ಗ್ಯಾಸ್‌ ಟ್ರಬಲ್‌ ಇಲ್ಲಂದ್ರೆ ಬುಕ್ಕಿಂಗ್‌ ಯಾಕೆ ಆಗುತ್ತಿಲ್ಲ?

KannadaprabhaNewsNetwork |  
Published : Mar 14, 2026, 02:15 AM IST
ಮದಮದಮದಮ | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಅತ್ತ ಸಭೆ ನಡೆಸಿ ಗ್ಯಾಸ್‌ ಸಮಸ್ಯೆಯಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪದೇ ಪದೇ ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಸಮಸ್ಯೆ ಇಲ್ಲಂದ್ರೆ ಗೃಹ ಬಳಕೆ ಗ್ಯಾಸ್‌ ಬುಕ್ಕಿಂಗ್‌ ಏಕೆ ಆಗುತ್ತಿಲ್ಲ.

ಹುಬ್ಬಳ್ಳಿ:

ವಾಣಿಜ್ಯ ಸಿಲಿಂಡರ್‌ ಪೂರೈಕೆ ಸ್ಥಗಿತದಿಂದ ಹೋಟೆಲ್‌ ವ್ಯವಸ್ಥೆ ಅಸ್ತವ್ಯಸ್ತವಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಗೃಹ ಬಳಕೆ ಸಿಲಿಂಡರ್‌ ಹೋಟೆಲ್‌ಗಳಲ್ಲಿ ಬಳಕೆ ಆರೋಪ. ಸರಬರಾಜು ಇದ್ದರೂ ಸಿಲಿಂಡರ್‌ ಕಾಯ್ದಿರಿಸಲು ಸರ್ವರ್‌ ಕಿರಿಕಿರಿ ಮಗದೊಂದು ಕಡೆ. ಗ್ಯಾಸ್‌ ಟ್ರಬಲ್‌ನಿಂದ ಗ್ಯಾಸ್‌ ಏಜೆನ್ಸಿಗೆ ಮುತ್ತಿಗೆ.. ಗ್ಯಾಸ್‌ ಸಮಸ್ಯೆಯಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ.

ಇವೆಲ್ಲವೂ ನಗರ ಸೇರಿದಂತೆ ಜಿಲ್ಲಾದ್ಯಂತ ಗ್ಯಾಸ್‌ ಟ್ರಬಲ್‌ನಿಂದ ಕಂಡು ಬಂದಿರುವ ಬೆಳವಣಿಗೆಗಳು. ಜಿಲ್ಲಾಧಿಕಾರಿ ಅತ್ತ ಸಭೆ ನಡೆಸಿ ಗ್ಯಾಸ್‌ ಸಮಸ್ಯೆಯಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪದೇ ಪದೇ ಸ್ಪಷ್ಟನೆ ನೀಡುತ್ತಲೇ ಇದ್ದಾರೆ. ಸಮಸ್ಯೆ ಇಲ್ಲಂದ್ರೆ ಗೃಹ ಬಳಕೆ ಗ್ಯಾಸ್‌ ಬುಕ್ಕಿಂಗ್‌ ಏಕೆ ಆಗುತ್ತಿಲ್ಲ. 25 ದಿನ ಅಲ್ಲ. ಸಿಲಿಂಡರ್‌ ಪಡೆದು ಒಂದೂವರೆ ತಿಂಗಳಾದರೂ ಬುಕ್ಕಿಂಗ್‌ ಆಗುತ್ತಿಲ್ಲ ಎಂದರೆ ಏನರ್ಥ ಎಂಬ ಪ್ರಶ್ನೆ ಗ್ರಾಹಕರದ್ದು. ಆದರೆ ಇದಕ್ಕೆ ಏಜೆನ್ಸಿಯವರ ಬಳಿಯೂ ಉತ್ತರವಿಲ್ಲ.ನಾಲ್ಕು ದಿನಗಳಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡು ಹೋಟೆಲ್ ಉದ್ಯಮ ಬಹುತೇಕ ಸ್ತಬ್ಧಗೊಂಡಿದೆ. ಜಿಲ್ಲೆಯಲ್ಲಿ 53 ಗ್ಯಾಸ್ ಏಜೆನ್ಸಿಗಳಿಂದ ಶುಕ್ರವಾರ ಕೇವಲ 800 ವಾಣಿಜ್ಯ ಸಿಲೆಂಡರ್‌ ಮಾತ್ರ ಸಂಗ್ರಹವಿದ್ದು ಶನಿವಾರ ಖಾಲಿಯಾಗಲಿದೆ. ಹೀಗಾಗಿ ಬಹುತೇಕ ಹೋಟೆಲ್‌ಗಳು ಕಟ್ಟಿಗೆ ಬಳಸಿ ತಕ್ಕಮಟ್ಟಿಗೆ ವ್ಯವಹಾರ ಮುಂದುವರಿಸಿದ್ದು ಕಂಡು ಬಂತು

ಪೂರೈಕೆ ಇದ್ದರೂ ಜನರ ಆತಂಕ:

ಮನೆ ಬಳಕೆ ಸಿಲಿಂಡರ್ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ಜಿಲ್ಲೆಯಲ್ಲಿ 12,001 ಗ್ರಾಹಕ ಸಿಲಿಂಡರ್‌ ಸಂಗ್ರಹವಿದ್ದು ನಿತ್ಯ 10897 ಸಿಲಿಂಡರ್‌ ಸೇಲ್ ಆಗುತ್ತಿವೆ. ದೈನಂದಿನವಾಗಿ ಲೋಡ್‌ಗಳು ಬರುತ್ತಲೇ ಇವೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ. ಜನರು ಅನಗತ್ಯ ಭಯಪಡಬಾರದು ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ವಿನೋದ ಹೆಗ್ಗಳಗಿ ಮನವಿ ಮಾಡಿದ್ದಾರೆ.

ಗ್ರಾಹಕರ ಪರದಾಟ:

ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್‌ ಸಮಸ್ಯೆಯಾಗುತ್ತಿದ್ದು ಗ್ರಾಹಕರು ಆಕ್ರೋಶಗೊಂಡು ಅರವಿಂದ ನಗರದ ಗ್ಯಾಸ್ ಏಜೆನ್ಸಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಮಗೆ ಸಿಲಿಂಡರ್‌ ಬೇಕೆಬೇಕು ಎಂದು ಏಜೆನ್ಸಿ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿಲಿಂಡರ್‌ ಹಿಡಿದುಕೊಂಡು ಏಜೆನ್ಸಿ ಎದುರು ಬಿಸಿಲನ್ನು ಲೆಕ್ಕಿಸದೆ ಕಾದು ಕುಳಿತಿದ್ದರು. ಆದರೆ ಸಿಲಿಂಡರ್‌ ದೊರಕದೆ ಇದ್ದಾಗ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಇವರನ್ನು ಸಮಾಧಾನಪಡಿಸಲು ಸಿಬ್ಬಂದಿ ಹರಸಾಹಸಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಕ್ಷೇತ್ರದಲ್ಲಿ ಕೊಪ್ಪಳ ರಾಜ್ಯಕ್ಕೆ ಮಾದರಿ : ರಮೇಶ ಬನ್ನಿಕೊಪ್ಪ
ತೊಡೆ ತಟ್ಟಿ ಮಣ್ಣು ಮುಕ್ಕಿಸಿದ ಪೈಲ್ವಾನರು!