ಡಾ.ಅಂಬೇಡ್ಕರ ಭಾರತ ಬೆಳಗುವ ಸೂರ್ಯ

KannadaprabhaNewsNetwork |  
Published : Apr 15, 2026, 02:30 AM IST
14ಕೆಕೆಆರ್2:ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ  ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತಿ ಆಚರಿಸಲಾಯಿತು. ಮಾಜಿ ಸಚಿವ ಹಾಲಪ್ಪ ಆಚಾರ್ ಹಾಗು ಗಣ್ಯರಿದ್ದರು.  | Kannada Prabha

ಸಾರಾಂಶ

ಬಾಬು ಜಗಜೀವನ ರಾಮ್ ಕೃಷಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಕುಕನೂರು: ಭಾರತ ಬೆಳಗುವ ಸೂರ್ಯ ಡಾ. ಬಿ.ಆರ್ ಅಂಬೇಡ್ಕರ್ ಆಗಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತಿ ಆಚರಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಕೇವಲ ಒಂದು ಸಮುದಾಯದ ನಾಯಕರಲ್ಲ, ಅವರು ಇಡೀ ಭಾರತದ ಆಸ್ತಿ. ದೇಶಕ್ಕೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಭದ್ರ ಬುನಾದಿ ಹಾಕಿಕೊಟ್ಟ ಸಂವಿಧಾನ ಶಿಲ್ಪಿ. ಅವರ ತತ್ವಗಳು ಇಂದಿಗೂ ನಮಗೆ ದಾರಿದೀಪ. ಇಡೀ ಭಾರತಕ್ಕೆ ಬೆಳಕು ನೀಡುವ ಸೂರ್ಯ ಆಗಿದ್ದಾರೆ. ಅವರ ಸಂವಿಧಾನದಿಂದ ಭಾರತ ಪ್ರಜ್ವಲಿಸುತ್ತಿದೆ ಎಂದರು.

ಬಾಬು ಜಗಜೀವನ ರಾಮ್ ಕೃಷಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಅವಿಸ್ಮರಣೀಯ ಎಂದರು.

ಮುಖಂಡ ಮಂಜುನಾಥ ನಾಡಗೌಡರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಂಬೇಡ್ಕರ್ ಗೌರವಾರ್ಥವಾಗಿ ಕೈಗೊಂಡಿರುವ ಕಾರ್ಯ ಶ್ಲಾಘಿಸಿದರು.

ಬಾಬಾಸಾಹೇಬರ ಜೀವನದ ಪ್ರಮುಖ ಘಟ್ಟ ನೆನಪಿಸುವ ಐದು ಸ್ಥಳಗಳನ್ನು ಪಂಚತೀರ್ಥಗಳನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ಬಿಜೆಪಿ ಸರ್ಕಾರ ಅವರಿಗೆ ಸಲ್ಲಬೇಕಾದ ಅರ್ಹ ಗೌರವ ನೀಡಿದೆ. ಜಗಜೀವನ ರಾಮ್ ಸರಳತೆ ಮತ್ತು ದೇಶಭಕ್ತಿ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದರು.

ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ಮಂಡಲ ಎಸ್.ಸಿ.ಮೋರ್ಚಾ ಅಧ್ಯಕ್ಷ ಸಿದ್ದು ಮಣ್ಣಿನವರ, ಹಂಚ್ಯಾಳಪ್ಪ ತಳವಾರ, ಶರಣಪ್ಪ ಬಣ್ಣದಭಾವಿ, ಶಿವಕುಮಾರ ನಾಗಲಾಪುರಮಠ, ಕರಬಸಯ್ಯ ಬಿನ್ನಾಳ, ವಿರೇಶ ಸಬರದ, ಜಗದೀಶ ಸೂಡಿ, ಮಂಜುನಾಥ ಚನ್ನಪ್ಪನಹಳ್ಳಿ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಮಹಾಂತೇಶ ಹೂಗಾರ, ಸುರೇಶ ಬಳೂಟಗಿ, ಲಕ್ಷ್ಮಣ ಕಾಳಿ, ಬಸವರಾಜ ಹಾಳಕೇರಿ, ಮಂಜುನಾಥ ಮಾಲಗಿತ್ತಿ, ಕಳಕೇಶ ಹಟ್ಟಿಕಟಗಿ, ನಾಗಪ್ಪ ಸಾಲಮನಿ, ಸುರೇಶ ಬಳಗೇರಿ, ಪಪಂ ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ಶಿವರಾಜಗೌಡ ಯಲ್ಲಪ್ಪಗೌಡ್ರು, ಮಲ್ಲಿಕಾರ್ಜುನ ಚೌದ್ರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್‌ ವ್ಯಕ್ತಿಯಲ್ಲ ಜಗತ್ತಿನ ಶಕ್ತಿ
ನಾಯಿ, ಬೆಕ್ಕುಗಳಿಗಿಲ್ಲದ ಮೈಲಿಗೆ ಮನುಷ್ಯರಿಗೆ ಏಕೆ?