ಕೃಷ್ಣ ಎನ್. ಲಮಾಣಿ
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನ. 8ರಂದು ನಡೆಯಲಿದ್ದು, ಈ ಬಾರಿ ಯಾರಿಗೆ ಅಧ್ಯಕ್ಷ ಪಟ್ಟ ದೊರೆಯಲಿದೆ ಎಂಬುದು ಭಾರೀ ಕುತೂಹಲಕ್ಕೆಡೆ ಮಾಡಿದೆ.
ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರು ಅಧ್ಯಕ್ಷ ಗಾದಿಯ ಕಣದಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ 15 ದಿನಗಳ ಹಿಂದಿನಿಂದಲೇ ಬ್ಯಾಂಕ್‌ನ ನಿರ್ದೇಶಕರ ಸಂಪರ್ಕದಲ್ಲಿರುವ ಅವರು, ಈ ಪದವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಸಹಕಾರ ಧುರೀಣ ಸಿರುಗುಪ್ಪದ ಚೊಕ್ಕಬಸವನಗೌಡರು ಕೂಡ ಈ ಬಾರಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ಈ ಚುನಾವಣೆ ಈಗ ಕುತೂಹಲಕ್ಕೆಡೆ ಮಾಡಿದೆ.ಈ ಮಧ್ಯೆ ಕೂಡ್ಲಿಗಿಯ ಕೆ. ತಿಪ್ಪೇಸ್ವಾಮಿ ಮತ್ತು ಹೂವಿನಹಡಗಲಿಯ ಐಗೋಳ್ ಚಿದಾನಂದ್ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೆ. ತಿಪ್ಪೇಸ್ವಾಮಿ ಮತ್ತು ಹಿರಿಯ ನಿರ್ದೇಶಕ ಐಗೋಳ್ ಚಿದಾನಂದ್ ಕೂಡ ರೇಸ್‌ನಲ್ಲಿದ್ದಾರೆ. ಇವರಿಬ್ಬರು ಕೂಡ ತಮ್ಮದೇ ಆದ ಲೆಕ್ಕಾಚಾರದೊಂದಿಗೆ ಲಾಬಿ ನಡೆಸುತ್ತಿದ್ದಾರೆ. ಬಿಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೇ ಅಧ್ಯಕ್ಷ ಗಾದಿ ಅಲಂಕರಿಸಿದರೆ, ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಯಲ್ಲಿ ಪಕ್ಷದ ವರ್ಚಸ್ಸು ಹೆಚ್ಚಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ. ಹಾಗಾಗಿ ಈ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುವವರಿಗೆ ಬೆಂಬಲ ನೀಡಲು ತೆರೆಮರೆಯ ಕಸರತ್ತು ಕೂಡ ನಡೆದಿದೆ.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಕಾಲದಿಂದಲೂ ಬಿಡಿಸಿಸಿ ಬ್ಯಾಂಕ್ ಮೇಲೆ ಎಂಪಿಪಿ ಕುಟುಂಬದ ಹಿಡಿತ ಇದೆ. ಮಾಜಿ ಶಾಸಕ ದಿ. ಎಂ.ಪಿ. ರವೀಂದ್ರ ಅವರು ಕೂಡ ಬ್ಯಾಂಕ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ಹಾದಿಯಲ್ಲಿ ಈಗ ಇತರ ಸಹಕಾರ ಸಂಘಗಳ ಕ್ಷೇತ್ರದಿಂದ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಗೆದ್ದ ಮಾರನೇ ದಿನದಿಂದಲೇ ಅಧ್ಯಕ್ಷ ಹುದ್ದೆಗಾಗಿ ಅವರು ಲಾಬಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯೂ ಈ ಬಗ್ಗೆ ಚರ್ಚಿಸಿದ್ದಾರೆ. ಈಗ ಸರ್ಕಾರದ ನಡೆಯ ಮೇಲೂ ಈ ಚುನಾವಣೆ ಗಮನ ಸೆಳೆದಿದೆ.
ಮತಗಳು 17 ಆಗಬಹುದು?:
ಮತದಾನ ಪ್ರಕ್ರಿಯೆ ಹೇಗೆ?:
ಸೇವೆಗೆ ಸಿದ್ಧ: ಸಹಕಾರ ರಂಗಕ್ಕೂ ನಮ್ಮ ಕುಟುಂಬಕ್ಕೂ ಮೊದಲಿನಿಂದಲೂ ನಂಟಿದೆ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಹುದ್ದೆ ಆಕಾಂಕ್ಷಿಯಾಗಿರುವೆ. ನನ್ನ ಸಹೋದರ ದಿ. ಎಂ.ಪಿ. ರವೀಂದ್ರರಂತೆ ಸಹಕಾರ ರಂಗದಲ್ಲಿ ಸೇವೆ ಮಾಡುವ ಆಶಯ ಇದೆ ಎನ್ನುತ್ತಾರೆ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ.