, ಗಣೇಶ್ ಹಾಜರಿದ್ದರು.
4ಕೆಆರ್ ಎಂಎನ್ 4.ಜೆಪಿಜಿಸುಗ್ಗನಹಳ್ಳಿ ಗ್ರಾಪಂ ತಂಬಾಕು ಮುಕ್ತ ಪಂಚಾಯತಿ ಎಂದು ಡಬ್ಲ್ಯೂ ಎಚ್‌ಒ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷೆ ಅರ್ಪಿತಾ, ಪಿಡಿಒ ಸುರೇಶ್ ಮತ್ತಿತರರನ್ನು ಅಭಿನಂದಿಸಲಾಯಿತು.