ಧಾರವಾಡ:
ಸಾಮಾನ್ಯವಾಗಿ ಮುಖ್ಯಮಂತ್ರಿ, ಸಚಿವರು, ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಅಥವಾ ಜೀವ ಬೆದರಿಕೆ ಇರುವ ಪ್ರಮುಖರಿಗೆ ಬೆಂಗಾವಲು ವಾಹನ ನೀಡಲಾಗುತ್ತದೆ. ಆದರೆ, ಶಾಸಕರು ನವಲಗುಂದ, ಧಾರವಾಡ ಸೇರಿದಂತೆ ತಾವು ಹೋದೆಲ್ಲೆಲ್ಲ ಬೆಂಗಾವಲು ವಾಹನ ಬಳಸುತ್ತಾರೆ. ಶಾಸಕರುಗಳಿಗೆ ಬೆಂಗಾವಲು ವಾಹನ ನೀಡುವಂತಿಲ್ಲ. ಇದು ಅಧಿಕಾರ ದುರ್ಬಳಿಕೆಯಾಗಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮಾಬುಸಾಬ್ ಯರಗುಪ್ಪಿ ನವಲಗುಂದ ತಹಸೀಲ್ದಾರ್ ಸೇರಿದಂತೆ ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೂ ಪತ್ರ ಬರೆಯುವ ಮೂಲಕ ದೂರು ನೀಡಿದ್ದರು.
ಈ ಆರೋಪದ ಹಿನ್ನೆಲೆಯಲ್ಲಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿರುವ ಎನ್.ಎಚ್. ಕೋನರಡ್ಡಿ, ಸಣ್ಣ ವಿಚಾರ ಹಾಗೂ ಸಣ್ಣ ವ್ಯಕ್ತಿಗಳ ಆರೋಪಕ್ಕೆ ಉತ್ತರ ನೀಡುವುದಿಲ್ಲ. ಆದರೆ, ನಾನೊಬ್ಬ ರೈತ ಹೋರಾಟಗಾರ ಹಾಗೂ ಜನಪ್ರತಿನಿಧಿ. ಸಾವಿರಾರು ರೈತರು ಭಾಗವಹಿಸುವ ಕಾರ್ಯಕ್ರಮ ಸೇರಿದಂತೆ ಅನೇಕ ಸಮಾವೇಶಗಳಿಗೆ ಹೋಗಿರುತ್ತೇನೆ. ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಿದ್ದಾಗಲೂ ಎಲ್ಲಿಯೂ ಗದ್ದಲ-ಗೊಂದಲ ಆಗಬಾರದು ಎಂಬ ಕಾರಣದಿಂದ ನನ್ನ ಜೊತೆ ಪೊಲೀಸ್ ವಾಹನ ಬಂದಿರುತ್ತದೆ. ಅದು ಅವರ ಕರ್ತವ್ಯ ಕೂಡಾ. ನಾನಾಗಿಯೇ ಬೆಂಗಾವಲು ವಾಹನಕ್ಕಾಗಿ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕರಾದ ಎನ್ಎಚ್ ಕೋನರೆಡ್ಡಿ ಅವರಿಗೆ ಯಾವ ಸಂದರ್ಭದಲ್ಲಿ ಬೆಂಗಾವಲು ವಾಹನ ಕೊಡಲಾಗಿದೆ, ದೂರು ನೀಡಿದವರು ಯಾವ ಸಂದರ್ಭದಲ್ಲಿ ಅದನ್ನು ದಾಖಲಿಸಿ ದೂರು ನೀಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಈ ಬಗ್ಗೆ ತನಿಖೆ ನಡೆಸಿ ನಂತರ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲಾಗುವುದು. ಗುಂಜನ ಆರ್ಯ ಎಸ್ಪಿ