ಕುಕನೂರು: ದೇವಸ್ಥಾನಗಳಲ್ಲಿ ಮಲ ಮೂತ್ರ ಮಾಡುವ ನಾಯಿ ಗರ್ಭ ಗುಡಿವರೆಗೆ ಹೋಗಿ ಬರುತ್ತವೆ. ಅಲ್ಲದೇ ನಾಯಿ, ಬೆಕ್ಕುಗಳನ್ನು ತಮ್ಮ ಮಲಗುವ ಬೆಡ್ ಮೇಲೆ ಮಲಗಿಸಿಕೊಳ್ಳುತ್ತಾರೆ. ಆದರೆ ಶೋಷಿತ ವರ್ಗದ ಜನರಿಗೆ ದೇವಸ್ಥಾನ, ಮನೆ ಪ್ರವೇಶ ಇಲ್ಲವೆಂಬುದು ನ್ಯಾಯವೇ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.
ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ.ಚುನಾವಣೆಗೆ ಕೋಟಿ ಗಟ್ಟಲೆ ಖರ್ಚು ಮಾಡುತ್ತಾರೆ.ನಂತರ ಗೆದ್ದವರ ಬ್ಲೇಡ್ ಹಾಕುವ ಕಾರ್ಯ ಮಾಡುತ್ತಾರೆ.ವಿಚಾರವಂತರು ರಾಜಕೀಯಕ್ಕೆ ಬರಬೇಕು ಎಂಬುದು ಇದೆ. ಆದರೆ ಸದ್ಯ ಜಾತಿ,ಧರ್ಮ,ಹಣದ ಮೇಲೆ ರಾಜಕೀಯ ಇದೆ,ಇದು ಬದಲಾವಣೆ ಆಗದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದರು.
33% ಮಹಿಳೆಯರಿಗೆ ರಾಜಕೀಯ ಮೀಸಲಾತಿಯನ್ನು ಪ್ರಧಾನಿ ಮನಮೋಹನ ಸಿಂಗ್ ಅವಧಿಯಲ್ಲಿ ಬಿಲ್ ಪಾಸ್ ಮಾಡಲಾಗಿತ್ತು. ಸದ್ಯ ಅದನ್ನು ಜಾರಿಗೆ ತರಲಾಗುತ್ತಿದೆ. ಡಿ ಲಿಮಿಟೇಷನ್ ಕಾಯ್ದೆ ಜಾರಿಗೆ ಆಗಬಹುದು. ಇದರಿದ 300 ಕ್ಷೇತ್ರ ಹೆಚ್ಚಲಿವೆ. ಯಲಬುರ್ಗಾ ಒಂದು ಹಾಗೂ ಕುಕನೂರು ಒಂದು ಸಹ ಕ್ಷೇತ್ರವಾಗಬಹುದು. ಅಭಿವೃದ್ಧಿಗೆ ಜನರ ಸಹಕಾರ ಅವಶ್ಯ.ಗುದ್ನೇಶ್ವರ ದೇವಸ್ಥಾನ ಜಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ತಹಸೀಲ್ದಾರ ಕಚೇರಿ, ಕೋರ್ಟ, ಬುದ್ದ,ಬಸವ,ಅಂಬೇಡ್ಕರ್ ಭವನ ಹಾಗೂ 100 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಸ್ಥಳೀಯರು ಜಾಗ ತಮ್ಮದೆಂದು ಕೋರ್ಟ ಮೆಟ್ಟಿಲೇರಿದ್ದಾರೆ. ಅವರ ವಾದ ಖುಲಾಸೆ ಆಗಬಹುದು. ದೇವಸ್ಥಾನ ಜಾಗ ಯಾರ ಸ್ವಂತದ್ದು ಅಲ್ಲ.ಹಾಗಿದರೆ ಅದನ್ನು ನಾನು ಸಹ ಬರೆದುಕೊಳ್ಳಬಹುದಿತ್ತಲ್ಲ, ನಾನು ಸಾರ್ವಜನಿಕರ ಒಳಿತಿಗೆ ಕಾರ್ಯ ಮಾಡುತ್ತಿದ್ದೇನೆ. ಅಭಿವೃದ್ಧಿಗಾಗಿ ಜನರು ಎಚ್ಚೆತ್ತುಕೊಳ್ಳಬೇಕು. ಇಡೀ ದೇಶದಲ್ಲಿ ಎಲ್ಲೂ ಇರದ ಮೂರು ಕೌಶಲ್ಯ ಅಭಿವೃದ್ಧಿ ಕೇಂದ್ರ ಯಲಬುರ್ಗಾ ಕ್ಷೇತ್ರಕ್ಕೆ ತಂದಿದ್ದೇನೆ. ಈಗಾಗಲೇ ಎರಡು ಮಂಜೂರಾಗಿವೆ. ಇನ್ನೊಂದು ಗುನ್ನಾಳದಲ್ಲಿ ಮಾಡುತ್ತೇನೆ ಎಂದರು.ತಹಸೀಲ್ದಾರ ಬಸವರಾಜ ಬೆಣ್ಣೆಶಿರೂರು, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಪಪಂ ಅಧ್ಯಕ್ಷೆ ಲೀಲಾವತಿ ಮೂಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಪಪಂ ಸದಸ್ಯ ರಾಮಣ್ಣ ಬಂಕದಮನಿ, ಉಪನ್ಯಾಸಕ ನೀಡಲು ಆಗಮಿಸಿದ ನಿವೃತ್ತ ಉಪನ್ಯಾಸಕ ಕೆ.ಆರ್.ದುರ್ಗಾದಾಸ, ವೈ.ಎನ್.ಗೌಡರ, ಪರಶುರಾಮ ಸಕ್ರಣ್ಣನವರ, ರಮೇಶ ಶಾಸ್ತ್ರೀ, ನಿಂಗಪ್ಪ ಗೊರ್ಲೆಕೊಪ್ಪ, ನಾಗಪ್ಪ ಕಲ್ಮನಿ, ಸಾವಿತ್ರಿ ಗೊಲ್ಲರ, ಫರೀದಾ ಬೇಗಂ, ಲಕ್ಷ್ಮಣ ಕಾಳಿ, ಸಂಜೀವಪ್ಪ ಇಟಗಿ, ಯಮನೂರಪ್ಪ ಗೊರ್ಲೆಕೊಪ್ಪ, ಶಿವಪ್ಪ ಭಂಡಾರಿ, ಲಕ್ಷ್ಮಣ ಬಾರಿಗಿಡದ, ಫೀರಸಾಬ್ ದಫೇದಾರ, ಶರಣಪ್ಪ ವೀರಾಪೂರ, ಸಮಾಜ ಕಲ್ಯಾಣ ಇಲಾಖೆಯ ನೋಡಲ್ ಅಧಿಕಾರಿ ವಿಜಯಕುಮಾರ ಇತರರಿದ್ದರು.