ಈಶ್ವರ ಶೆಟ್ಟರ
ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಅವಿಭಜಿತ ವಿಜಯಪುರ ಜಿಲ್ಲೆಯ ಮಹಿಳೆಯನ್ನು ಘೋಷಿಸುವ ಮೂಲಕ ಚುನಾವಣಾ ತಂತ್ರ ಬದಲಿಸಲು ಹೊರಟಂತೆ ಕಾಣುತ್ತಿದೆ. ಆದರೆ, ಸ್ಥಳೀಯ ಆಕಾಂಕ್ಷಿಗಳನ್ನು ಬದಿಗಿಟ್ಟು, ಮುಖಂಡರ ವಿಶ್ವಾಸ ಪಡೆಯದೇ ಅಭ್ಯರ್ಥಿ ಆಯ್ಕೆ ಮಾಡಿರುವುದು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಕಳೆದ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರನ್ನು ಬದಿಗಿರಿಸಿ ವಿಜಯಪುರದ ಸಂಯುಕ್ತಾ ಪಾಟೀಲ ಅವರನ್ನು ಪಕ್ಷ ಅಭ್ಯರ್ಥಿ ಮಾಡಲು ಹೊರಟಿರುವುದು ಸಹಜವಾಗಿಯೇ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಮಾತ್ರವಲ್ಲ, ಕ್ಷೇತ್ರದಲ್ಲಿರದ ವ್ಯಕ್ತಿಯ ಹೆಸರನ್ನು ಇಲ್ಲಿಗೆ ತಂದು ಸ್ಪರ್ಧೆ ಮಾಡುವಂತೆ ಮಾಡಿರುವುದು ಆಕಾಂಕ್ಷಿಗಳಲ್ಲಿ ಮತ್ತು ಕ್ಷೇತ್ರದ ನಾಯಕರಲ್ಲಿ ದಿಗಿಲು ಕೂಡ ಮೂಡಿಸಿದೆ. ಮತ್ತೊಂದು ಕಡೆ ವೀಣಾ ಬೆಂಗಲಿಗರ ಪ್ರತಿಭಟನೆ ಕೂಡ ಜೋರಾಗಿದೆ.ಕಾಣದ ಕೈಗಳ ಆಟ:
ಅತಿಯಾದ ಆತ್ಮವಿಶ್ವಾಸ:
ದೆಹಲಿ ತಲುಪದ ವೀಣಾ ಹೆಸರು:
ಸಂಯುಕ್ತಾ ಆಯ್ಕೆ ಹಿಂದೆ ಲೆಕ್ಕಾಚಾರ:
ಒಟ್ಟಾರೆ ಸ್ಥಳೀಯರಿಗೆ ಟಿಕೆಟ್ ತಪ್ಪಿಸಿ ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿರುವ ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಹೇಗೆ ಎದುರಸಲಿದೆ ಎಂಬುದು ಸದ್ಯದ ಕುತೂಹಲ.
ಸಂಯುಕ್ತಾಗೆ ಸಿಕ್ಕ ಟಿಕೆಟ್, ವೀಣಾಗೆ ನಿರಾಸೆ
ಆದರೆ, ಇಲ್ಲಿ ಹೈಕಮಾಂಡ್ ಜಾಣ್ಮೆ ನಡೆ ಅನುಸರಿಸಿದ್ದು ಈ ಬಾರಿಯೂ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಿದೆ. ಈ ಮೂಲಕ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದೆ. ಬಾಗಲಕೋಟೆ ಕ್ಷೇತ್ರ ಸಂಯುಕ್ತಾ ಪಾಟೀಲ್‌ಗೆ ಹೊಸದು. ಆದರೆ, ಪಕ್ಷದ ಬೇರುಗಳು ಆಳವಾಗಿವೆ. ಅಲ್ಲದೆ, ಕೊನೆಯ ಗಳಿಗೆಯಲ್ಲಿ ಸಂಯುಕ್ತಾ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಮೂಲಕ ಅಂತಿಮಗೊಳಿಸಲಾಗಿದೆ. ಹೀಗಾಗಿ ವೀಣಾ ಕಾಶಪ್ಪನವರ ತೀವ್ರ ಅಸಮಾಧಾನಗೊಂಡಿದ್ದಾರೆ. ಕ್ಷೇತ್ರದಲ್ಲದವರಿಗೆ ಯಾವ ಮಾತದಂಡದ ಆಧಾರದ ಮೇಲಿಂದ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಅವರು ಪ್ರಶ್ನೆಯನ್ನೂ ಮಾಡಿದ್ದಾರೆ.
----------------ಸಾಮಾಜಿಕ ಜಾಲತಾಣಗಳಲ್ಲಿ ಕೈ ಟಿಕೆಟ್ ಜಟಾಪಟಿಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕದನ ಈಗ ಸೋಷಿಯಲ್ ಮೀಡಿಯಾಗೆ ಹೆಜ್ಜೆ ಇಟ್ಟಿದೆ. ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲ ಮತ್ತು ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪೈಪೋಟಿ ಶುರುವಾಗಿದೆ.ಸಂಯುಕ್ತಾ ಪಾಟೀಲರಿಗೆ ಕೈ ಟಿಕೆಟ್ ಫಿಕ್ಸ್ ಹಾಗೂ ವೀಣಾ ಕಾಶಪ್ಪನವರಿಗೆ ಟಿಕೆಟ್ ಮಿಸ್ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಈ ನಾಯಕರ ಬೆಂಬಲಿಗರ ನಡುವೆ ಕಿತ್ತಾಟಕ್ಕೂ ಕಾರಣವಾಗಿದೆ. ಬಾಗಲಕೋಟೆಗೆ ಹೊಸ ಭರವಸೆ ಎಂದು ಸಂಯುಕ್ತಾ ಪಾಟೀಲ ಪರ ಬೆಂಬಲಿಗರು ಬ್ಯಾಟಿಂಗ್ ಮಾಡಿದರೆ, ಗೋ ಬ್ಯಾಕ್ ಸಂಯುಕ್ತಾ ಎಂದು ವೀಣಾ ಬೆಂಬಲಿಗರು ಅಭಿಯಾನ ಶುರು ಮಾಡಿಕೊಂಡಿದ್ದಾರೆ.ಪಾಟೀಲ್ರ ಉಂಡು ಹೋಗ್ರಿ, ಬಾಗಲಕೋಟೆ ನಿಮ್ಮಂತೋರಿಗೆ ಬಿಟ್ಟಿ ಬಿದ್ದೈತಿ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ. ಅಕ್ಕನ (ವೀಣಾ) ಹನಿ ಹನಿ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಬಿಡಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈಗಲೂ ಕಾಲಮಿಂಚಿಲ್ಲ, ವೀಣಾಗೆ ಟಿಕೆಟ್ ಕೊಡಿ ಎನ್ನುವ ಬೆಂಬಲಿಗರ ಹಕ್ಕೋತ್ತಾಯ ಕೇಳಿ ಬರುತ್ತಿದೆ. ಇತ್ತ ಹೆದರಿಕೆಗೆ ಮಣಿದು ಟಿಕೆಟ್ ಬದಲಾಯಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಸಂಯುಕ್ತಾ ಬೆಂಬಲಿಗರ ತಿರುಗೇಟು ನೀಡಿದ್ದಾರೆ.